ಗುಜ್ಜಲ್ ಪುರುಶೋತ್ತಮ್ ನಿರ್ಮಾಣದ ನಂದ ಕಿಶೋರ್ ನಿರ್ದೇಶನದ, ಶ್ರೇಯಸ್ ಕೆ. ಮಂಜು ಅಭಿನಯದ ರಾಣ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಇತ್ತೀಚೆಗೆ ಚಿತ್ರ ತಂಡ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರನ್ನು ಬೇಟಿಮಾಡಿದಾಗ ಶಿವಣ್ಣ ಚಿತ್ರ ತಂಡಕ್ಕೆ ಹುರಿ ದುಂಬಿಸಿ ಶುಭ ಕೋರಿದರು. ಹಾಗೇ ಇದೇ ಸಂದರ್ಭದಲ್ಲಿ ನಟ ಶ್ರೇಯಸ್ ಗೆ ಶಿವಣ್ಣ ಲಾಂಗ್ ಹೇಗೆ ಹಿಡಿಬೇಕು, ಕ್ಯಾಮರಾ ಮುಂದೆ ಲಾಂಗ್ ಹಿಡಿದು ಹೇಗೆ ಅಭಿನಯಿಸಬೇಕು ಎನ್ನುವುದನ್ನು ಹೇಳಿಕೊಟ್ಟು ಚಿತ್ರ ತಂಡಕ್ಕೆ ಅಚ್ಚರಿ ಮೂಡಿಸಿದರು.