ಚೌಮುದ ಬ್ಯಾನರ್ ನಡಿ ಜಯರಾಮ ಸಿ.ಮಾಲೂರು ಅವರು ಮೊದಲ ಬಾರಿಗೆ ಸಿನಿಮಾ ನಿರ್ಮಾಣ ಮಾಡಿದ್ದು, ರಾಜರತ್ನಾಕರ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಟ್ರೇಲರ್ ರಿಲೀಸ್ ಆಗಿದ್ದು, ಚಂದನ್ ರಾಜ್ ಪಕ್ಕಾ ಉಡಾಳನಾಗಿ ಕಾಣಿಸಿಕೊಂಡಿದ್ದಾರೆ. ದುಡಿಬೇಕು ಅನ್ನೋದೆಲ್ಲ ಏನಿಲ್ಲ. ದುಡ್ ಮಾಡ್ಬೇಕು ಅಷ್ಟೇ. ಅದು ಫ್ಯಾಮಿಲಿನ ಇಕ್ಕಟ್ಟಿಗೆ ಸಿಲುಕಿಸಿಯಾದರೂ ಸರಿ ಎಂಬ ಬುದ್ದಿ ಇರುವವನೇ ನಾಯಕ ನಟ.
ಸಿನಿಮಾದ ನಾಯಕಿಯಾಗಿ ಅಪ್ಸರಾ ಕಾಣಿಸಿಕೊಂಡಿದ್ದಾರೆ. ಆದರೆ ಅಪ್ಸರಾ ಸಿನಿಮಾ ರಿಲೀಸ್ ಗೂ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ. ಇಡೀ ತಂಡ ಅಪ್ಸರಾ ಅವರಿಗೆ ಕಂಬನಿ ಮಿಡಿದಿದೆ. ಅಪ್ಸರಾ ಪರವಾಗಿ ಅವರ ತಂದೆ ಮಾತನಾಡಿ, ಮಗಳಿಗಿದ್ದ ಕನಸಿನ ಬಗ್ಗೆ ಹಂಚಿಕೊಂಡಿದ್ದಾರೆ.
ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ವಿರೇಶ್ ಬೊಮ್ಮಸಾಗರ, ಚಿತ್ರರಂಗಕ್ಕೆ ಬಂದು 10-12 ವರ್ಷ ಆಗಿದೆ. ಆದರೆ ಇದು ನನ್ನ ಮೊದಲ ಸಿನಿಮಾ. ಇದು ಎಲ್ಲರಿಗೂ ಆಪ್ಟ್ ಆಗುವ ಕಥೆ. ಎಲ್ಲರ ಮನೆಯಲ್ಲೂ ಇಂಥೊಬ್ಬ ಇರ್ತಾನೆ. ಹೀಗಾಗಿ ಎಲ್ಲರಿಗೂ ಸಿನಿಮಾ ಇಷ್ಟವಾಗುತ್ತೆ ಎಂದಿದ್ದಾರೆ.
ನಿರ್ಮಾಪಕ ಜಯರಾಮ್ ಅವರು ವೃತ್ತಿಯಲ್ಲಿ ರೈತನಾಗಿದ್ದು, ಈಗ ಸಿನಿಮಾ ಮಾಡಿದ್ದಾರೆ. ನಾನು ಈ ಸಿನಿಮಾ ಮಾಡುವುದಕ್ಕೆ ಕಾರಣ ಈ ಕಥೆ. ತಾಯಿ, ಮಗ, ಫ್ರೆಂಡ್, ಲವ್ವರ್ ಎಲ್ಲಾ ಪಾತ್ರದಲ್ಲೂ ಎಮೋಷನಲ್ ಇದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನಾಯಕ ಚಂದನ್ ಮಾತನಾಡಿ, ಈ ಸಿನಿಮಾದಲ್ಲಿ ಈ ರೀತಿಯ ಕಥೆ ನಂಗೆ ಸಿಕ್ಕಿರೋದು ಅದೃಷ್ಟ. ನಮ್ಮ ನೇಟಿವಿಟಿ ಕಥೆಗಳನ್ನ ಮಾಡಬೇಕು ಎಂಬುದು ನನ್ನ ಆಸೆಯಾಗಿತ್ತು. ಬಿಕಾಸ್ ನಾನು ಬೆಂಗಳೂರಿನ ಹುಟ್ಟಿ ಬೆಳೆದ ಕಾರಣ ಇಲ್ಲಿನ ಕಥೆಯನ್ನೇ ಮಾಡಬೇಕು ಎಂದುಕೊಂಡಿದ್ದೆವು ಎಂದಿದ್ದಾರೆ.
ತಾಯಿ ಪಾತ್ರ ಮಾಡಿರುವ ಯಮುನಾ ಶ್ರೀನಿಧಿ ಮಾತನಾಡಿ, ವಿರೇಶ್ ಸರ್ ನಂಗೆ ವಿವರಿಸಿದ ರೀತಿಗೆ ನಾನು ಸಿನಿಮಾ ಒಪ್ಪಿಕೊಂಡೆ. ನಾನು ಸಾಕಷ್ಟು ತಾಯಿಪಾತ್ರ ಮಾಡಿದ್ದರು ಕೂಡ ಇದು ವಿಭಿನ್ನವಾಗಿದೆ. ತೆರೆ ಮೇಲೆ ನೋಡಿದಾಗ ಸಿನಿಮಾ ಎಲ್ಲರಿಗೂ ಕನೆಕ್ಟ್ ಆಗಲಿದೆ ಎಂದಿದ್ದಾರೆ.
ಚೇತನ್ ದುರ್ಗ ಮಾತನಾಡಿ, ಇಷ್ಟು ದಿನ ಕಾಮಿಡಿಯನ್ ಆಗಿ ಮಾಡಿಕೊಂಡು ಬಂದಿದ್ದೆ. ಆದರೆ ಇದರಲ್ಲಿ ಬೇರೆಯದ್ದೇ ರೀತಿಯ ಪಾತ್ರ ಇದೆ. ನಾನು ನಾಯಕ ಒಳ್ಳೆ ಫ್ರೆಂಡ್ಸ್. ಒಂಥರ ಸೈಲೆಂಟ್ ಪಾತ್ರ ನನ್ನದು. ಪೂರ್ಣಪ್ರಮಾಣದ ಕಲಾವಿದನಾಗಿ ಗುರುತಿಸಿಕೊಳ್ಳಬೇಕು ಅಂದ್ರೆ ಪಾತ್ರಗಳು ಸಿಗಬೇಕು. ಆ ರೀತಿಯ ಪಾತ್ರ ಇಲ್ಲಿ ಸಿಕ್ಕಿದೆ.
ನಾಗರಾಜ್ ರಾವ್, ಯಮುನಾ ಶ್ರೀನಿಧಿ, ಚೇತನ್ ದುರ್ಗಾ, ಸಿದ್ದು, ಡಿಂಗ್ರಿ ನರೇಶ್ ಸೇರಿದಂತೆ ಹಲವರಿದ್ದಾರೆ.