ನಿರೂಪಕಿ, ನಟಿ ಅನೂಶ್ರೀ ಹೊಸ ಬಾಳಿಗೆ ಅಡಿ ಇಟ್ಟಿದ್ದಾರೆ, ಗುರು ಹಿರಿಯರು, ಕುಟುಂಬದ ಸದಸ್ಯರು ಆಪ್ತರ ಸಮ್ಮುಖದಲ್ಲಿ ಕೊಡಗಿನ ಹುಡುಗ ರೋಶನ್ ಜೊತೆ ಬೆಂಗಳೂರಿನ ಹೊರ ಹೊಲಯದ ರೆಸಾರ್ಟ್‍ನಲ್ಲಿ ಬದುಕಿನ ಮತ್ತೊಂದು ಹೊಸ ಅಧ್ಯಾಯಕ್ಕೆ ಸಜ್ಜಾಗಿದ್ದಾರೆ.
ಕೊಡಗಿನ ರಾಮಮೂರ್ತಿ ಮತ್ತು ಸಿಸಿಲಿಯಾ ದಂಪತಿಯ ಪುತ್ರ ರೋಶನ್ ಅವರನ್ನು ಮಾತಿನ ಮಲ್ಲಿ ಅನುಶ್ರೀ ಅವರು ಬೆಳಗ್ಗೆ 10.56ಕ್ಕೆ ನಡೆದ ಶುಭ ಮಹೂರ್ತದಲ್ಲಿ ಮದುವೆಯಾಗಿದ್ದಾರೆ.
ರೆಸಾರ್ಟ್‍ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ನಟರಾದ ರಾಜ್ ಬಿ ಶೆಟ್ಟಿ, ಶರಣ್, ಜೀ ವಾಹಿನಿ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, ನಟಿಯರಾದ ಕಾವ್ಯಾ ಶಾ, ಚೈತ್ರಾ ಜೆ ಆಚಾರ್, ಸೋನಲ್ ಮೊಂಥೆರೋ ಮುಂತಾದವರು ಭಾಗಿಯಾಗಿ ಹೊಸ ದಂಪತಿಗೆ ಶುಭ ಹಾರೈಸಿದರು.
ಕನ್ನಡ ಕಿರುತೆರೆ ಲೋಕದಲ್ಲಿ ನಿರೂಪಣೆಯಲ್ಲಿ ಸೂಪರ್ ಸ್ಟಾರ್ ಪಟ್ಟಗಿಟ್ಟಿಸಿಕೊಂಡಿರುವ ನಿರೂಪಕಿ ಅನೂಶ್ರೀ, ನಿರೂಪಣೆಯ ಜೊತೆ ಜೊತೆಗೆ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಅದೃಷ್ಠ ಪರೀಕ್ಷೆ ಮಾಡಿಕೊಂಡವರು, “ಬೆಂಕಿ ಪಟ್ಟಣ” ಉಪ್ಪು ಹುಳಿ ಖಾರ” ಸಿನಿಮಾಗಳಲ್ಲಿ ನಟಿಸಿ ನಟನೆಯಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಜೊತೆಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಿಂಚಿದವರು. ನಟಿ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರೂ ನಿರೂಪಕಿಯಾಗಿ ನಾಡಿನ ಮನೆ ಮಾತಾಗಿದ್ದಾರೆ.
ಚಿಕ್ಕವಯಸ್ಸಿಗೆ ಬದುಕಿನ ಬಾರ ಹೊತ್ತುಕೊಂಡು ತಾಯಿ ಮತ್ತು ತಮ್ಮನನ್ನು ಕಣ್ಣ ರೆಪ್ಪೆಯಂತೆ ಕಾಪಾಡಿಕೊಂಡು ಬಂದು ಅವರಿಗಾಗಿ ಬದುಕುಕಟ್ಟಿಕೊಟ್ಟವರು ಅನೂಶ್ರೀ, ತಾನೂ ಬೆಳೆಯುತ್ತಾ ತನ್ನ ಆತ್ಮೀಯರು ಸ್ನೇಹಿತರುಗೆ ಬೆನ್ನಲೆಬಾಗಿದ್ದಾರೆ