Chief Editor
Manohar. R (Manu)
Photo Journalist
chitrataramanu@gmail.com
+91 9845549026
``ಮಾಂಗಲ್ಯ``ಸೆಪ್ಟಂಬರ್ 2 ಮಂಗಳವಾರ ಉದಯ ಟಿವಿ ದಲ್ಲಿ
Posted date: 30 Sat, Aug 2025 10:15:22 AM
ಸದಾ ಕಾಲದಿಂದಲೂ ವಿಭಿನ್ನ ಹಾಗೂ ಎಲ್ಲರೂ ಇಷ್ಟಪಡುವ ಸೀರಿಯಲ್‌ಗಳನ್ನು  ವೀಕ್ಷಕರಿಗೆ ನೀಡುತ್ತಿರುವ ಉದಯ ವಾಹಿನಿಯಲ್ಲಿ ಮಾಂಗಲ್ಯ ಹೆಸರಿನ ನೂತನ  ಧಾರವಾಹಿ ಸಿದ್ದವಾಗಿದೆ. ದುರ್ಗಾಪುರದ ಬಡತನದಲ್ಲಿ ಬೆಳೆದ ಮಯೂರಿ, ಮನೆ ಮಗನಂತೆ ಶ್ರೀಮಂತ ಕುಟುಂಬದಲ್ಲಿ ಎಲ್ಲಾ ಜವಬ್ದಾರಿ ನಿಭಾಯಿಸುವಂತ ದಿಟ್ಟ ಹುಡುಗಿ. ಆ ಶ್ರೀಮಂತ ಮನೆಯ ಕುಲಪುತ್ರ ತಾರಾಕ್. ಅಮ್ಮನ ಅಹಂಕಾರದ ವರ್ತನೆಗಳು ಅವನಿಗೆ ಹಿಡಿಸುತ್ತಿರುವುದಿಲ್ಲ. ಕಾರಣಾಂತದಿಂದ ಮದ್ಯವ್ಯಸನಿಯಾಗಿರುತ್ತಾನೆ. ಒಳ್ಳೆ ಮನಸ್ಸಿನ ಕುಡುಕ ಒಂದು ಸಂದರ್ಭದಲ್ಲಿ ಅಮ್ಮನ ಅಹಂಕಾರವನ್ನು ಮುರಿಯಲು ಮಯೂರಿಗೆ ತಾಳಿ ಕಟ್ಟುತ್ತಾನೆ. ಅಲ್ಲಿಂದ ಆಕೆಯ ಜೀವನದ ಹೊಸ ಪಯಣ ಶುರುವಾಗುತ್ತದೆ.

 ಗಾಂಧಾರಿ, ಲಕ್ಷಣ, ಶ್ರೀಗೌರಿ ಧಾರವಾಹಿಗಳಲ್ಲಿ ಹೆಸರು ಮಾಡಿರುವ ಬಿಗ್‌ಬಾಸ್‌ನ ಜಗನ್ ನಾಯಕ, ನಿರ್ದೇಶಕ ಮತ್ತು ನಿರ್ಮಾಣ ಮಾಡುತ್ತಿದ್ದಾರೆ.  ಅನುರೂಪ, ಗಿರಿಜಾ ಕಲ್ಯಾಣ, ಸರ್ವ ಮಂಗಳ ಮಾಂಗಲ್ಯೆ, ಸುಂದರಿ ಧಾರವಾಹಿಗಳು, ಹಾಗೂ ಸಂತು ಸ್ಟ್ರೈಟ್ ಫಾರ್ವಡ್, ಶ್ರೀಕಂಠ ಸಿನಿಮಾಗಲ್ಲಿ ನಟಿಸಿರುವ ಐಶ್ವರ್ಯ ಪಿಸ್ಸೆ ಇದರಲ್ಲಿ ಗಂಡನನ್ನು ಸರಿದಾರಿಗೆ ತರುವ ಪಾತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಜಾನ್ಸಿ, ಬಿ.ಎಂ.ವೆಂಕಟೇಶ್, ಇಂಚರ, ದಿಶಾ, ಹನುಮಂತು, ಜಯಬಾಲು, ಚಿತ್ರಾ, ರೂಪೇಶ್, ದಾಮಿನಿ ಮುಂತಾದವರು ಅಭಿನಯಿಸುತ್ತಿದ್ದಾರೆ.

 ನವೀನ್ ಸೋಮನಹಳ್ಳಿ ಸಂಚಿಕೆ ನಿರ್ದೇಶನವಿದೆ. ಛಾಯಾಗ್ರಹಣ ಮಂಜು, ಸಂಕಲನ ಧನು ಅವರದಾಗಿದೆ. ಇದೇ ಸೆಪ್ಟಂಬರ್ 2ರಂದು ಮಂಗಳವಾರ ಸಂಜೆ 7 ಗಂಟೆಗೆ, ನಂತರ ಪ್ರತಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 7 ಗಂಟೆಗೆ ಉದಯ ಟಿವಿ ದಲ್ಲಿ ಪ್ರಸಾರವಾಗಲಿದೆ
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ಮಾಂಗಲ್ಯ``ಸೆಪ್ಟಂಬರ್ 2 ಮಂಗಳವಾರ ಉದಯ ಟಿವಿ ದಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.