"ಓಂ ಶಿವಂ" ಚಿತ್ರ ಸೆನ್ಸರ್ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ. ಈ ನಡುವೆ ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ನಾಯಕ ನಟನಾಗಿ ಭಾರ್ಗಕೃಷ್ಣ ನಾಯಕಿಯಾಗಿ ವಿರಾಣಿಕ ಶೆಟ್ಟಿ ನಟಿಸಿದ್ದಾರೆ .
ಪ್ರೀತಿ ಸುತ್ತ ನಡೆಯುವ ಕಥೆಯಾಗಿದ್ದು ಆನ್ಲೈನ್ ಮಾಫಿಯಾ ಹಾಗೂ ಡ್ರಕ್ಸ್ ದಂದೆ ಬೆಂಗಳೂರಿನಲ್ಲಿ ಹೇಗೆ ನಡೆಯುತ್ತೆ ಎಂಬುದನ್ನ ನೈಜ ಹಾಗೂ ರೋಚಕವಾಗಿ ತೋರಿಸಲಾಗಿದೆ.ಯುವಜನರು ಈ ಚಟಕ್ಕೆ ಒಳಗಾಗಿ ತಮ್ಮ ಜೀವನವನ್ನು ಹೇಗೆ ಹಾಳು ಮಾಡಿಕೊಳ್ಳುತ್ತಿದ್ದಾರೆ,ಮತ್ತೆ ಇದರಿಂದ ಹೊರಗೆ ಬರಲು ಹೇಗೆ ಪ್ರಯತ್ನ ಪಡುತ್ತಿದ್ದಾರೆ ಎಂದು ಈ ಚಿತ್ರದಲ್ಲಿ ತೋರಿಸಲಾಗಿದೆ.
ಪ್ರೀತಿ ಡ್ರಗ್ಸ್ ಗಿಂತ ಚಿಕ್ಕ ಜಾಸ್ತಿ ಆ ಪ್ರೀತಿ ಹೆಚ್ಚಾದಾಗ ನಾಯಕನ ಜೀವನದಲ್ಲಿ ಏನೆಲ್ಲಾ ಆಗುತ್ತೆ ನಾಯಕಿ ಪ್ರೀತಿಯ ಬಲೆಗೆ ಬಿದ್ದು ತನ್ನ ಫ್ಯಾಮಿಲಿಯನ್ನ ಹೇಗೆ ದೂರ ಮಾಡಿಕೊಳ್ಳುತ್ತಾಳೆ, ಇದರಿಂದ ತಂದೆ ತಾಯಿ ಪಡುವ ವೇದನೆ ಎಂತದ್ದು ಎಂದು ಈ ಚಿತ್ರದಲ್ಲಿ ಎಳೆ ಎಳೆಯಾಗಿ ಹೇಳಲಾಗಿದೆ.ನಾಯಕ ನಾಯಕಿ ಪ್ರೀತಿಯಲ್ಲಿ ಗೆಲ್ಲುತ್ತಾರಾ ಅಥವಾ ತಂದೆ ತಾಯಿಯ ಪ್ರೀತಿನ ಉಳಿಸಿಕೊಳ್ಳುತ್ತಾರೆ ಎಂಬುದೇ ಕಥೆಯ ಸಾರಾಂಶವಾಗಿದೆ.
ಮಗನ ಮೇಲಿನ ಪ್ರೀತಿಗೆ ತಂದೆ ಕೃಷ್ಣ , ಓಂ ಶಿವಂ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ವಿದೇಶದಲ್ಲಿ ವ್ಯಾಸಂಗ ಮಾಡಿರುವ ನಟ ಭಾರ್ಗವ್ ಕೃಷ್ಣ,ಓಂ ಶಿವಂ ಸಿನಿಮಾ ಮೂಲಕ ಅಭಿಮಾನಿಗಳ ಮನ ಗೆಲ್ಲುತ್ತೆ ಎಂಬುದು ಇವರ ಪ್ರೀತಿಯ ಮಾತು.
ನಾಯಕಿಯಾಗಿ ವಿರಾನಿಕಾ ಶೆಟ್ಟಿ ಅಭಿನಯಿಸಿದ್ದು,ಕಾಕ್ರೋಚ್ ಸುಧೀ, ವರ್ಧನ್, ರವಿ ಕಾಳೆ,ಯಶ್ ಶೆಟ್ಟಿ, ಉಗ್ರಂ ರವಿ, ಸೂರಜ್, ಅಪೂರ್ವ, ಲಕ್ಷ್ಮಿ ಸಿದ್ದಯ್ಯ ಹಾಗೂ ಇನ್ನಿತರ ಕಲಾವಿದರು ಅಭಿನಯಿಸಿದ್ದಾರೆ.
ಚಿತ್ರ ಮುಂದಿನ ತಿಂಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರಕ್ಕೆ ಕಥೆ ಚಿತ್ರಕಥೆ ನಿರ್ದೇಶನ ಆಲ್ವಿನ್ ಅವರದಾಗಿರುತ್ತದೆ,
ಆಲ್ವಿನ್ ಈಗಾಗಲೇ ರಾಜ ಬಹದ್ದೂರ್ ಎಂಬ ಸಿನಿಮಾನಾ ನಿರ್ದೇಶನ ಮಾಡಿದ್ದಾರೆ.