ಚಿತ್ರ : ಅಂದೊಂದಿತ್ತು ಕಾಲ
ನಿರ್ದೇಶನ: ಕೀರ್ತಿ
ತಾರಾಗಣ: ವಿನಯ್ ರಾಜ್‍ಕುಮಾರ್, ಅದಿತಿ ಪ್ರಭುದೇವ, ರವಿಚಂದ್ರನ್, ನಿಶಾ ರವಿಕೃಷ್ಣನ್,ಕಡ್ಡಿಪುಡಿ ಚಂದ್ರು, ಪ್ರೊ, ದೊಡ್ಡರಂಗೇಗೌಡ, ಅರುಣಾ ಬಾಲರಾಜ್, ಜಗ್ಗಪ್ಪ, ನಿರ್ಮಾಪಕ ಸುರೇಶ್ ಮತ್ತಿತರರು
ರೇಟಿಂಗ್ : * 3.5/ 5
ಸಹಾಯಕ ನಿರ್ದೇಶಕ, ನಿರ್ದೇಶಕರಾಗಲು ಬಯಸುವ ಮಂದಿಯ ಕಥೆ ವ್ಯಥೆಯನ್ನು ಮುಂದಿಟ್ಟುಕೊಂಡು ತೆರೆಗೆ ತಂದಿರುವ ಚಿತ್ರ” ಅಂದೊಂದಿತ್ತು ಕಾಲ”.
ನಿರ್ದೇಶಕ ಕೀರ್ತಿ ಚಿತ್ರರಂಗದ ಕಥೆ,ವ್ಯಥೆ ಸಾಧನೆ ಮಾಡಲು ಬರುವ ಮಂದಿಯ ಕಷ್ಟ ಕೋಟಲೆ ಸೇರಿದಂತೆ ಇನ್ನಿಲ್ಲದ ಸಮಸ್ಯೆಯನ್ನು ಕಣ್ಣಿಗೆ ಕಟ್ಟುವ ರೀತಿ ಕಟ್ಟಿಕೊಟ್ಟಿದ್ದಾರೆ
ಕುಮಾರ (ವಿನಯ್ ರಾಜ್ ಕುಮಾರ್) ಅವರಿಗೆ ಎಲ್ಲಿಲ್ಲದ ಪ್ರೀತಿ,
ವ್ಯಾಮೋಹ,ಅದರಲ್ಲಿಯೂ ಪುಟ್ಟಣ್ಣ ಕಣಗಾಲ್ ಅಂದರೆ ಅಚ್ಚುಮೆಚ್ಚು. ಅಪ್ಪ ಟೆಂಟ್‍ನಲ್ಲಿ ಪ್ರೊಜೆಕ್ಟರ್ ಆಗಿರುವ ಹಿನ್ನೆಲೆಯಲ್ಲಿ ಸಿನಿಮಾ ನೋಡು ಬೆಳೆದವ, ದೊಡ್ಡವನಾದ ಮೇಲೆ ನಿರ್ದೇಶಕನಾಗಬೇಕು ಎನ್ನುವ ಆಸೆ ಹೆಮ್ಮೆರವಾಗಿ ಬೆಳೆಯುತ್ತದೆ.
ಈ ನಡುವೆ ಶಾಲೆಯಲ್ಲಿ ಇರುವ ವೇಳೆ ಸಾಕ್ಷಿ (ನಿಶಾ ರವಿಕೃಷ್ಣನ್) ಮೇಲೆ ಕ್ರಶ್ ಆಗುತ್ತದೆ, ಆಕೆಯ ಹಿಂದೆ ಮುಂದೆ ತಿರುಗಿದ್ದೂ ಉಂಟು, ಆಕೆ ಮುದುವೆಯಾದವಳು ಎನ್ನುವ ಸಂಗತಿ ಆಕಾಶವೇ ಕಳಚಿ ಬಿದ್ದಂತಾಗುತ್ತದೆ. ಈ ನಡುವೆ ವಸುಂಧರ (ಅದಿತಿ ಪ್ರಭುದೇವ) ಪರಿಚಯ.ಮುಂದೇನು ಎನ್ನುವುದನ್ನು ಚಿತ್ರದ ಕಥನ ಕುತೂಹಲ ಅದನ್ನು ಸಿನಿಮಾದಲ್ಲಿ ನೋಡಬೇಕು.
ನಿರ್ದೇಶಕ ಕೀರ್ತಿ ಚಿತ್ರರಂಗದ ನೈಜ ಸಮಸ್ಯೆಯನ್ನು ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ ಜೊತೆಗೆ ಪ್ರೀತಿ,ಸ್ನೇಹ ಎಲ್ಲವೂ ಒಟ್ಟುಗೂಡಿ ಚಿತ್ರವನ್ನು ಕುತೂಹಲಕಾರಿಯಾಗಿಸಿದೆ.
ನಟ ವಿನಯ್ ರಾಜ್ ಕುಮಾರ್ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಜೊತೆಗೆ ಇದುವರೆಗಿನ ಪಾತ್ರಗಳಲ್ಲಿ ವಿಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ನಟಿ ಅದಿತಿ ಪ್ರಭುದೇವ, ನಿಶಾ ರವಿಕೃಷ್ಣನ್, ರವಿಚಂದ್ರನ್,ನಿಶಾ ರವಿಕೃಷ್ಣನ್, ಕಡ್ಡಿಪುಡಿ ಚಂದ್ರು, ಪ್ರೊ, ದೊಡ್ಡ ರಂಗೇಗೌಡ, ಅರುಣಾ ಬಾಲರಾಜ್, ಜಗ್ಗಪ್ಪ, ನಿರ್ಮಾಪಕ ಸುರೇಶ್ ಮತ್ತಿತತರು ಚಿತ್ರದಲ್ಲಿದ್ದಾರೆ.