Chief Editor
Manohar. R (Manu)
Photo Journalist
chitrataramanu@gmail.com
+91 9845549026
ಈ ವಾರ ತೆರೆಗೆ ``ತಿರುಗ್ಸೋ ಮೀಸೆ``
Posted date: 07 Thu, Oct 2021 08:30:51 AM
ಶ್ರೀ ಶ್ರೀನಿವಾಸ ಮೂವೀಸ್ ಲಾಂಛನದಲ್ಲಿ ಶ್ರೀನಿವಾಸ್ ಹಾಗೂ ರಿಜ್ವಾನ್ ನಿರ್ಮಿಸಿರುವ ``ತಿರುಗ್ಸೋ ಮೀಸೆ`` ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಕರ್ನಾಟಕದಾದ್ಯಂತ ಸುಮಾರು ಮೂವತ್ತಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

 ಕೃಷ್ಣ ವಿಜಯ್ ಎಲ್ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಸುರೇಶ್ ಬೊಬ್ಬಿಲಿ ಸಂಗೀತ ನೀಡಿದ್ದಾರೆ. ಐದು ಹಾಡುಗಳು ಈ ಚಿತ್ರದಲ್ಲಿದೆ.
 ವಿ.ಮನೋಹರ್, ರಾಘವೇಂದ್ರ ಕಾಮತ್, ಆರ್ ಚಂದ್ರಶೇಖರ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ.
 ಅನುರಾಧಾ ಭಟ್, ಅನಿರುದ್ದ್, ವ್ಯಾಸರಾಜ್, ಚೇತನ್ ನಾಯಕ್, ಮೇಘನಾ ಕುಲಕರ್ಣಿ ಜೋಷಿ ಹಾಗೂ ಮಾಸ್ಟರ್ ಕುಶಾಲ್ ಸೇನಾಪತಿ ಮುಂತಾದವರ ಕಂಠಸಿರಿಯಲ್ಲಿ ಈ ಹಾಡುಗಳು ಮೂಡಿಬಂದಿದೆ.
 ಸಿದ್  ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ ಈ ಚಿತ್ರಕ್ಕಿದೆ. 

 ಶ್ರೀ ವಿಷ್ಣು ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ನಿಕ್ಕಿ ತಂಬೋಲಿ. ರೋಹಿಣಿ, ಶ್ರೀಕಾಂತ್ ಅಯ್ಯಂಗಾ ರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಈ ವಾರ ತೆರೆಗೆ ``ತಿರುಗ್ಸೋ ಮೀಸೆ`` - Chitratara.com
Copyright 2009 chitratara.com Reproduction is forbidden unless authorized. All rights reserved.