Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜೀಕನ್ನಡದಅದ್ಧೂರಿಧಾರಾವಾಹಿ ``ಜೊತೆಜೊತೆಯಲಿ`` 400ರ ಸಂಭ್ರಮ
Posted date: 20 Tue, Apr 2021 07:03:00 PM

ಜೀ಼ ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿ ``ಜೊತೆಜೊತೆಯಲಿ``400 ಕಂತುಗಳ ದಾಖಲೆ ಪ್ರಸಾರಕಂಡಿದ್ದು ಅಭೂತಪೂರ್ವಯಶಸ್ಸು ಸಾಧಿಸಿದೆ. ಟೈಟಲ್ಸಾಂಗ್ಕೂಡಾ 2.4 ಕೋಟಿಗೂ ಹೆಚ್ಚು ವೀಕ್ಷಣೆ ಕಂಡಿದ್ದು ಯಾವುದೇ ಧಾರಾವಾಹಿಯ ಟೈಟಲ್ಸಾಂಗ್ಗಿಂತಲೂ ದಾಖಲೆ ಸೃಷ್ಟಿಸಿದೆ. ಕರ್ನಾಟಕದ ನಗರ ಹಾಗೂ ಗ್ರಾಮೀಣ ಪ್ರದೇಶದ ವೀಕ್ಷಕರನ್ನೂ ಒಂದೇ ರೀತಿಯಲ್ಲಿ ಸೆಳೆದ ಈ ಧಾರಾವಾಹಿಯುವಯಸ್ಸು, ಜೀವನಶೈಲಿ ಹಾಗೂ ಅಂತಸ್ತಿನಲ್ಲಿ ಆಕಾಶ ಹಾಗೂ ಭೂಮಿಯಷ್ಟು ಅಂತರ ವಿರುವ ನಾಯಕ, ನಾಯಕಿ ಯರ ಪ್ರೇಮಕಥೆ ಎಲ್ಲರ ಮನಗೆದ್ದಿದೆ.

ಕನ್ನಡ ಕಿರುತೆರೆಯಲ್ಲಿಯೇ ಮಹತ್ವದ ಮೈಲಿಗಲ್ಲುಗಳನ್ನು ಈ ಧಾರಾವಾಹಿ ತಲುಪಿದೆ. ಮೊಟ್ಟಮೊದಲಬಾರಿಗೆ ಲಲಿತ್ಮಹಲ್ಪ್ಯಾಲೇಸ್ಹೋಟೆಲ್ನಲ್ಲಿ ಈ ಧಾರಾವಾಹಿಯ ಅದ್ಧೂರಿ ಟ್ರೈಲ ರ್ಬಿಡುಗಡೆ ಯಿಂದಲೇ ಅಪಾರ ಕುತೂಹಲ, ಜನಪ್ರಿಯತೆಪಡೆದ ಈ ಧಾರಾವಾಹಿಯ ಕಥೆಯೂ ವಿನೂತನವಾಗಿದ್ದು ತಕ್ಷಣವೇ ವೀಕ್ಷಕರನ್ನು ಸೆಳೆಯಿತು. 

ಮಧ್ಯವಯಸ್ಕಯ ಶಸ್ವಿ ಉದ್ಯಮಿ ಆರ್ಯವರ್ಧನ್, ಅನು ಸಿರಿಮನೆ ಪ್ರೇಮ ಕಥನ ಧಾರಾವಾಹಿಗಳ ಒಂದು ಹೊಸ ಪ್ರಕಾರಸೃಷ್ಟಿಸಿತು. ಆರ್ಯವರ್ಧನ್ಆಗಿ ಅನಿರುದ್ಧ ಜಟ್ಕರ್ಸಿ ನಿಮಾಗಿಂತ ಹೆಚ್ಚು ಜನಪ್ರಿಯರಾದರು. ಅನು ಸಿರಿಮನೆ ಯಾಗಿ ಮೇಘಾ ಶೆಟ್ಟಿ ಮನೆ ಮನೆ ಮಾತಾದರು. ಈ ಇಬ್ಬರ ಜೋಡಿಯೂ ಕನ್ನಡ ಕಿರುತೆರೆ ವೀಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಇವರಿಬ್ಬರ  ಪ್ರೇಮ ಕಥೆ ಶುರುವಾಗಿ ಹಲವು ಅಡ್ಡಿಆತಂಕಗಳನ್ನು ಎದುರಿಸಿ ಗೆಲ್ಲುತ್ತದೆ. ಈಗ ಆರ್ಯವರ್ಧನ್ಮದುವೆಯಾಗಲು ಅನು ಸಿರಿಮನೆ ಒಪ್ಪಿದ್ದಾಳೆ. ಆದರೆ ಅವರ ಮದುವೆ ಸುಸೂತ್ರವಾಗುತ್ತಿಲ್ಲ. ಮುಂದೇನು ನಡೆಯುತ್ತದೆ ಎನ್ನುವುದು ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಕನ್ನಡ ಕಿರುತೆರೆಯ ಇತಿಹಾಸದಲ್ಲಿಯೇ ಮೈಲಿಗಲ್ಲಿನ ದಾಖಲೆಗಳನ್ನು ಸೃಷ್ಟಿಸಿದ ಈ ಜನಪ್ರಿಯ ಧಾರಾವಾಹಿ 400 ಕಂತುಗಳು ತಲುಪಿದರೂ ಕಿಂಚಿತ್ತೂ ಜನಪ್ರಿಯತೆಕುಂದಿಲ್ಲ.

ಈ  ಧಾರಾವಾಹಿಯಲ್ಲಿ ಪ್ರಮುಖಪಾತ್ರ ನಿರ್ವಹಿಸಿರುವ  ಅನಿರುದ್ಧ ಜಟ್ಕರ್ಹಾಗೂ ಮೇಘಾ ಶೆಟ್ಟಿ ಜೋಡಿ ಮನೆ ಮನೆ ಮಾತಾಗಿದೆ. ಈ ಇಬ್ಬರದು ಅಪರೂಪದ ಜೋಡಿ. ವಯಸ್ಸು, ಅಂತಸ್ತು, ಜೀವನಶೈಲಿ  ಎಲ್ಲದರಲ್ಲೂ ಆಕಾಶ ಭೂಮಿಯಷ್ಟು ಅಂತರ ವಿದ್ದರೂ ಅವರಿಬ್ಬರ ನಡುವೆ ಚಿಗುರುವ ಪ್ರೇಮಕಥೆ ಎಲ್ಲರಿಗೂ ಇಷ್ಟವಾಗಿದೆ.  ಕನ್ನಡ ಕಿರುತೆರೆಯಲ್ಲಿ ಹೊಸ ಬಗೆಯ ಪ್ರೇಮಕಥೆಗಳನ್ನು ಬರೆಯುವಂತೆ ಈ ಧಾರಾವಾಹಿ ಪ್ರೇರೇಪಿಸಿದೆ.

ಆರೂರು ಜಗದೀಶ್ನಿರ್ದೇಶನದ ಈ ಧಾರಾವಾಹಿಯಲ್ಲಿ ನಟಿ ವಿಜಯಲಕ್ಷ್ಮಿಸಿಂಗ್ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಶಾರದಾದೇವಿ ಯಾಗಿ ನಟಿಸಿದ್ದಾರೆ.  ಅವರು ಆರ್ಯವರ್ಧನ್ತಾಯಿಯಾಗಿ ಪಾತ್ರದ ಘನತೆಯನ್ನು ಹೆಚ್ಚಿಸಿದ್ದಾರೆ.

ಜೊತೆ ಜೊತೆಯಲಿ ದ್ವಿಶತಕತಲುಪಿದ ಕುರಿತು ಜೀ಼ ಕನ್ನಡ ಬ್ಯುಸಿನೆಸ್ಹೆಡ್ರಾಘವೇಂದ್ರಹುಣಸೂರು, “ಕನ್ನಡಕಿರುತೆರೆ ವಾಹಿನಿಗಳಲ್ಲಿಯೇ ಜೊತೆ ಜೊತೆಯಲಿ ಧಾರಾವಾಹಿ ಹೊಸ ದಾಖಲೆ ಬರೆದಿದೆ. ಇದೀಗ 400 ಕಂತುಗಳನ್ನು ತಲುಪಿರುವುದು ಅದರ ಅಭೂತಪೂರ್ವ ಯಶಸ್ಸಿಗೆ ಸಾಕ್ಷಿಯಾಗಿದೆ. ಜೀ಼ ಕನ್ನಡ ವೀಕ್ಷಕರ ಅಭಿರುಚಿಗೆತಕ್ಕಂತೆ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಅದಕ್ಕೆ ವೀಕ್ಷಕರೂಸದಾಸ್ಪಂದಿಸುತ್ತಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯ ಯಶಸ್ಸುನಮಗೆ ಮತ್ತಷ್ಟು ಅಂತಹುದೇ ಕಾರ್ಯಕ್ರಮಗಳನ್ನು  ರೂಪಿಸಲು ಸ್ಫೂರ್ತಿತಂದಿದೆ”ಎಂದರು.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜೀಕನ್ನಡದಅದ್ಧೂರಿಧಾರಾವಾಹಿ ``ಜೊತೆಜೊತೆಯಲಿ`` 400ರ ಸಂಭ್ರಮ - Chitratara.com
Copyright 2009 chitratara.com Reproduction is forbidden unless authorized. All rights reserved.