ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ, ಬಹುತಾರಾಗಣದ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ " 45" ಚಿತ್ರ ಡಿಸೆಂಬರ್ 25 ರಂದು ತೆರೆಗೆ ಬರಲಿದೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ಸೂರಜ್ ಪ್ರೊಡಕ್ಷನ್ ” ಬ್ಯಾನರ್ ನಲ್ಲಿ ನಿರ್ಮಿಸಿರುವ ಪ್ಯಾನ್ ಇಂಡಿಯಾ ಚಿತ್ರ “45” ಆಗಸ್ಡ್ 15 ರಂದು ತೆರೆಗೆ ಬರಬೇಕಾಗಿತ್ತು. ವಿ ಎಫ್ ಎಕ್ಸ್ ಕೆಲಸ ಕಾರ್ಯಗಳಿಂದ ತಡವಾಗುತ್ತಿರುವ ಹಿನ್ನೆಲೆಯಲ್ಲಿ ಡಿಸೆಂಬರ್ 25 ಕ್ಕೆ ಚಿತ್ರ ತೆರೆಗೆ ಬರುತ್ತಿದೆ.
ಸಾಮಾನ್ಯವಾಗಿ ಡಿಸೆಂಬರ್ ಕೊನೆಯಲ್ಲಿ ಅಂದರೆ ಕ್ರಿಸ್ಮಸ್ ವೇಳೆಗೆ ತೆರೆಗೆ ಬರುವ ಎಲ್ಲಾ ಚಿತ್ರಗಳು ಸೂಪರ್ ಡೂಪರ್ ಹಿಟ್ ಆಗಿವೆ ಈ ಹಿನ್ನೆಲೆಯಲ್ಲಿ 45 ಚಿತ್ರ ಡಿಸೆಂಬರ್ 25ಕ್ಕೆ ತೆರೆಗೆ ಬರುತ್ತಿದ್ದು ಈ ಚಿತ್ರವೂ ಯಶಸ್ವಿಯಾಗುವ ಮುನ್ಸೂಚನೆ ನೀಡಿದೆ.
ಜೊತೆಗೆ ಸದಭಿರುಚಿಯ ನಿರ್ಮಾಪಕ ಅರ್ಜುನ್ ಜನ್ಯ ಮತ್ತು ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಚೊಚ್ಚಲ ಬಾರಿಗೆ ಚಿತ್ರ ಮೂಡಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 25 ರಂದು ಚಿತ್ರ ಬಿಡುಗಡೆಯಾಗುತ್ತುದೆ ಎನ್ನುವುದನ್ನು ನಿರ್ಮಾಪಕ ರಮೇಶ್ ರೆಡ್ಡಿ ಹಾಗು ನಿರ್ದೇಶಕ ಅರ್ಜುನ್ ಜನ್ಯ ಪ್ರಕಟಿಸಿದರು.
ನಿರ್ಮಾಪಕ ರಮೇಶ್ ರೆಡ್ಡಿ ಮಾತನಾಡಿ, ಎಲ್ಲಾ ಅಂದುಕೊಂಡಂತೆ ಆದರೆ ಆಗಸ್ಟ್ 15 ಕ್ಕೆ ಚಿತ್ರ ಬಿಡುಗಡೆಯಾಗಬೇಕಾಗಿತ್ತು. ಚಿತ್ರದ ವಿ ಎಫ್ ಎಕ್ಸ್ ಚಿತ್ರದ ಕೆಲಸಗಳು ಕೆನಡಾದಲ್ಲಿ ನಡೆಯುತ್ತಿವೆ. ಅದರ ಕೆಲಸಗಳು ತೃಪ್ತಿ ಆಗದ ಹಿನ್ನೆಲೆಯಲ್ಲಿ ತಡ ಆಗುತ್ತಿದೆ. ಜೊತೆಗೆ ಚಿತ್ರದ ನಾಯಕರು, ನಿರ್ದೇಶಕರು ಮತ್ತು ನಮ್ಮ ಗುರು ಬಕದ ಆಧಾರದ ಮೇಲೆ ಡಿಸೆಂಬರ್ 25 ಒಳ್ಳೆಯ ದಿನ ಎನ್ನುವುದು ತಿಳಿಸಿದ್ದರಿಂದ ಅಂದೇ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ ಎಂದರು.
ಚಿತ್ರದಲ್ಲಿ ಅದ್ದೂರಿ ಗುಣಮಟ್ಟದ ವಿ ಎಫ್ ಎಕ್ಸ್ ಕೆಲಸ ನಡೆಯುತ್ತಿದೆ. ಮೈಸೂರಿನವರೇ ಆದ ಯಶ್ ಗೌಡ ಮಾರ್ಸ್ ಸಂಸ್ಥೆಯವ ಮೂಲಕ ವಿಎಫ್ ಎಕ್ಸ್ ಕೆಲಸ ಮಾಡುತ್ತಿದ್ದಾರೆ. ಪ್ರೇಕ್ಷಕರಿಗೆ ನಿರಾಸೆ ಮಾಡುವುದಿಲ್ಲ ಎಂದು ತಿಳಿಸಿದರು.
ಚಿತ್ರದ ವಿತರಣೆ ಬಗ್ಗೆ ತೆಲುಗಿನ ಮೈತ್ರಿ ಮೂವಿ ಮೇಕರ್ಸ್ ವಿತರಣೆ ಹಕ್ಕು ಕೇಳಿದರು. ವಿ ಎಫ್ ಎಕ್ಸ್ ಕೆಲಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಲಸ ಮುಗಿದ ಮೇಲೆ ಮಾತನಾಡೋಣ ಎಂದು ತಿಳಿಸಿದ್ದೇನೆ. ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಲಾಗಿದ್ದು ಎಲ್ಲರಿಗೂ ಇಷ್ಡವಾಗಲಿದೆ ಎಂದು ಮಾಹಿತಿ ಹಂಚಿಕೊಂಡರು.
ನಿರ್ದೇಶಕ ಅರ್ಜುನ್ ಜನ್ಯ ಮಾತನಾಡಿ ಚಿತ್ರದ ವಿಎಫ್ ಎಕ್ಸ್ ಕೆಲಗಳು ನಡೆಯುತ್ತಿವೆ. ಹೀಗಾಗಿ ತಡ ಆಗುತ್ತಿದೆ. ಈಗಾಗಲೇ ಶೇಕಡಾ 70ಕ್ಕೂ ಅಧಿಕ ವಿಎಫ್ ಎಕ್ಸ್ ಚಿತ್ರದ ಕೆಲಸಗಳು ಪೂರ್ಣಗೊಂಡಿವೆ. ಈಗ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಸಿಜಿ ಕೆಲಸ ಮಾಡುತ್ತಿರುವ ನಾಲ್ಕೈದು ಕಂಪನಿಗಳುಬ ಮೇ ನಲ್ಲಿ ಕೆಲಸ ಮುಗಿಸಿ ಕೊಡುವುದಾಗಿ ಹೇಳಿದ್ದವು. ಹೀಗಾಗಿ ಆಗಸ್ಟ್ 15 ಕ್ಕೆ ಬಿಡುಗಡೆ ಮಾಡಲು ನಿರ್ಧರಿಸಿದ್ದೆವು. ಸಿಜಿ ಕೆಲಸ ತಡವಾಗುತ್ರಿರುವ ಹಿನ್ನೆಲೆಯಲ್ಲಿ ಈಗ ಚಿತ್ರ ಡಿಸೆಂಬರ್ ನಲ್ಲಿ ತೆರೆಗೆ ಬರುತ್ತಿದೆ. ನಿರ್ದೇಶಕನಾಗಿ ಮೊದಲ ಸಿನಿಮಾ. ಸೂರಜ್ ಪ್ರೊಡಕ್ಷನ್ ನ ನಿರ್ಮಾಪಕರದ ರಮೇಶ್ ರೆಡ್ಡಿ ಅವರು ಬೆನ್ನೆಲುಬಾಗಿ ನಿಂತು ಆಶೀರ್ವಾದ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಚಿತ್ರ ನೋಡುವ ಮಂದಿಗೆ ಮತ್ತು ಪ್ರೇಕ್ಣಕರಿಗೆ ಯಾವುದೇ ಕಾರಣಕ್ಕೂ ನಿಎಅಸೆ ಮಾಡಬಾರದು ಎನ್ನುವ ಕಾರಣಕ್ಕಾಗಿ ಸಿಜಿ ಕೆಲಸ ನಡೆಯುತ್ತಿದೆ. ಅಂದುಕೊಂಡಂತೆ ಚಿತ್ರದ ಸಿಜಿ ಕೆಲಸ ನಡೆಯುತ್ತಿದೆ. ಚಿತ್ರಕ್ಕೆ ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು
46 ಚಿತ್ರದ ಕನ್ನಡದ ಜೊತೆಗೆ ತೆಲುಗು, ತಮಿಳು,ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಶಿವಣ್ಣ, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಚಿತ್ರದ ಬಗ್ಗೆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚುವಂತೆ ಮಾಡಿದೆ.