Chief Editor
Manohar. R (Manu)
Photo Journalist
chitrataramanu@gmail.com
+91 9845549026
ತಪಸ್ಸಿ ರೂಪದರ್ಶಿಯೊಬ್ಬಳ ಕರಾಳ ಜೀವನದ ಅನಾವರಣ...ರೇಟಿಂಗ್ :- 3/5
Posted date: 05 Sat, Jul 2025 07:52:14 AM
ಆಧುಕತೆಯ ವ್ಯಾಮೋಹಕ್ಕೆ ಸಿಲುಕಿದ, ತಾನೊಬ್ಬ ಮಾಡೆಲ್ ಆಗಬೇಕೆಂದು ಹೊರಟ ಸುಂದರ  ಯುವತಿಯೊಬ್ಬಳು ಹೇಗೆ ತನ್ನ  ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾಳೆ, ಕೆಟ್ಟಹಾದಿ ತುಳಿದು ಯಾವರೀತಿ  ಅನರ್ಥಗಳನ್ನು ಮಾಡಿಕೊಂಡು ಕಡೆಗೆ ತನ್ನ ಜೀವನವನ್ನೇ ನಾಶ ಮಾಡಿಕೊಳ್ಳುವ ಸ್ಥಿತಿ ತಲುಪುತ್ತಾಳೆ ಎಂಬುದನ್ನು ತಪಸ್ಸಿ ಚಿತ್ರದ ಮೂಲಕ ನಿರ್ದೇಶಕ ಸ್ಪೆನ್ಸರ್ ಮ್ಯಾಥ್ಯೂ ಅವರು ಹೇಳಲು ಹೇಳಲು ಪ್ರಯತ್ನಿಸಿದ್ದಾರೆ‌. ಸಿನಿಮಾ ಮತ್ತು ಫ್ಯಾಷನ್ ಹುಚ್ಚಿನಿಂದ  ಹಲವಾರು  ದುಶ್ಚಟಗಳಿಗೆ ಬಲಿಯಾದ ಅಮಾಯಕ ಹುಡುಗಿಯರ ಅಸಹಾಯಕತೆ, ನೋವು ಇದೆಲ್ಲವನ್ನೂ ತಮ್ಮ ತಪಸ್ಸಿ ಚಿತ್ರದ ಮೂಲಕ  ಹೇಳಲು ನಿರ್ದೇಶಕ ಸ್ಪೆನ್ಸರ್ ಮ್ಯಥ್ಯೂ ಅವರು ಟ್ರೈ ಮಾಡಿದ್ದಾರೆ.  ಚಿಕ್ಕ ವಯಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು ಅನಾಥಳಾದ ನಾಯಕಿ ತಪಸ್ಸಿ(ಅಮ್ರಯಾ ಗೋಸಾಮಿ)ಅಪ್ರತಿಮ ಸುಂದರಿ. ಸುಂದರಿಯಾಗಬೇಕೆಂದು ಅರುಳ್ (ಭಾಸ್ಕರ್) ಎಂಬ ಆಯೋಜಕನ ಬಳಿ ಹೋಗುತ್ತಾಳೆ, ಆದರೆ ಆತ ತಪಸ್ಸಿಯನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾನೆ,  ಕಮಿಟ್‌ಮೆಂಟ್ ಮಾಡಿಕೊಂಡರಷ್ಟೇ ಅವಕಾಶ ಎಂಬ ಸತ್ಯ ಅರಿತ ತಪಸ್ಸಿ ಕ್ರಮೇಣ ಅದಕ್ಕೆ ಹೊಂದಿಕೊಳ್ಳುತ್ತಾಳೆ, ಅತಿಯಾದ ಕುಡಿತ, ಡ್ರಗ್ಸ್ ಸೇವನೆಯ ಜತೆಗೆ ವೇಶ್ಯಾವಟಿಕೆಯನ್ನೂ ತನ್ನ ವೃತ್ತಿಯಾಗಿಸಿಕೊಳ್ಳುತ್ತಾಳೆ, ತಪಸ್ಸಿಯನ್ನು ಹೇಗಾದರೂ ಸರಿಪಡಿಸಬೇಕೆಂದು ಆಕೆಯ ಗೆಳತಿ ಸೈಕಾಲಜಿ ಪ್ರೊಫೆಸರ್ ವೈದ್ಯನಾಥನ್ (ರವಿಚಂದ್ರನ್) ಬಳಿಗೆ ಕರೆದೊಯ್ಯುತ್ತಾಳೆ, ಇಂಥವರನ್ನು ಕಷ್ಟಪಟ್ಟಾದರೂ ಸರಿಪಡಿಸಬೇಕೆಂಬ ಧ್ಯೇಯ ಇಟ್ಟುಕೊಂಡದ್ದ ವೈದ್ಯನಾಥನ್ ಕೊನೆಗೂ ತಪಸ್ಸಿಯನ್ನು ಮೊದಲಿನಂತರ ಸರಿಪಡಿಸಲು ಸಾಧ್ಯವಾಯಿತೇ, ಇಲ್ಲವೇ ಎಂಬುದನ್ನು ಚಿತ್ರದ ಕ್ಲೆ ಮ್ಯಾಕ್ಸ್ನಲ್ಲಿ  ಮನಕಲಕುವ ಸನ್ನಿವೇಶಗಳೊಂದಿಗೆ   ನಿರೂಪಿಸಿದ್ದಾರೆ.      
 
ಸೇಲಂನಲ್ಲಿ ನಡೆದಂಥ ನೈಜಘಟನೆ ಇಟ್ಟುಕೊಂಡು ನಿರ್ದೇಶಕರು  ಈ ಚಿತ್ರಕಥೆ ಹೆಣೆದಿದ್ದಾರೆ. ಚಿತ್ರದಲ್ಲಿ ಫ್ಯಾಷನ್ ಜಗತ್ತಿನ ಕರಾಳ ಮುಖವನ್ನು ಹಂತ ಹಂತವಾಗಿ  ಅನಾವರಣಗೊಳಿಸುತ್ತ ಹೋಗಿದ್ದಾರೆ. ತಪಸ್ಸಿಯ ಫ್ಯಾಷನ್ ಜಗತ್ತಿನ ಮೋಹ ಆಕೆಯನ್ನು ಬಹು ಬೇಗನೆ ತನ್ನೊಳಗೆ ಆಪೋಶನ ಮಾಡಿಕೊಳ್ಳುತ್ತದೆ.
 
ದುರ್ಬಲ ಮನಸ್ಥಿತಿ ಮತ್ತು ಬೇಗನೇ ಎಲ್ಲರನ್ನೂ  ನಂಬುವ  ಆಕೆಯ ನಡವಳಿಕೆ ಆಕೆಯನ್ನು ಬಹುಬೇಗನೇ ದುಶ್ಚಟಗಳ ದಾಸಿಯನ್ನಾಗಿ ಮಾಡುತ್ತದೆ. ಅರಿವಿಲ್ಲದೆ ಅನಿವಾರ್ಯವಾಗಿ ಆಕೆ ವೇಶ್ಯಾವಾಟಿಕೆಗೆ ದೂಡಲ್ಪಡುತ್ತಾಳೆ. ಆದರೆ ಮುಗ್ಧೆಯಾದ ಆಕೆಗೆ ಕರಾಳ ಜಗತ್ತಿನ ಕಳ್ಳಾಟಗಳ ಅರಿವೇ ಆಗುವುದಿಲ್ಲ. ಚಿತ್ರರಂಗದಲ್ಲಿ ಸಿಕ್ಕ ಗೆಳೆಯರ  ಸಹವಾಸದಿಂದ ಎಲ್ಲ ಸಂಕೋಲೆ ಮತ್ತು ಚಟ ಬಿಡಿಸಿಕೊಳ್ಳುವ ದಾರಿಯಲ್ಲಿ  ಮಾನಸಿಕ ತಜ್ಞರಾದ ವೈದ್ಯನಾಥನ್ ಅವರ ಬಳಿ ಹೋದಾಗ, ತಪಸ್ಸಿ  ಯಾವರೀತಿ  ಬದಲಾಗುತ್ತಾಳೆ  ಎಂಬುದೇ ತಪಸ್ಸಿ ಚಿತ್ರದ ಕ್ಲೈಮ್ಯಾಕ್ಸ್.  
 
ಮಹಿಳಾ ಪ್ರಧಾನ ಕಥೆಯ ಈ ಚಿತ್ರದಲ್ಲಿ ಮೈಛಳಿ ಬಿಟ್ಟು ಅಭಿನಯಿಸಿರುವ  ನಾಯಕಿ ಅಮ್ರಯ ಗೋಸಾಮಿ ಅವರ  ಪಾತ್ರ ಪ್ರೇಕ್ಷಕರನ್ನು ಥೇಟರಿನಿಂದ ಹೊರಬಂದ ಮೇಲೂ ಸಹ ಕಾಡುತ್ತದೆ. ಗೌರವ ಪಾತ್ರದಲ್ಲಿ  ವಿ.ರವಿಚಂದ್ರನ್ ಅವರು  ಗಮನ ಸೆಳೆಯುತ್ತಾರೆ. ನಿರ್ದೇಶಕರೇ ಕ್ಯಾಮೆರಾ ವರ್ಕ ನಿಭಾಯಿಸಿದ್ದು ಕೆಲಸ ಸೀನ್‌ಗಳು ಪದೇ ಪದೇ ತೆರೆಮೇಲೆ ಕಾಣುತ್ತವೆ. ಇನ್ನು ಆರವ್ ರಿಶಿಕ್ ಅವರ ಸಂಗೀತ ಚಿತ್ರಕ್ಕೆ ಪೂರಕವಾಗಿದೆ,
Kannada Cinema's Latest Wallpapers
Kannada Cinema's Latest Videos
Kannada Movie/Cinema News - ತಪಸ್ಸಿ ರೂಪದರ್ಶಿಯೊಬ್ಬಳ ಕರಾಳ ಜೀವನದ ಅನಾವರಣ...ರೇಟಿಂಗ್ :- 3/5 - Chitratara.com
Copyright 2009 chitratara.com Reproduction is forbidden unless authorized. All rights reserved.