Chief Editor
Manohar. R (Manu)
Photo Journalist
chitrataramanu@gmail.com
+91 9845549026
``ಆಸ್ಟಿನ್ ನ ಮಹನ್ಮೌನ`` ಟ್ರೈಲರ್ ಲಾಂಚ್ ಮಾಡಿದ ನಿರ್ಮಾಪಕ ಕೆ. ಮಂಜು... ಸೆಪ್ಟೆಂಬರ್ 05ಕ್ಕೆ ರಿಲೀಸ್
Posted date: 30 Sat, Aug 2025 11:53:38 AM
ಬೆಳ್ಳಿ ಪರದೆ ಮೇಲೆ ಯುವ ಪ್ರತಿಭೆಗಳ ತಂಡ ನಿರ್ಮಾಣದ ವಿಭಿನ್ನ  ಪ್ರಯತ್ನದ "ಆಸ್ಟಿನ್ ನ ಮಹನ್ಮೌನ" ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭವನ್ನು ಬೆಂಗಳೂರಿನ ಜಿ ಟಿ ಮಾಲ್  ನಲ್ಲಿರುವ ಎಂ. ಎಂ .ಬಿ ಲೆಗಸಿಯಲ್ಲಿ  ಆಯೋಜನೆ ಮಾಡಿದ್ದು , ಖ್ಯಾತ ನಿರ್ಮಾಪಕ ಕೆ. ಮಂಜು ಮುಖ್ಯ ಅತಿಥಿಯಾಗಿ  ಕಾರ್ಯಕ್ರಮಕ್ಕೆ ಆಗಮಿಸಿದ್ದರು.
 
ಚಿತ್ರದ ಟ್ರೈಲರ್ ಬಿಡುಗಡೆಗು ಮುನ್ನ , ಸಂಗೀತ ನಿರ್ದೇಶಕ ವಿಶ್ವಿ ಹಾಗೂ ತಂಡದ ವತಿಯಿಂದ ಸಿನಿಮಾದ ಹಾಡುಗಳ ಲೈವ್ ಇನ್ಸ್ಟ್ರುಮೆಂಟಲ್  ಪ್ರದರ್ಶನ ನಡೆಸಲಾಯಿತು. ನಮ್ಮ ನಾಡು ಕಂಡ ಪ್ರಖ್ಯಾತ  ಕವಿ , ತತ್ವಜ್ಞಾನಿ , ಬರಹಗಾರ ಡಿವಿಜಿ ರವರ ಮೊಮ್ಮಗ ಸುಬ್ರಮಣಿ ರವರು ಬಂದಿದ್ದು ಮತ್ತೊಂದು ವಿಶೇಷ . ಇವರು ಈ ಚಿತ್ರದ ನಟ , ನಿರ್ದೇಶಕ , ನಿರ್ಮಾಪಕ ವಿನಯ್ ಕುಮಾರ್ ವೈದ್ಯನಾಥನ್ ಸೋದರ ಮಾವ ಕೂಡ ಹೌದು. ಬಹಳ ಅಚ್ಚುಕಟ್ಟಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದ ಟ್ರೈಲರ್ ಬಿಡುಗಡೆ ಮಾಡಿದ ನಂತರ ನಿರ್ಮಾಪಕ ಕೆ. ಮಂಜು ಮಾತನಾಡುತ್ತಾ ನಾನು ಈ ಕಾರ್ಯಕ್ರಮಕ್ಕೆ ಬರಲು ಮುಖ್ಯ ಕಾರಣ ನಮ್ಮ ಗುರುಗಳಾದ ಸುಬ್ರಮಣಿ , ಇವರು ಬೇರೆ ಯಾರು ಅಲ್ಲ ಡಿವಿಜಿ ಅವರ ಮೊಮ್ಮಗ, ಅವರ ಅಳಿಯ ನಟಿಸಿ , ನಿರ್ಮಿಸುತ್ತಿರುವ ಈ ಚಿತ್ರದ ಟ್ರೈಲರ್ ಬಹಳ ವಿಭಿನ್ನವಾಗಿ ಬಂದಿದೆ. ಇತ್ತೀಚೆಗೆ ಬಿಡುಗಡೆಗೊಂಡ ಚಿತ್ರಗಳು ಯಶಸ್ಸನ್ನ ಗಳಿಸುತ್ತಿದೆ. ಆ ಸಾಲಿನಲ್ಲಿ ಈ ಚಿತ್ರವು ಸಾಗಲಿ. ನಟ ವಿನಯ್ ಬಹಳಷ್ಟು ಕಲಿತುಕೊಂಡಿದ್ದಾನೆ , ಸಿನಿಮಾ ಬಗ್ಗೆ ಚೆನ್ನಾಗಿ ತಿಳಿದುಕೊಂಡು ವರ್ಷಗಟ್ಟಲೆ ಕೆಲಸ ಮಾಡಿದ್ದಾನೆ. ಈ ಚಿತ್ರವನ್ನು ಕೆ ಆರ್ ಜಿ ಫಿಲಂಸ್ ರಿಲೀಸ್ ಮಾಡುತ್ತಿದ್ದು ,  ಹೆಚ್ಚು ಮಲ್ಟಿಪ್ಲೆಕ್ಸ್ ನಲ್ಲೆ ರಿಲೀಸ್ ಮಾಡು ಎಂದಿದ್ದೇನೆ. ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.
 
ಇನ್ನು ನಟ ವಿನಯ್ ಸೋದರಮಾವ ಸುಬ್ರಮಣಿ ಮಾತನಾಡುತ್ತಾ ನನ್ನ ತಂಗಿಯ ಮಗ ಇಂಜಿನಿಯರ್ ಓದಿದ್ದು , ಈ ಸಿನಿಮಾ ಕ್ಷೇತ್ರಕ್ಕೆ ಯಾಕೆ ಬಂದ ಎಂಬ ಪ್ರಶ್ನೆ ನನ್ನಲ್ಲಿ ಇತ್ತು. ಬರವಣಿಗೆ , ಸಾಹಿತ್ಯದ ಬಗ್ಗೆ ಬಹಳಷ್ಟು ಆಸಕ್ತಿ ಬೆಳೆಸಿಕೊಂಡಿದ್ದಾನೆ. ವಿಲಿಯಮ್ಸ್  ಶೇಕ್ಸ್ಪಿಯರ್ ಮಾತಿನಂತೆ ` literature index of life`... ಎನ್ನುವಂತೆ ನಮ್ಮ ಹುಡುಗನ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲ ಕೊಡಿ , ಚಿತ್ರವನ್ನ ಯಶಸ್ವಿಗೊಳಿಸಿ ಎಂದು ಕೇಳಿಕೊಂಡರು.  
 
ಇನ್ನು ಈ ಚಿತ್ರದ ನಟ , ನಿರ್ದೇಶಕ , ನಿರ್ಮಾಪಕನಾದ ವಿನಯ್ ಕುಮಾರ್ ವೈದ್ಯನಾಥನ್ ಮಾತನಾಡುತ್ತಾ ನಾನು ಎಲೆಕ್ಟ್ರಿಕಲ್ ಇಂಜಿನಿಯರ್ ಮುಗಿಸಿದ ನಂತರ ಸಿನಿಮಾ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದೆ. ಬಹಳಷ್ಟು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಅನುಭವ ಪಡೆದು , ನಂತರ ಕಿರು ಚಿತ್ರಗಳನ್ನ  ನಿರ್ದೇಶಿಸಿ ತನ್ನ 13 ವರ್ಷದ ನಿರಂತರ ಶ್ರಮದ ಫಲವಾಗಿ ಈಗ AVV ಪ್ರೊಡಕ್ಷನ್ಸ್  ಬ್ಯಾನರ್ ಮೂಲಕ ನಾಯಕ ನಟನಾಗಿ ಅಭಿನಯಿಸಿ , ನಿರ್ಮಿಸುವ ಮೂಲಕ  ನಿರ್ದೇಶನವನ್ನ ನಿಭಾಯಿಸಿದ್ದಾನೆ. ಅದರಲ್ಲೂ ನಾನು ಪುನೀತ್ ರಾಜಕುಮಾರ್ ಅವರನ್ನು ಸದಾ ನೆನಪಿಸಿಕೊಳ್ಳುತ್ತೇನೆ. ಅವರ ಚಿತ್ರಗಳಲ್ಲಿ ಕೆಲಸ ಮಾಡಿ ಬಹಳಷ್ಟು ಕಲ್ತಿದ್ದೇನೆ. ಈ ನಮ್ಮ "ಆಸ್ಟಿನ್ ನ ಮಹನ್ಮೌನ" ಚಿತ್ರದಲ್ಲಿ  ಲವ್, ಥ್ರಿಲ್ಲಿಂಗ್ ಹಾಗೂ ಭಾವನಾತ್ಮಕ  ಕಥೆಯನ್ನು ಒಳಗೊಂಡಿದೆ. ಈ ಮಹಾ ಮೌನದ ಹಿಂದಿರುವ ಘಟನೆಯೇ ಇಡಿ ಚಿತ್ರದ ಹೈಲೈಟ್. 90ರ ಕಾಲಘಟ್ಟದಲ್ಲಿ ನಡೆಯುವ  ಕಡಲ ಭಾಗದ ಒಂದು ಕುಟುಂಬದ ಕಥಾನಕವನ್ನು  ಒಳಗೊಂಡಿದೆ. ಪ್ಯೂರ್ ಎಮೋಷನಲ್ ಚಿತ್ರವಾಗಿದ್ದು, ಈ ಚಿತ್ರವು ಕೆಆರ್‌ಜೆ ಫಿಲಂಸ್ ಮೂಲಕ ಇದೇ ಸೆಪ್ಟೆಂಬರ್ 05ರಂದು ರಾಜ್ಯದ್ಯಂತ ರಿಲೀಸ್ ಮಾಡುತಿದ್ದೇವೆ, ನಮ್ಮ ಚಿತ್ರವನ್ನು ಥಿಯೇಟರ್ ಗೆ ಬಂದು ನೋಡಿ ಬೆಂಬಲಿಸಿ ಎಂದರು.
 
ಸಂಗೀತ ನಿರ್ದೇಶಕ ವಿಶ್ವಿ ಮಾತನಾಡುತ್ತ ನಾನು ಆರನೇ ವಯಸ್ಸಿನಿಂದ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ, ನಾನು ಹಾಗೂ ನಟಿ ಪ್ರಕೃತಿ ಒಂದೇ ಕಾಲೇಜಿನಲ್ಲಿ ಓದುತ್ತಿದ್ದಿದ್ದು , ನಾನು ಸಂಗೀತ ನಿರ್ದೇಶಕನಾಗಬೇಕೆಂಬ ಕನಸನ್ನು ಕಂಡೆ , ಅದೇ ರೀತಿ ಪ್ರಕೃತಿ ಕೂಡ ನಟಿ ಆಗಬೇಕು ಎಂದುಕೊಂಡಿದ್ದರು , ಅದರಂತೆ ನಮ್ಮಿಬ್ಬರ ಕನಸು ಈ ಚಿತ್ರದ ಮೂಲಕ ಕೈಗೂಡಿದೆ. ಇವತ್ತು ನನ್ನ ಸಂಗೀತಕ್ಕೆ ಕೈಜೋಡಿಸಿದಂತ ತಂಡ ಲೈವ್ ಮ್ಯೂಸಿಕ್ ಮೂಲಕ ನಮ್ಮ ಚಿತ್ರದ ಹಾಡನ್ನ ಪ್ರದರ್ಶಿಸಿದ್ವಿ , ಈ ಸಿನಿಮಾದಲ್ಲಿ ಒಟ್ಟು ಆರು ಹಾಡು ಇದೆ , ಮೊದಲು ಹಾಡುಗಳು ಇರಲಿಲ್ಲ, ಈಗ ಹಾಡು , ಹಿನ್ನೆಲೆ ಸಂಗೀತ ಎಲ್ಲವೂ ಚಿತ್ರಕ್ಕೆ ಪೂರಕವಾಗಿ ಮೂಡಿ ಬಂದಿದೆ.  ನನ್ನ ಮೊದಲ ಸಂಗೀತ ನಿರ್ದೇಶನದ  ಚಿತ್ರಕ್ಕೆ ಬೆಂಬಲ ನೀಡಿದ ನನ್ನ ತಂಡಕ್ಕೂ ಹಾಗೂ ನನ್ನ ಕುಟುಂಬಕ್ಕೂ ಧನ್ಯವಾದಗಳು ತಿಳಿಸುತ್ತೇನೆ. ನಮ್ಮ ಚಿತ್ರವನ್ನು ಎಲ್ಲರೂ ಬಂದು ನೋಡಿ ಎಂದರು. ಇನ್ನು ಈ ಚಿತ್ರದ ಕೋ ಡೈರೆಕ್ಟರ್ ಕಾರ್ತಿಕ್ ನಾಯಕ್ ಮಾತನಾಡುತ್ತಾ ನಾನು ಕೂಡ ರಂಗಭೂಮಿಯಿಂದ ಬಂದವನು , ಸಂಗೀತದ ಬಗ್ಗೆ ಒಲವಿತ್ತು ಅದರಂತೆ ಈ ತಂಡವು ನನಗೆ ಸಿಕ್ಕಿದ್ದು ನಾವು ಅಂದುಕೊಂಡಂತೆ ಚಿತ್ರ ಬಂದಿದೆ, ಇನ್ನು ಏನಿದ್ದರೂ ನೀವು ನಮ್ಮನ್ನ ಹರಸಿ , ಬೆಳೆಸಬೇಕು ಎಂದರು.
 
ಈ ಚಿತ್ರದ ನಾಯಕಿ ಪ್ರಕೃತಿ ಮಾತನಾಡುತ್ತಾ ಇದು ನನ್ನ ಮೊದಲ ಚಿತ್ರ. ಈ ರೀತಿ ವೇದಿಕೆ ಮೇಲೆ ಮಾಧ್ಯಮದವರ ಮುಂದೆ ಮಾತನಾಡುತ್ತಿರುವುದು ಬಹಳ ಖುಷಿ ಇದೆ. ಹಾಗೆ ನನಗೆ ನಿರ್ದೇಶಕರು ಕೊಟ್ಟಿರುವ ಪಾತ್ರವೂ ಬಹಳ ಉತ್ತಮವಾಗಿದೆ. ನಮ್ಮ ಚಿತ್ರವನ್ನು ನೋಡಿ, ನಮ್ಮಂತ ಪ್ರತಿಭೆಗಳನ್ನ ಪ್ರೋತ್ಸಾಹಿಸಿ  ಎಂದರು. ಹಾಗೆಯೇ ರಂಗಭೂಮಿ ಪ್ರತಿಭೆ ಮತ್ತೋರ್ವ ನಟಿ ರಿಷಾ ಗೌಡ ಮಾತನಾಡುತ್ತಾ ನನ್ನ ಪಾತ್ರ ಬಹಳ ವಿಭಿನ್ನವಾಗಿದೆ. ನನಗೆ ಕೊಟ್ಟ ಪಾತ್ರಕ್ಕೆ ನ್ಯಾಯ ನೀಡುವ ಪ್ರಯತ್ನ ಮಾಡಿದ್ದೇನೆ. ನೀವು ಚಿತ್ರಮಂದಿರದಲ್ಲಿ ನಮ್ಮ ಸಿನಿಮಾ ನೋಡಿ ಹೇಳಬೇಕು ಎಂದು ಕೇಳಿಕೊಂಡರು. ಇದೊಂದು ಕಂಟೆಂಟ್ ಒರಿಯೆಂಟೆಡ್ ಚಿತ್ರವಾಗಿದ್ದು ,   ಬಾಲರಾಜ್ವಾಡಿ , ರಘು ರಾಮನಕೊಪ್ಪ , ಜಗಪ್ಪ , ಸ್ವಾತಿ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಿದ್ದಾರೆ. ಈ  ಚಿತ್ರಕ್ಕೆ ರಾಜಕಾಂತ್ ಛಾಯಾಗ್ರಹಣ ,  ಶ್ರೀನಿವಾಸ್ ಹಾಗೂ ಶಶಿಧರ್ ಸಂಕಲನವಿದೆ. ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮ ಪಟ್ಟಿದ್ದು ,  ಪೂರ್ವ ತಯಾರಿಯನ್ನ ಮಾಡಿಕೊಂಡು ಅದ್ದೂರಿಯಾಗಿ ಸೆಪ್ಟೆಂಬರ್ 05ರಂದು ರಾಜ್ಯದ್ಯಂತ ಚಿತ್ರ ತೆರೆಯ ಮೇಲೆ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ``ಆಸ್ಟಿನ್ ನ ಮಹನ್ಮೌನ`` ಟ್ರೈಲರ್ ಲಾಂಚ್ ಮಾಡಿದ ನಿರ್ಮಾಪಕ ಕೆ. ಮಂಜು... ಸೆಪ್ಟೆಂಬರ್ 05ಕ್ಕೆ ರಿಲೀಸ್ - Chitratara.com
Copyright 2009 chitratara.com Reproduction is forbidden unless authorized. All rights reserved.