Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಾಡಿನ ಕಥೆಗೆ ನಾಡಿನ ಜನರು ಫಿದಾ. ಯಶಸ್ಸಿನ ಹಾದಿಯಲ್ಲಿ``ಜಂಗಲ್ ಮಂಗಲ್``
Posted date: 10 Thu, Jul 2025 11:22:49 AM
ಸುನಿ ಸಿನಿಮಾಸ್ ಅರ್ಪಿಸುವ, ಸಹ್ಯಾದ್ರಿ ಸ್ಟುಡಿಯೋಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ರಕ್ಷಿತ್ ಕುಮಾರ್ ನಿರ್ದೇಶನದ ಹಾಗೂ ಯಶ್ ಶೆಟ್ಟಿ, ಹರ್ಷಿತ ರಾಮಚಂದ್ರ, ಉಗ್ರಂ ಮಂಜು,  ಬಲ ರಾಜವಾಡಿ, ದೀಪಕ್ ರೈ ಪಾಣಾಜೆ, ಚಂದ್ರಹಾಸ್ ಉಳ್ಳಾಲ್ ಮುಂತಾದವರು ಅಭಿನಯಿಸಿರುವ " ಜಂಗಲ್ ಮಂಗಲ್" ಚಿತ್ರ ಕಳೆದವಾರ ಬಿಡುಗಡೆಯಾಗಿ ಜನಮನ‌ ಗೆಲ್ಲುತ್ತಿದೆ. ಇದೊಂದು ಕಾಡಿನಲ್ಲಿ ನಡೆಯುವ ಕಥೆಯಾಗಿದ್ದು, ಕಾಡಿನ ಕಥೆಗೆ ನಾಡಿನ ಜನರು ಫಿದಾ ಆಗಿದ್ದಾರೆ. ಸಕ್ಸಸ್ ಮೀಟ್ ನಲ್ಲಿ ಚಿತ್ರತಂಡದ ಸದಸ್ಯರು ಚಿತ್ರದ ಪ್ರಸ್ತುತ ವಿಷಯದ ಬಗ್ಗೆ ಮಾತನಾಡಿದರು. 

ನಮ್ಮ ಚಿತ್ರ ಕಮರ್ಷಿಯಲ್ ಆಗಿ ಗೆದ್ದಿದೆ ಎಂದು ಹೇಳಲು ಸಕ್ಸಸ್ ಮೀಟ್ ಆಯೋಜಿಸಿಲ್ಲ. ಆದರೆ ಇಲ್ಲಿಯವರೆಗೂ ನೋಡಿರುವವರ ಮನ ಗೆದ್ದಿದೆ ಎಂದು ಹೇಳಲು ಪತ್ರಿಕಾಗೋಷ್ಠಿ ಆಯೋಜಿಸಿದ್ದೇವೆ. ಚಿತ್ರ ಬಿಡುಗಡೆಯಾದಗಿನಿಂದ ಈವರೆಗೂ ನಮ್ಮ ಚಿತ್ರ ನೋಡಿದ ಯಾರೊಬ್ಬರೂ ಕೂಡ ಚಿತ್ರ ಚೆನ್ನಾಗಿಲ್ಲ ಎಂದು ಹೇಳಿಲ್ಲ‌. ಅದು ನಮಗೆ ಬಹಳ ಖುಷಿಯಾದ ವಿಚಾರ. ಇನ್ನೂ ನಮ್ಮ ಚಿತ್ರ ವೀಕ್ಷಿಸಿದ ಗುರು ದೇಶಪಾಂಡೆ ಅವರು, ತಾವೇ ಸ್ವತಃ ಶರಣ್ ಹಾಗೂ ಧ್ರುವ ಸರ್ಜಾ ಅವರಿಗೆ ಕರೆ ಮಾಡಿ ಚಿತ್ರ ಚೆನ್ನಾಗಿದೆ. ತಾವು ಚಿತ್ರ ನೋಡಿ ಎಂದು ಹೇಳಿದರು. ಶರಣ್ ಹಾಗೂ ಧ್ರುವ ಸರ್ಜಾ ಅವರು ನಮ್ಮ ಚಿತ್ರ ನೋಡಿ ಮೆಚ್ಚುಗೆ ಮಾತುಗಳಾಡಿದರು. ಅದರಿಂದ ನಮಗೆ ಬಹಳ ಅನುಕೂಲವಾಯಿತು‌. ಅವರಿಗೆ ಧನ್ಯವಾದ‌. ಇನ್ನೂ, ಚಿತ್ರ ನೋಡಿದ ಕೆಲವರು ತಮ್ಮ ಸ್ನೇಹಿತರಿಗೆ ನೋಡಿ ಅಂತ ಹೇಳುತ್ತಿರುವುದು. ಕೆಲವು ಕಡೆ ತಾವೇ ಶೋಗಳನ್ನು ಆಯೋಜಿಸುತ್ತಿರುವುದು. ಇದೆಲ್ಲಾ ನೋಡಿ ಮನ ತುಂಬಿ ಬಂದಿದೆ. ಕನ್ನಡದಲ್ಲಿ ಒಂದೊಳ್ಳೆ ಚಿತ್ರ ಬಂದಿದೆ ಎಂದು ನೋಡಿದವರು ಹೇಳುತ್ತಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದು ನಮ್ಮ ಚಿತ್ರವನ್ನು ವೀಕ್ಷಿಸಬೇಕೆಂದು ನಾಯಕ ಯಶ್ ಶೆಟ್ಟಿ ಮನವಿ ಮಾಡಿದರು.

ಪ್ರೀಮಿಯರ್ ಶೋ ನಲ್ಲಿ ಭಾಗವಹಿಸಿದ್ದ ಎಲ್ಲರಿಂದಲೂ, ಅದರಲ್ಲೂ ವಿಶೇಷವಾಗಿ ಮಾಧ್ಯಮದವರಿಂದ ನಮ್ಮ ಚಿತ್ರಕ್ಕೆ ಸಿಕ್ಕ ಪ್ರಶಂಸೆಗೆ ಮನ ತುಂಬಿ ಬಂದಿದೆ. ಚಿತ್ರದ ಯಶಸ್ಸಿಗೆ ಕಾರಣರಾದ ನನ್ನ ತಂಡಕ್ಕೆ ಹಾಗೂ ಪ್ರೇಕ್ಷಕರಿಗೆ ಈ ಸಂದರ್ಭದಲ್ಲಿ ಧನ್ಯವಾದ ತಿಳಿಸುತ್ತೇನೆ. ಚಿತ್ರ ನೋಡಿದ ಕೆಲವರು. ತುಂಬಾ ಚೆನ್ನಾಗಿದೆ. ಮಲಯಾಳಂ ಚಿತ್ರ ಇದ್ದ ಹಾಗೆ ಇದೆ. ಎನ್ನುತ್ತಿದ್ದಾರೆ. ಇದರಿಂದ ಒಂದು ಕಡೆ ಖುಷಿ. ಮತ್ತೊಂದು ಕಡೆ ಬೇರೆ ಭಾಷೆಯವರು ಈ ಚಿತ್ರ ನೋಡಿ ಕನ್ನಡದಲ್ಲಿ ಒಂದೊಳ್ಳೆ ಸಿನಿಮಾ ಬಂದಿದೆ ಎಂದು ಹೇಳಬೇಕು.‌ ಮುಂದೊಂದು ದಿನ ಆ ದಿನ ಬರುತ್ತದೆ ಎಂಬ ವಿಶ್ವಾಸವಿದೆ. ಎರಡನೇ ವಾರಕ್ಕೆ ಅಡಿ ಇಡುತ್ತಿರುವ ಈ ಸಂದರ್ಭದಲ್ಲೂ ಅನೇಕ ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ಪ್ರದರ್ಶನ ಕಾಣುತ್ತಿದೆ. ಹೆಚ್ಚಿನ ಜನರು ನಮ್ಮ ಚಿತ್ರವನ್ನು ನೋಡುವ ಮೂಲಕ ಪ್ರೋತ್ಸಾಹ ನೀಡಿ ಎನ್ನುತ್ತಾರೆ ನಿರ್ದೇಶಕ ರಕ್ಷಿತ್ ಕುಮಾರ್.

ನನ್ನ ಪಾತ್ರಕ್ಕೆ ಹಾಗೂ ಚಿತ್ರಕ್ಕೆ ಸಿಗುತ್ತಿರುವ ಪ್ರಶಂಸೆಗೆ ಬಹಳ ಸಂತೋಷವಾಗಿದೆ ಎಂದು ನಟ ಉಗ್ರಂ ಮಂಜು ತಿಳಿಸಿದರು. 

ಮೊದಲ ಚಿತ್ರಕ್ಕೆ ಜನರು ತೋರುತ್ತಿರುವ ಒಲವಿಗೆ ನಾಯಕಿ ಹರ್ಷಿಕ ರಾಮಚಂದ್ರ ಧನ್ಯವಾದ ಹೇಳಿದರು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಾಡಿನ ಕಥೆಗೆ ನಾಡಿನ ಜನರು ಫಿದಾ. ಯಶಸ್ಸಿನ ಹಾದಿಯಲ್ಲಿ``ಜಂಗಲ್ ಮಂಗಲ್`` - Chitratara.com
Copyright 2009 chitratara.com Reproduction is forbidden unless authorized. All rights reserved.