Chief Editor
Manohar. R (Manu)
Photo Journalist
chitrataramanu@gmail.com
+91 9845549026
``ಯುದ್ದ ಕಾಂಡ``ದ ಗೆಲುವು ಮಾಧ್ಯಮ ಹಾಗೂ ಪ್ರೇಕ್ಷಕರು ತೋರಿದ ಒಲವು ಅಜೇಯ್ ರಾವ್
Posted date: 25 Fri, Apr 2025 � 06:06:34 PM
ಶ್ರೀಕೃಷ್ಣ ಆರ್ಟ್ಸ್ & ಕ್ರಿಯೇಷನ್ಸ್ ಲಾಂಛನದಲ್ಲಿ ಅಜೇಯ್ ರಾವ್ ನಿರ್ಮಿಸಿ, ನಾಯಕನಾಗಿ ನಟಿಸಿರುವ "ಯುದ್ಧಕಾಂಡ" ಚಿತ್ರ ಕಳೆದ ಏಪ್ರಿಲ್ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು , ಈ ಚಿತ್ರ ನೋಡಿದವರು ಮೆಚ್ಚುಗೆಯ ಮಹಾಪೂರವನ್ನೇ ಹರಸುತ್ತಿದ್ದಾರೆ ಹಾಗಾಗಿ ಈ ಸಂತಸವನ್ನು ಅಜೇಯ್ ರಾವ್ ಹಾಗೂ ಚಿತ್ರತಂಡದವರು ಸಕ್ಸಸ್ ಮೀಟ್ ನಲ್ಲಿ ಹಂಚಿಕೊಂಡರು.
 
ನಾನು ಮೊದಲು ಧನ್ಯವಾದ ಹೇಳಬೇಕಿರುವುದು ಮಾಧ್ಯಮ ಮಿತ್ರರಿಗೆ. ನಮ್ಮ ಚಿತ್ರ ಜನರಿಗೆ ಇಷ್ಟು ತಲುಪಿದೆ ಎಂದರೆ ಅದಕ್ಕೆ ನೀವೇ ಕಾರಣ ಎನ್ನುತ್ತಾ .. ನಮ್ಮ ಚಿತ್ರವನ್ನು ಈವರೆಗೂ ನೋಡಿರುವ ಒಬ್ಬ ಪ್ರೇಕ್ಷಕರಿಂದ ಸಹ ನಮ್ಮ ಚಿತ್ರದ ಬಗ್ಗೆ ನೆಗೆಟಿವ್ ಮಾತು ಬಂದಿಲ್ಲ ಎಲ್ಲರು 100% ಮೆಚ್ಚಿಕೊಂಡಿದ್ದಾರೆ. ಪ್ರೇಕ್ಷಕರು ನನ್ನ ಚಿತ್ರದ ಬಗ್ಗೆ ಆಡಿರುವ ಪಾಸಿಟಿವ್ ಮಾತುಗಳೇ ನನಗೆ ಇಂದು ಎನರ್ಜಿಯಾಗಿದೆ. ಈ ಚಿತ್ರ ಜನರ ಮನಸ್ಸಿಗೆ ಬಹಳ ಹತ್ತಿರವಾಗಿದೆ ಅಂತ ಹೇಳಬಹುದು. ಅಜೇಯ್ ರಾವ್ ಇಂತಹ ಚಿತ್ರ ಮಾಡಿದ್ದ ಅಂತ ನಾನು ಹೋದ ಮೇಲು ನೆನಪಿಸಿಕೊಳ್ಳುವ ಚಿತ್ರ "ಯುದ್ದಕಾಂಡ" ವಾಗಿದೆ. 
ಚಿತ್ರ ಮೂರು‌ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದೆ. ನಮ್ಮ ಜನರು ನೂರು ದಿನಗಳ ತನಕ ಈ ಚಿತ್ರವನ್ನು ತೆಗೆದುಕೊಂಡು ಹೋಗುತ್ತಾರೆ ಎಂಬ ನಂಬಿಕೆ ಇದೆ. ಚಿತ್ರ ನೋಡಿದವರು ಅವರ ಸ್ನೇಹಿತರಿಗೂ ಈ ಸಿನಿಮಾ ನೋಡುವಂತೆ ಹೇಳುತ್ತಿದ್ದಾರೆ. ಈ ಚಿತ್ರವನ್ನು ಮೊದಲು ನೋಡಿ ಬಿಡುಗಡೆಗೆ ಸಹಕರಿಸಿ ನನ್ನ ಜೊತೆಯಾಗಿ ನಿಂತವರು ನಟ ಯಶ್ ಅವರನ್ನು ಇಂತಹ ಸಂದರ್ಭದಲ್ಲಿ ನಾನು ಮರೆಯುವಂತಿಲ್ಲ. "ಯುದ್ದಕಾಂಡ" ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಜೊತೆಗೆ ಚಿತ್ರದ ಮೊದಲ ಟಿಕೇಟ್ ಗೆ ಹಣ ನೀಡಿ ರವಿಚಂದ್ರನ್ ಸರ್ ನನಗೆ ಹಾರೈಸಿ ಮತ್ತು ಸದ್ಯದಲ್ಲೇ ಕುಟುಂಬ ಸಮೇತ ಚಿತ್ರ ನೋಡುವುದಾಗಿ ಹೇಳಿದ್ದಾರೆ. 
ರಕ್ಷಿತ ಹಾಗೂ ಪ್ರೇಮ್ ಅವರು ಸಹ ಕರೆ ಮಾಡಿ ವಿಚಾರಿಸಿದ್ದಾರೆ. ನೆನಪಿರಲಿ ಪ್ರೇಮ್, ಓಂಪ್ರಕಾಶ್ ರಾವ್ ಮುಂತಾದವರು ಚಿತ್ರ ನೋಡಿ ವಿಡಿಯೋ ಸಂದೇಶದ ಮೂಲಕ ಹಾರೈಸಿದ್ದಾರೆ.
ಇವರೆಲ್ಲರಿಗೂ ಹಾಗೂ ಸದಾ ತನ್ನ ಜೊತೆಗಿರುವ ನನ್ನ ತಂಡಕ್ಕೂ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ ನಿರ್ಮಾಪಕ ಹಾಗೂ ನಟ ಅಜೇಯ್ ರಾವ್.  

ಬಿಡುಗಡೆಗೂ ‌ಮುಂಚೆ ನನಗೆ ಎಲ್ಲಾ ಆಲ್ ದಿ ಬೆಸ್ಟ್ ಹೇಳುತ್ತಿದ್ದರು. ಈಗ ಕಂಗ್ರಾಜುಲೇಷನ್ಸ್ ಹೇಳುತ್ತಿದ್ದಾರೆ. ಇದಕ್ಕಿಂತ ನನಗೆ ಇನೇನು ಬೇಕು. ಎಂದು ತಿಳಿಸಿದ ನಿರ್ದೇಶಕ ಪವನ್ ಭಟ್, ಚಿತ್ರದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿ ನಿರ್ಮಾಪಕರಾದ ಅಜೇಯ ರಾವ್ ಅವರಿಗೆ ಕೃತಜ್ಞತೆ ತಿಳಿಸಿದರು. 

ಈ ಸಿನಿಮಾ ನೋಡಿದ ನಂತರ ನನ್ನ ಹೆಂಡತಿ ಭಾವುಕರಾಗಿ ಚಿತ್ರಮಂದಿರದಿಂದಲೇ ನನಗೆ ಕರೆ ಮಾಡಿ ಪ್ರಶಂಸೆ ನೀಡಿದರು. ಮನೆಗೆ ಬಂದ ಮೇಲೆ ನಿಮ್ಮ ಪಾತ್ರ ತುಂಬಾ ಚೆನ್ನಾಗಿದೆ. ಮುಂದೆ ಈತರಹದ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳಿ ಎಂದು ಸಲಹೆ ಕೂಡ ನೀಡಿದರು. ಒಂದೊಳ್ಳೆ ಚಿತ್ರ ಮಾಡಿ ನಿರ್ಮಾಪಕರು ಹಾಗೂ ನಿರ್ದೇಶಕರು ಗೆದಿದ್ದಾರೆ. ಚಿತ್ರದ ಗೆಲುವಿಗೆ ಎಲ್ಲಕ್ಕಿಂತ ಮೌತ್ ಪಬ್ಲಿಸಿಟಿ ಬಹು ಮುಖ್ಯ. ಹಾಗಾಗಿ ಚಿತ್ರ ನೋಡಿದವರು ಹೆಚ್ಚಿನ ಜನರಿಗೆ ಈ ಚಿತ್ರದ ಬಗ್ಗೆ ಹೇಳಿ ಎಂದರು ನಟ ಪ್ರಕಾಶ್ ಬೆಳವಾಡಿ.

 ನಟಿ ಅರ್ಚನಾ ಜೋಯಿಸ್ ಕೂಡ ತಮ್ಮ‌ ಪಾತ್ರ ಹಾಗೂ ಚಿತ್ರಕ್ಕೆ ಸಿಗುತ್ತಿರುವ ಪ್ರಶಂಸೆಗೆ ಸಂತಸ ವ್ಯಕ್ತ ಪಡಿಸಿದರು. 
ಬೇಬಿ Radnya, ಛಾಯಾಗ್ರಾಹಕ ಕಾರ್ತಿಕ್ ಶರ್ಮ, ಸಂಗೀತ ನಿರ್ದೇಶಕ ಹೇಮಂತ್ ಜೋಯಿಸ್ ಹಾಗೂ ಕಲಾ ನಿರ್ದೇಶಕ ಅಮರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು. ಟಿ.ಎಸ್.ನಾಗಾಭರಣ ಅವರು ಈ ಚಿತ್ರದಲ್ಲಿ ನ್ಯಾಯಾಧೀಶರ ಪಾತ್ರದಲ್ಲಿ ಅಭಿನಯಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ಯುದ್ದ ಕಾಂಡ``ದ ಗೆಲುವು ಮಾಧ್ಯಮ ಹಾಗೂ ಪ್ರೇಕ್ಷಕರು ತೋರಿದ ಒಲವು ಅಜೇಯ್ ರಾವ್ - Chitratara.com
Copyright 2009 chitratara.com Reproduction is forbidden unless authorized. All rights reserved.