Chief Editor
Manohar. R (Manu)
Photo Journalist
chitrataramanu@gmail.com
+91 9845549026
ಶಿವ ಶಿವ ಎಂದರೆ ಭಯವಿಲ್ಲ ...ರೇಟಿಂಗ್ :- 3.5/5
Posted date: 29 Fri, Aug 2025 09:22:14 PM
ಚಿತ್ರ: ಗಂಗೆಗೌರಿ
ನಿರ್ಮಾಣ: ಗಣೇಶ್‌ರಾವ್ ಕೇಸರ್‌ಕರ್
ಸಹ ನಿರ್ಮಾಪಕರು: ತುಳಜಾಬಾಯಿ, ರೂಪ.ಎಸ್.ದೊಡ್ಮನಿ, ಸುಮಿತ ಪ್ರವೀಣ್, ಬಸವರಾಜ್ ದೇಸಾಯಿ
ಚಿತ್ರಕಥೆ, ಸಾಹಿತ್ಯ ಮತ್ತು ನಿರ್ದೇಶನ: ಬಿ.ಎ.ಪುರುಷೋತ್ತಮ್
ತಾರಾಗಣ: ಗಣೇಶ್‌ರಾವ್ ಕೇಸರ್‌ಕರ್, ರೂಪಾಲಿ, ನಿಖಿತಾಸಿಂಗ್, ಕು.ಋತುಸ್ಪರ್ಶ, ಸುಮಿತಾಪ್ರವೀಣ್, ಜಯಸಿಂಹಮೂಸೂರಿ, ಎಸ್ಕಾರ್ಟ್ ಶ್ರೀನಿವಾಸ್, ಜಿಮ್‌ಶಿವು, ಬಸವರಾಜದೇಸಾಯಿ, ಮಮತಗೌಡ ಮುಂತಾದವರು
ಸಂಗೀತ: ರಾಜ್‌ಭಾಸ್ಕರ್
 
ಬರಡುಭೂಮಿಯಲ್ಲಿ ನೀರು ಸಿಕ್ಕಂತೆ  ದೇವರ ಭಕ್ತರಿಗೆ ಗಂಗೆಗೌರಿ ಸಿನಿಮಾ ಹೇಳಿ ಮಾಡಿಸಿದಂತಿದೆ. ಶಿವ ಪುರಾಣದಲ್ಲಿ ಗಂಗೆ ಗೌರಿ ಸಂಬಂಧ ಏನು? ಗಂಗೆ ಯಾಕೆ ಶಿವನ ತಲೆ ಮೇಲೆ ಇರುತ್ತಾಳೆ? ಗೌರಿ ಯಾಕೆ ಶಿವನ ತೊಡೆ ಮೇಲೆ ಕೂತಿರುತ್ತಾಳೆ? ಇಬ್ಬರನ್ನು ಶಿವನು ಯಾವ ರೀತಿ ಸಂಭಾಳಿಸುತ್ತಾನೆ. ಇದರಲ್ಲಿ ಕೈಲಾಸವನ್ನು ಸೌಹಾರ್ದತೆಗೆ ಹೋಲಿಸಲಾಗಿದೆ. ಜಗತ್ ರಕ್ಷಕನಾದ ಪರಮೇಶ್ವರನಿಗೂ ವಿಧಿಯ ಕಾಟ ತಪ್ಪಿಲ್ಲ. ಕೈಲಾಸದಲ್ಲಿ ಗಂಗೆ ಗೌರಿ ಸವತಿಯಂತೆ ಕಂಡರೂ, ಭೂಲೋಕ ಬರಲು ಕಾರಣವೇನು? ಇಲ್ಲಿ ಇಬ್ಬರು ಗೆಳತಿಯರಂತೆ ಇರುತ್ತಾರೆ. ಮಾರುವೇಷದಲ್ಲಿ ಶಿವಯ್ಯನಾಗಿ ಬರುವ ಪರಮಾತ್ನನಿಗೆ ಏನೆಲ್ಲಾ ಆಗುತ್ತದೆ. ಶನಿದೇವನಿಂದ ಮೂವರು ಹೇಗೆ ಕಷ್ಟ ಅನುಭವಿಸುತ್ತಾರೆ. ಶನಿದೇವ ಈಶ್ವರಪಟ್ಟ ಪಡೆಯೆಲು ನಾರದನ ಜತೆ ಸೇರಿಕೊಂಡು ಏನೆಲ್ಲಾ ಕಸರತ್ತು ನಡೆಸುತ್ತಾರೆ. ಕೊನೆಗೆ ಅದರಿಂದ ಜಯ ಸಿಗುತ್ತದಾ? ಇವೆಲ್ಲವೂ ಅರ್ಥವಾಗುವಂತೆ ಸನ್ನಿವೇಶಗಳ ಮೂಲಕ ಚೆನ್ನಾಗಿ ತೋರಿಸಲಾಗಿದೆ.
  
ಭಕ್ತಿಪ್ರಧಾನ ಸಿನಿಮಾಗಳ ಖ್ಯಾತಿಯ ಬಿ.ಎ.ಪುರುಷೋತ್ತಮ್ ಚಿತ್ರಕತೆ, ಸಾಹಿತ್ಯ ಬರೆದು ನಿರ್ದೇಶನದಲ್ಲಿ ಸೈ ಅನಿಸಿಕೊಂಡಿದ್ದಾರೆ.
 
ಹಿರಿಯ ನಟ ಗಣೇಶ್‌ರಾವ್ ಕೇಸರ್‌ಕರ್ ಶಿವನಾಗಿ ಕಾಣಿಸಿಕೊಂಡಿದ್ದು, ಇದು ಅವರ 350ನೇ ಚಿತ್ರ ಎಂಬುದು ವಿಶೇಷ. ರಂಗಭೂಮಿ ನಟಿ ರೂಪಾಲಿ ಮೂರು ಶೇಡ್‌ಗಳಲ್ಲಿ ಅಂದರೆ ಗೌರಿ, ಪಾರ್ವತಿ, ದಾಕ್ಷಾಯಿಣಿ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗಂಗೆಯಾಗಿ ನಿಖಿತಾಸ್ವಾಮಿ ಇಬ್ಬರು ಗಮನ ಸೆಳೆಯುತ್ತಾರೆ. ನಾರದನಾಗಿ ಜಯಸಿಂಹಮುಸೂರಿ, ಶನಿದೇವನಾಗಿ ಎಸ್ಕಾರ್ಟ್ ಶ್ರೀನಿವಾಸ್, ಬಾಲ ಗೌರಿಯಾಗಿ ಕು.ಋತುಸ್ಪರ್ಶ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ಸುಮಿತಾ ಪ್ರವೀಣ್, ಜಿಮ್‌ಶಿವು ಬಸವರಾಜದೇಸಾಯಿ, ಧನಲಕ್ಷಿ, ಮಮತಗೌಡ, ಗೀತಾ, ರಕ್ಷಾಗೌಡ ನಟಿಸಿದ್ದಾರೆ. ರಾಜ್‌ಭಾಸ್ಕರ್ ಸಂಗೀತ, ಗೌರಿವೆಂಕಟೇಶ್ ಛಾಯಾಗ್ರಹಣ, ಸಂಕಲನ-ಗ್ರಾಫಿಕ್ಸ್-ಡಿಐ ಅನಿಲ್ ಇವೆಲ್ಲವೂ ಚಿತ್ರಕ್ಕೆ ಪೂರಕವಾಗಿದೆ. ಒಟ್ಟಿನಲ್ಲಿ ಶಿವನ ಲೀಲೆಗಳನ್ನು ಕಣ್ತುಂಬಿಕೊಳ್ಳಬಹುದು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಶಿವ ಶಿವ ಎಂದರೆ ಭಯವಿಲ್ಲ ...ರೇಟಿಂಗ್ :- 3.5/5 - Chitratara.com
Copyright 2009 chitratara.com Reproduction is forbidden unless authorized. All rights reserved.