Chief Editor
Manohar. R (Manu)
Photo Journalist
chitrataramanu@gmail.com
+91 9845549026
ಚೇತನ್ ಸೂರ್ಯ ನ ``ಅಪ್ಪು ಕಪ್ ಸೀಸನ್ 3``ಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ಅದ್ದೂರಿ ಚಾಲನೆ
Posted date: 23 Mon, Jun 2025 11:36:19 PM
ಚೇತನ್ ಸೂರ್ಯ ಅವರ STELLER STUDIO & EVENT MANAGEMENT ಸಂಸ್ಥೆ, PRK Audio ಸಂಸ್ಥೆಯ ಸಹಯೋಗದೊಂದಿಗೆ "ಅಪ್ಪು ಕಪ್"(ಶಟಲ್ ಬ್ಯಾಡ್ಮಿಂಟನ್ ಟೂರ್ನಿ) ಎರಡು ಸೀಸನ್ ಅದ್ದೂರಿಯಾಗಿ ನಡೆದಿದೆ. ಜುಲೈನಲ್ಲಿ " ಅಪ್ಪು ಕಪ್ ಸೀಸನ್ 3" ಲೀಗ್ ಪಂದ್ಯಗಳು ಆರಂಭವಾಗಲಿದೆ.  ಇತ್ತೀಚೆಗೆ "ಅಪ್ಪು ಕಪ್ ಸೀಸನ್ 3" ಉದ್ಘಾಟನೆ ಹಾಗೂ ಟೀಮ್ ಆಕ್ಷನ್ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಅಶ್ವಿನಿ ಪುನೀತ್ ರಾಜಕುಮಾರ್, ವಿಧಾನ ಪರಿಷತ್ ಸದಸ್ಯರಾದ ಸರವಣ, ಕನ್ನಡಪರ ಹೋರಾಟಗಾರರಾದ ಸಾ.ರಾ.ಗೋವಿಂದು ಹಾಗೂ ಶಾಸಕರಾದ ರಾಜು ಗೌಡ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಟಾರ್ ರಾಯಭಾರಿಗಳಾದ ಪ್ರಿಯಾಂಕ ಉಪೇಂದ್ರ, ಅನಿರುದ್ಧ ಜಟ್ಕರ್, ಸೃಜನ್ ಲೋಕೇಶ್ , ರಾಜವರ್ಧನ್ ಹಾಗೂ ಗುಡ್ ವಿಲ್ ಸ್ಟಾರ್ ರಾಯಭಾರಿ ರಾಗಿಣಿ ದ್ವಿವೇದಿ ಸೇರಿದಂತೆ ಅನೇಕ ಕಲಾವಿದರು ಉಪಸ್ಥಿತರಿದ್ದರು.

STELLER STUDIO & EVENT MANAGEMENT ಸಂಸ್ಥೆ, PRK Audio ಸಂಸ್ಥೆಯ ಸಹಯೋಗದೊಂದಿಗೆ "ಅಪ್ಪು ಕಪ್ ಸೀಸನ್ 3" ಅದ್ದೂರಿಯಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ಉದ್ಘಾಟನಾ ಸಮಾರಂಭ ನಡೆದಿದೆ. 
ಕಳೆದೆರೆಡು ಸೀಸನ್ ಗಳಿಂದ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನಮ್ಮ ಜೊತೆಗೆ ಇದ್ದಾರೆ. ಅವರಿಗೆ ಹಾಗೂ ಸರವಣ ಅವರು ಸೇರಿದಂತೆ ಎಲ್ಲಾ ಗಣ್ಯರಿಗೆ ಧನ್ಯವಾದ. ಈ ಬಾರಿಯ "ಅಪ್ಪು ಕಪ್" ನ ವಿಶೇಷವೆಂದರೆ ಜುಲೈ 25,26,27 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಆಗಸ್ಟ್ 16, 17 ರಂದು ಗೋವಾದಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಒಟ್ಟು ಹತ್ತು ತಂಡಗಳಿರುತ್ತದೆ. ಅದರಲ್ಲಿ ನಾಲ್ಕು ತಂಡಗಳು ಫೈನಲ್ ಪ್ರವೇಶಿಸಲಿದೆ ಎಂದು ಆಯೋಜಕರಾದ ಚೇತನ್ ಸೂರ್ಯ ಹೇಳಿದರು‌.

ಅಶ್ವಿನಿ ಪುನೀತ್ ರಾಜಕುಮರ್ "ಅಪ್ಪು ಕಪ್" ಯಶಸ್ವಿಯಾಗಲೆಂದು ಹಾರೈಸಿದರು. ಸದಾ ನಾನು ಚೇತನ್ ಅವರ ಜೊತೆಗೆ ಇರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಸಾಯಿ ಗೋಲ್ಡ್ ಪ್ಯಾಲೆಸ್ ನ ಮಾಲೀಕರಾದ ಸರವಣ ತಿಳಿಸಿದರು.

ಅಪ್ಪು ಕಪ್ ಸೀಸನ್ 3 ರಲ್ಲಿ ಭಾಗವಹಿಸುತ್ತಿರುವ ತಂಡಗಳ ವಿವರ

 ೧) "ವೀರ ಕನ್ನಡಿಗ ಬುಲ್ಸ್" ಮಾಲೀಕರು ಮೊನೀಶ್ ಸಿ, ನಾಯಕ ದಿಲೀಪ್ ರಾಜ್ ಹಾಗೂ ಸ್ಟಾರ್ ರಾಯಭಾರಿ ಸೃಜನ್ ಲೋಕೇಶ್. 
 ೨) ಬಿಂದಾಸ್ ರಾಯಲ್ ಚಾಲೆಂಜರ್ಸ್ ಮಾಲೀಕರು ಪರಿತೋಷ್ ಮೂರ್ತಿ, ನಾಯಕ ದಿಗಂತ್, ಸ್ಟಾರ್ ರಾಯಭಾರಿ ಅವಿನಾಶ್ ದಿವಾಕರ್ .                
೩) "ಜಾಕಿ ರೈಡರ್ಸ್" ಮಾಲೀಕರು ಶ್ರೀಹರ್ಷ, ‌ನಾಯಕ ಮನೋರಂಜನ್ ರವಿಚಂದ್ರನ್, ಸ್ಟಾರ್ ರಾಯಭಾರಿ ಪ್ರಿಯಾಂಕ ಉಪೇಂದ್ರ.  
 ೪) "ಮೌರ್ಯ ಸ್ಟ್ರೈಕರ್ಸ್" ಮಾಲೀಕರು ವಿಜೇತ್, ನಾಯಕ ಪ್ರಮೋದ್ ಶೆಟ್ಟಿ, ಸ್ಟಾರ್ ರಾಯಭಾರಿ ರಾಜವರ್ಧನ್.           
೫)"ಯುವರತ್ನ ಚಾಂಪಿಯನ್ಸ್ "  ಮಾಲೀಕರು ದಿವ್ಯ ರಂಗೇನಹಳ್ಳಿ, ನಾಯಕ ಇಂದ್ರಜಿತ್ ಲಂಕೇಶ್, ಸ್ಟಾರ್ ರಾಯಭಾರಿ ಧನ್ಯ ರಾಮಕುಮಾರ್.  
 ೬) ಪವರ್ ಪೈತಾನ್ಸ್, ಮಾಲೀಕರು ರೂಪ, ನಾಯಕ ಸದಾಶಿವ ಶೆಣೈ, ಸ್ಟಾರ್ ರಾಯಭಾರಿ ಸಿಂಧೂ ಲೋಕನಾಥ್.  
  ೭)ಗಂಧದಗುಡಿ ವಾರಿಯರ್ಸ್ ಮಾಲೀಕರು ಸತೀಶ್ ಎಂ, ನಾಯಕ ಹರೀಶ್ ನಾಗರಾಜ್, ಸ್ಟಾರ್ ರಾಯಭಾರಿ ವಿಕ್ರಮ್ ರವಿಚಂದ್ರನ್.                      
 ೮) "ಜೇಮ್ಸ್ ವಾರಿಯರ್ಸ್" ಮಾಲೀಕರು ಸತ್ಯ, ನಾಯಕ ರವಿಚೇತನ್, ಸ್ಟಾರ್ ರಾಯಭಾರಿ ಅನಿರುದ್ಧ ಜಟ್ಕರ್ .
 ೯)"ದೊಡ್ಮನೆ ಡ್ರಾಗನ್ಸ್"  ಮಾಲೀಕರು ಸುರೇಶ್ & ನಿರಂತರ ಗಣೇಶ್, ನಾಯಕ ಪ್ರವೀಣ್ ತೇಜ್, ‌ಸ್ಟಾರ್ ರಾಯಭಾರಿ ವಸಿಷ್ಠ ಸಿಂಹ.       
೧೦) "ಅರಸು ಹಂಟರ್ಸ್",   ಮಾಲೀಕರು ಆನಂದ್, ನಾಯಕ ಭುವನ್ ಗೌಡ, ಸ್ಟಾರ್ ರಾಯಭಾರಿ ಇಮ್ರಾನ್ ಸರ್ದಾರಿಯಾ .
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಚೇತನ್ ಸೂರ್ಯ ನ ``ಅಪ್ಪು ಕಪ್ ಸೀಸನ್ 3``ಗೆ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ಅದ್ದೂರಿ ಚಾಲನೆ - Chitratara.com
Copyright 2009 chitratara.com Reproduction is forbidden unless authorized. All rights reserved.