Chief Editor
Manohar. R (Manu)
Photo Journalist
chitrataramanu@gmail.com
+91 9845549026
ಉಪೇಂದ್ರ `ನೆಕ್ಸ್ಟ್ ಲೆವೆಲ್` ಸಿನಿಮಾಗೆ ಕಾಟೇರ ಕ್ವೀನ್ ಆರಾಧನಾ ನಾಯಕಿ
Posted date: 07 Thu, Aug 2025 10:05:32 AM
ತರುಣ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ತರುಣ್ ಶಿವಪ್ಪ ನೆಕ್ಸ್ಟ್ ಲೆವೆಲ್ ಸಿನಿಮಾ ನಿರ್ಮಾಣಕ್ಕೆ‌ ಮುಂದಾಗಿದ್ದಾರೆ. ವಿಭಿನ್ನತೆಗೆ ಹೆಸರುವಾಸಿಯಾಗಿರುವ ರಿಯಲ್ ಸ್ಟಾರ್ ಉಪೇಂದ್ರ ಈ ಚಿತ್ರದ ನಾಯಕರು. ಅರವಿಂದ್ ಕೌಶಿಕ್ ನಿರ್ದೇಶನದ ನೆಕ್ಸ್ಟ್ ಲೆವೆಲ್ ಸಿನಿಮಾಗೀಗ ನಾಯಕಿ ಸಿಕ್ಕಿದ್ದಾರೆ. 
 
ಪ್ಯಾನ್ ಇಂಡಿಯಾ ಚಿತ್ರವಾಗಿರುವ ನೆಕ್ಸ್ಟ್ ಲೆವೆಲ್ ಗೆ ಮಾಲಾಶ್ರೀ ಪುತ್ರಿ ಆರಾಧನಾ ನಾಯಕಿ. ಕಾಟೇರ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಹೆಜ್ಜೆ ಇಟ್ಟಿದ್ದ ಆರಾಧನಾ ಮೊದಲ ಚಿತ್ರದಲ್ಲಿಯೇ ತಮ್ಮ‌ ನಟನಾ ಪರಿಚಯಿಸಿದ್ದರು. ಮೊದಲ ಸಿನಿಮಾದಲ್ಲಿಯೇ ದರ್ಶನ್ ಅವರಂತಹ ಸ್ಟಾರ್ ಹೀರೋಗೆ ಜೋಡಿಯಾಗಿ ಅಭಿನಯಿಸಿದ್ದರು. ಇದೀಗ ಎರಡನೇ ಚಿತ್ರದಲ್ಲಿಯೂ ಸೂಪರ್ ಸ್ಟಾರ್ ಉಪೇಂದ್ರ ಅವರಿಗೆ ನಾಯಕಿಯಾಗಿ ಸಾಥ್ ಕೊಡಲಿದ್ದಾರೆ.
 
ಬೆಂಗಳೂರಿನಲ್ಲಿಯೇ `ನೆಕ್ಸ್ಟ್‌ ಲೆವೆಲ್‌` ಸಿನಿಮಾದ ಅದ್ಧೂರಿ ಮುಹೂರ್ತ ನಡೆಯಲಿದ್ದು, ಬೆಂಗಳೂರು, ಮುಂಬೈ, ಹೈದರಾಬಾದ್‌ ಸೇರಿದಂತೆ ಭಾರತದ ಹಲವು ಕಡೆ ಚಿತ್ರದ ಶೂಟಿಂಗ್‌ ನಡೆಯಲಿದೆ. ಸಿನಿಮಾದ ಹೆಚ್ಚಿನ ಭಾಗ ವಿಎಫ್‌ಎಕ್ಸ್‌ನಿಂದ ಕೂಡಿರಲಿದೆ. ಇದಕ್ಕಾಗಿ ಈ ಚಿತ್ರತಂಡವು ಕೆನಡಾ ಸೇರಿದಂತೆ ಅನೇಕ ವಿದೇಶಿ ಗ್ರಾಫಿಕ್ಸ್‌ ಸ್ಟುಡಿಯೋಗಳು ಹಾಗೂ ಭಾರತದ ಪ್ರತಿಷ್ಠಿತ ಗ್ರಾಫಿಕ್ಸ್‌ ನಿರ್ಮಾಣ ಸಂಸ್ಥೆಗಳ ಸಹಯೋಗದೊಂದಿಗೆ ಪ್ಯಾನ್‌ ಇಂಡಿಯಾ ಮಟ್ಟದ ಈ ದೊಡ್ಡ ಸಿನಿಮಾವನ್ನು ಕಡಿಮೆ ಅವಧಿಯಲ್ಲಿ ನಿರ್ಮಿಸುವ ಗುರಿ ಹೊಂದಿದೆ ಚಿತ್ರತಂಡ.
 
ಉಪೇಂದ್ರ ಅಭಿನಯದ ಬ್ಲಾಕ್‌ಬಸ್ಟರ್‌ `ಎ`, `ಉಪೇಂದ್ರ`, `ರಕ್ತ ಕಣ್ಣೀರು` ಸಿನಿಮಾಗಳ ಶೈಲಿಯಲ್ಲೇ ಈ ಸಿನಿಮಾ ಇರಲಿದೆ ಅನ್ನೋದು ಮತ್ತೊಂದು ವಿಶೇಷ. ತರುಣ್ ಶಿವಪ್ಪ ಈಗಾಗಲೇ ಐದು ಸಿನಿಮಾ ಮಾಡಿದ್ದಾರೆ. ರೋಸ್ ಚಿತ್ರದ ಮೂಲಕ ನಿರ್ಮಾಪಕರಾಗಿದ್ದರು. ಶಿವಣ್ಣನ ಜೊತೆಗೆ ಮಾಸ್ ಲೀಡರ್ ಮಾಡಿದ್ರು. ವಿಕ್ಟರಿ-2, ಖಾಕಿ, ಛೂ ಮಂತರ್ ಆದ್ಮೇಲೆ ಇದೀಗ ನೆಕ್ಸ್ಟ್
ಲೆವೆಲ್ ಸಿನಿಮಾ ನಿರ್ಮಾಣ ಕೈಗೆತ್ತಿಕೊಂಡಿದ್ದಾರೆ. ಇದನ್ನ ದೊಡ್ಡ ಮಟ್ಟದಲ್ಲಿಯೇ ಮಾಡೋಕೆ ಪಕ್ಕಾ ಪ್ಲಾನ್ ಮಾಡಿಕೊಂಡಿದ್ದಾರೆ. ಛೂ ಮಂತರ್ ಚಿತ್ರದ ಕ್ಯಾಮರಾಮನ್ ಅನೂಪ್ ಕಟ್ಟುಕರನ್ ಈ ಚಿತ್ರಕ್ಕೂ ಕೆಲಸ ಮಾಡುತ್ತಿದ್ದಾರೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಉಪೇಂದ್ರ `ನೆಕ್ಸ್ಟ್ ಲೆವೆಲ್` ಸಿನಿಮಾಗೆ ಕಾಟೇರ ಕ್ವೀನ್ ಆರಾಧನಾ ನಾಯಕಿ - Chitratara.com
Copyright 2009 chitratara.com Reproduction is forbidden unless authorized. All rights reserved.