ಫ್ಲಿಕ್ಕರಿಂಗ್ ಸ್ಟುಡಿಯೋಸ್ ಸುಸ್ಮಿತಾ ಸಮೀರ ಪ್ರಾರಂಭಿಸಿದ ಹೊಸ ಯುಗದ ವಿಡಿಯೋ ನಿರ್ಮಾಣ ಸಂಸ್ಥೆಯಾಗಿದೆ. ಬೆಳೆಯುತ್ತಿರುವ ಪ್ರಸ್ತುತ ತಂತ್ರಜ್ಞಾನದೊಂದಿಗೆ, ಕಂಪನಿಯು ತಮ್ಮ ಅನುಭವಗಳನ್ನು ಚಲನಚಿತ್ರ ಮಾಧ್ಯಮದ ಮೂಲಕ ನಿರೂಪಿಸುವ ಅಗತ್ಯವನ್ನು ತಿಳಿದಿದ್ದು, ಅಂತಹ ಚಿತ್ರಗಳನ್ನು ನಿರ್ಮಿಸುವ ಉತ್ಸಾಹದಲ್ಲಿದೆ. ಪ್ರತಿಯೊಬ್ಬ ಯಶಸ್ವಿ ಚಲನಚಿತ್ರ ನಿರ್ದೇಶಕನ ಹಿಂದೆ,ಕನಸುಗಳನ್ನು ಕನಸು ಕಾಣುವಂತಹ ನಿರ್ಮಾಣ ಸಂಸ್ಥೆಯಿದೆ. ಫ್ಲಿಕ್ಕರಿಂಗ್ ಸ್ಟುಡಿಯೋಸ್ ಅಂತಹ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಲು ವಿಭಿನ್ನ ಸಿನಿಮೀಯ ಪ್ರಯತ್ನಗಳನ್ನು ಮಾಡುತ್ತಿದೆ.
``ಸಂಡೇ`` ಕಿರುಚಿತ್ರ ಮತ್ತು ``ಅಭಿಜ್ಞಾನ`` ಮ್ಯೂಸಿಕ್ ವಿಡಿಯೋವನ್ನು ಸಹನಿರ್ಮಾಣ ಮಾಡಿ ಇದೀಗ ಫ್ಲಿಕ್ಕರಿಂಗ್ ಸ್ಟುಡಿಯೋ ತನ್ನದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿ, ಮೊದಲ ಪ್ರಯತ್ನವಾಗಿ ``ಡಿಯರ್ ಭಾರ್ಗವ``ಎಂಬ ಕಿರುಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಇದನ್ನು ವ್ಯಕ್ತಿತ್ವದ ಕುರಿತು ಹೋರಾಡುತ್ತಿರುವ, ತಮ್ಮವರೊಂದಿಗೆ ಮಾತನಾಡಲು ಮುಜುಗರ ಪಡುವಂಥ ಮನಸುಗಳಿಗೆ ಧೈರ್ಯ ನೀಡುವ ಉದ್ದೇಶದೊಂದಿಗೆ ರಾಮನಾಥ್ ಶಾನಭಾಗ್ ಇದನ್ನು ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ಈ ಕಿರುಚಿತ್ರದಲ್ಲಿ ಅರುಣಾ ಬಾಲರಾಜ್, ಸುಂದರ್ ಮತ್ತು ಮಹೇಶ್ ಬಂಗ್ ಪ್ರಮುಖ ಪಾತ್ರದಲ್ಲಿದ್ದು ನಟಿಸಿದ್ದಾರೆ. ಛಾಯಾಗ್ರಹಣ ಮತ್ತು ಸಂಕಲನವನ್ನು ಗುರು ಪ್ರಸಾದ್ ಮಾಡಿದ್ದು, ಉದಿತ್ ಹರಿತಾಸ್ ಅವರು ಸಂಗೀತ ನೀಡಿದ್ದಾರೆ. ಈ ಕಿರುಚಿತ್ರವನ್ನು ಎಲ್.ಜಿ.ಬಿ.ಟಿ ಸಮುದಾಯವನ್ನು ಬೆಂಬಲಿಸುವ ಉದ್ದೇಶದಿಂದ ಹೆಸರಾಂತ ಮಾನಸಿಕ ಆರೋಗ್ಯ ಸೇವಾ ಪೂರೈಕೆದಾರರಾದ ಹ್ಯಾಬಿಕೊಯಿನ್ಸ್ ಸಂಸ್ಥೆಯು ಸಹಕರಿಸಿದ್ದಾರೆ. ಮಾನಸಿಕ ಆರೋಗ್ಯ ಮತ್ತು ಎಲ್.ಜಿ.ಬಿ.ಟಿ ಜಾಗೃತಿಯ ಪ್ರಾಮುಖ್ಯತೆಯನ್ನು ಹರಡಲು ಸೈಕೋಥೆರಪಿಸ್ಟ್ ಸುನೀತಾ ಮಣಿ ಹ್ಯಾಬಿಕೊಯಿನ್ಸ್ನ ಭಾಗವಾಗಿರುವುದರಿಂದ ಈ ಕಿರುಚಿತ್ರವನ್ನು ಪ್ರಾಯೋಜಿಸಿದ್ದಾರೆ. ``ಡಿಯರ್ ಭಾರ್ಗವ`` ಕಿರುಚಿತ್ರವನ್ನು ನೀವು ಈಗ ಫ್ಲಿಕ್ಕರಿಂಗ್ ಸ್ಟುಡಿಯೋಸ್ ನ ಅಧಿಕೃತ ಯೂಟ್ಯೂಬ್ ಚಾನಲ್ನಲ್ಲಿ ವೀಕ್ಷಿಸಬಹುದು.