Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪದ್ಮಭೂಷಣ ಡಾಕ್ಟರ್ ಬಿ. ಸರೋಜಾದೇವಿ ಅವರಿಗೆ ಚಿತ್ರರಂಗದಿಂದ ಭಾವಪೂರ್ಣ ಶ್ರದ್ಧಾಂಜಲಿ
Posted date: 10 Sun, Aug 2025 05:24:36 PM
ಕಳೆದ ತಿಂಗಳು ನಮ್ಮಿಂದ ದೂರವಾದ ಹಿರಿಯ ನಟಿ, ಅಭಿನಯ ಸರಸ್ವತಿ, ಪದ್ಮಭೂಷಣ ಡಾಕ್ಟರ್ ಬಿ. ಸರೋಜಾದೇವಿ ಅವರ ಆತ್ಮಕ್ಕೆ ಶಾಂತಿ ಕೋರಲು ಇತ್ತೀಚಿಗೆ ಚಾಮರಾಜ ಪೇಟೆಯ ಕಲಾವಿದರ ಸಂಘದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಕ್ ಲೈನ್ ವೆಂಕಟೇಶ್ ಅವರ ಮುಂದಾಳತ್ವದಲ್ಲಿ ನಡೆದ ಈ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮದಲ್ಲಿ ಕನ್ನಡ, ತೆಲುಗು, ತಮಿಳು ಚಿತ್ರರಂಗದ ಹಲವು ಕಲಾವಿದರು, ತಂತ್ರಜ್ಞರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ, ಕಲಾವಿದರ ಸಂಘ ಮುಂತಾದ ಚಿತ್ರರಂಗದ ಸಂಘಟನೆಗಳಿಂದ ಆಯೋಜನೆ ಮಾಡಲಾಗಿತ್ತು. ಸರೋಜಾದೇವಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಸರೋಜಾದೇವಿ ಅವರು ನಡೆದು ಬಂದ ದಾರಿಯ ವಿಡಿಯೋ ಪ್ರದರ್ಶನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ, ನಟ ರಾಕ್ ಲೈನ್ ವೆಂಕಟೇಶ್,  ಈ ಕಾರ್ಯಕ್ರಮವನ್ನು ಕಲಾವಿದರ ಸಂಘದಲ್ಲಿ ನಡೆಸಲು ಕಾರಣವಿದೆ. ಈ ಕಟ್ಟಡ ಆಗಲು ಸರೋಜಮ್ಮನವರ ಶ್ರಮ ಕೂಡ ತುಂಬಾ ಇದೆ. ಇಡೀ ಚಿತ್ರರಂಗ ಒಂದು ಕುಟುಂಬವಾಗಿ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ. ಬೇರೆ ಬೇರೆ ಚಿತ್ರರಂಗದಿಂದ ನಟರಾದ ನಾಸರ್, ಕಲಾವತಿ ಆಗಮಿಸಿದ್ದಾರೆ. ರಾಜ್ ಕುಮಾರ್ ಅವರ ಕನಸು ಕಲಾವಿದರ ಭವನ ಕಟ್ಟುವುದು ಆಗಿತ್ತು. ಅದನ್ನು ಅಂಬರೀಶ್ ಅವರು ನನಸು ಮಾಡಿದರು. ಈ ಭವನ ಕಟ್ಟಲು ಸರೋಜಾದೇವಿ ಅವರು ಅಧ್ಯಕ್ಷರಾಗಿದ್ದರು  ಎಂದು ತಮ್ಮ ಹಾಗೂ ಸರೋಜಾದೇವಿ ಅವರ ಒಡನಾಟ ನೆನೆದು ಬಾವುಕರಾದರು.

ನಂತರ ಮಾತನಾಡಿದ ಸುಮಲಾತಾ ಅಂಬರೀಶ್, ಸರೋಜಮ್ಮನವರ ಬಗ್ಗೆ ಮಾತನಾಡಲು ನಾವು ಚಿಕ್ಕವರು. ಚಿತ್ರರಂಗದಲ್ಲಿ ಛಾಪನ್ನು ಮೂಡಿಸಿದವರು. ಇಂದಿಗೂ ದೇಶ ವಿದೇಶಗಳಲ್ಲೂ ಅವರ ಹಾಡುಗಳನ್ನು ಇಷ್ಟ ಪಡುತ್ತಾರೆ. ಅವರು ಯಾವಾಗಲೂ ಚಿಕ್ಕ ಮಕ್ಕಳ ತರ ಇರತಾ ಇದ್ದರು. ಅಂಬರೀಶ್ ಅವರನ್ನು ತಮ್ಮನ ತರ ನೋಡತಾ ಇದ್ದರು. ಅವರು ತುಂಬಾ ಚನ್ನಾಗಿ ಪ್ರೊಫೆಷನಲ್ ಹಾಗೂ ಪರ್ಸನಲ್ ಲೈಫ್ ಕ್ಯಾರಿ ಮಾಡಿದರು. ಇದು ಎಲ್ಲರಿಗೂ ಮಾದರಿ ಆಗಬೇಕು. ಈ ಭವನ ಮಾಡಲು ರಾಜಕುಮಾರ್ ಹಾಗೂ ಅಂಬರೀಶ್ ಅವರಂತೆಯೇ ಸರೋಜಾದೇವಿ ಅವರ ಶ್ರಮ ಕೂಡ ಇದೆ. ಇಂತಹ ಭವನ ಇಡೀ ಇಂಡಿಯಾದಲ್ಲಿಯೇ ಇಲ್ಲ. ಇಂತಹ ಭವನವನ್ನು ಕಲಾವಿದರು ಚನ್ನಾಗಿ ಬಳಸಿಕೊಂಡು, ಮುಂದುವರೆಸಿಕೊಂಡು ಹೋಗಬೇಕು  ಎಂದರು. ಚೆನೈನಿಂದ ಆಗಮಿಸಿದ್ದ ಬಹು ಭಾಷಾ ನಟ ನಾಸರ್ ತಮ್ಮ ಹಾಗೂ ಸರೋಜಾದೇವಿ ಅವರ ಒಡನಾಟದ ನೆನಪುಗಳು ಮೆಲುಕು ಹಾಕಿದರು.
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪದ್ಮಭೂಷಣ ಡಾಕ್ಟರ್ ಬಿ. ಸರೋಜಾದೇವಿ ಅವರಿಗೆ ಚಿತ್ರರಂಗದಿಂದ ಭಾವಪೂರ್ಣ ಶ್ರದ್ಧಾಂಜಲಿ - Chitratara.com
Copyright 2009 chitratara.com Reproduction is forbidden unless authorized. All rights reserved.