Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮೋಹಕ ನಟಿ ಸಂಹಿತಾ ವಿನ್ಯಾ ಸೌತ್ ಸಿನಿರಂಗದಲ್ಲಿ ಮಿಂಚಿಂಗು....
Posted date: 07 Wed, May 2025 06:34:07 PM
ಸದ್ಯ ಚಿತ್ರರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ  ನಟಿ ಹಾಗೂ ರೂಪದರ್ಶಿ ಸಂಹಿತಾ ವಿನ್ಯಾ ಸೂಪರ್ ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಸದ್ದಿಲ್ಲದೆ ಒಂದಷ್ಟು ಚಿತ್ರಗಳಲ್ಲಿ ಅಭಿನಯಿಸುತ್ತ ಬಂದಿರುವ ಸಂಹಿತಾ ಅಭಿನಯದ, ರಿಲೀಸ್ ಹಂತದಲ್ಲಿರುವ ಮಿಕ್ಸಿಂಗ್ ಪ್ರೀತಿ ಚಿತ್ರವೀಗ  ತನ್ನ ಹಾಡಿನಿಂದಲೇ ದೊಡ್ಡದಾಗಿ ಸದ್ದು ಮಾಡುತ್ತಿದೆ. ನಾಯಕಿ ಸಂಹಿತಾ, ಸಿಂಟೋ ಅಭಿನಯದ `ಬಾರೆ ನನ್ನ ಹೀರೋಯಿನ್, ನಾನೆ ನಿನ್ನ ಶಾರುಖ್ ಖಾನ್` ಎಂಬ ಮಾಸ್ ಹಾಡು ಸಖತ್ ವೈರಲ್ ಆಗಿದೆ.  ಇದರಲ್ಲಿ ಸಂಹಿತಾ ಅವರ ಅದ್ಭುತ ಪರ್  ಫಾರ್ಮನ್ಸ್ ಗೆ  ಪಡ್ಡೆ ಹುಡುಗರು ಮನಸೋತಿದ್ದಾರೆ. ಇದಲ್ಲದೆ ತೆರೆಗೆ ಬರಲು  ಸಿದ್ದವಾಗಿರುವ ಬಹು ನಿರೀಕ್ಷಿತ `ಮೆಜೆಸ್ಟಿಕ್ -2` ಚಿತ್ರದಲ್ಲೂ ಸಂಹಿತಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 
 
ಹಾಲು ತುಪ್ಪ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಂಹಿತಾ ನಾಯಕಿ ಪ್ರಧಾನ ಸೀತಮ್ಮ ಬಂದ್ಲು ಸಿರಿಮಲ್ಲಿಗೆ ತೊಟ್ಟು ನಾಯಕಿ ಪ್ರಧಾನ  ಚಿತ್ರದಲ್ಲಿ ತನ್ನ ಅತ್ಯುತ್ತಮ ಅಭಿನಯದಿಂದ  ಪ್ರೇಕ್ಷಕರ ಹಾಗೂ ವಿಮರ್ಶಕರ ಪ್ರಶಂಸೆ ಗಳಿಸಿದ್ದರು. ಅಲ್ಲದೆ ಅಮೃತ ಘಳಿಗೆ, ವಿಷ್ಣು ಸರ್ಕಲ್, ನಸಾಬ್, ಮಿಕ್ಸಿಂಗ್ ಪ್ರೀತಿ, ಸ್ವಾಭಿಮಾನಿ ಅಲ್ಲದೆ ತೆಲುಗು, ತಮಿಳು ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವ ಸಂಹಿತಾ ವಿನ್ಯಾಗೆ ಪಕ್ಕದ ಟಾಲಿವುಡ್, ಬಾಲಿವುಡ್ ನಿಂದಲೂ ತುಂಬಾ ಕರೆಗಳು ಬರುತ್ತವೆ. 
 
ಜತೆಗೆ 75ಕ್ಕೂ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಫ್ಯಾಷನ್ ಷೋಗಳಲ್ಲಿ ಭಾಗವಹಿಸಿರುವ ಸಂಹಿತಾ ವಿನ್ಯಾಗೆ ಫ್ಯಾಷನ್ ಡಿಸೈನರ್ ಆಗಿ ಫಾರೆವರ್ ನವೀನ್ ಕುಮಾರ್ ಅವರು ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ, ಮಾಡೆಲಿಂಗ್ ಎರಡರಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿರುವ ಅಚ್ಚಕನ್ನಡದ ಪ್ರತಿಭೆ ಸಂಹಿತಾ ಆದಷ್ಟು ಬೇಗನೇ ಸೌತ್ ಫಿಲಂ ಇಂಡಸ್ಟ್ರಿಯ ಸ್ಟಾರ್ ನಟಿಯರಲ್ಲಿ ಒಬ್ಬರಾಗುವ ಎಲ್ಲಾ ಲಕ್ಷಣಗಳಿವೆ..
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೋಹಕ ನಟಿ ಸಂಹಿತಾ ವಿನ್ಯಾ ಸೌತ್ ಸಿನಿರಂಗದಲ್ಲಿ ಮಿಂಚಿಂಗು.... - Chitratara.com
Copyright 2009 chitratara.com Reproduction is forbidden unless authorized. All rights reserved.