ಚಿತ್ರ: ಏಳುಮಲೆ
ನಿರ್ಮಾಣ: ತರುಣ್ ಕಿಶೋರ್ ಸುಧೀರ್, ಅಟ್ಲಾಂಟ ನಾಗೇಂದ್ರ
ನಿರ್ದೇಶನ: ಪುನೀತ್ ರಂಗಸ್ವಾಮಿ
ತಾರಾಗಣ: ರಾಣಾ, ಪ್ರಿಯಾಂಕ, ಟಿ,ಎಸ್ ನಾಗಾಭರಣ, ಕಿಶೋರ್, ಸರ್ದಾರ್ ಸತ್ಯ, ಜಗಪತಿಬಾಬು,ಜಗ್ಗಪ್ಪ, ಕಡ್ಡಿಪುಟಿ ಚಂದ್ರು ಮತ್ತಿತರರು
ರೇಟಿಂಗ್ : ** 4/5 ****
ಹರೀಶಾ ಮನೆಯವರನೆಲ್ಲಾ ಬಿಟ್ಟು ಬರ್ತಾ ಇದ್ದೀನಿ ಕಣೋ ಎಂದು ಒಮ್ಮೆ ನಿಟ್ಟಿಸಿರುವ ಬಿಡ್ತಾಳೆ.. ಆ ಕಡೆಯಿಂದ ಅವರಾರು ನೆನಪಾಗದಂತೆ ನೋಡಿಕೊಳ್ತೇನೆ ಚಿನ್ನ ( ರೇವತಿ) ಎಂದು ವಾಗ್ದಾನ ಮಾಡ್ತಾನೆ, ಆ ವಾಗ್ದಾನ ಈಡೇರುತ್ತಾ ಇಲ್ಲವೇ ಎನ್ನುವುದು ಈ ವಾರ ತೆರೆಗೆ ಬಂದಿರುವ “ಏಳುಮಲೆ” ಚಿತ್ರದ ತಿರುಳು.
ಮೈಸೂರಿನಲ್ಲಿ ಪರಿಚಯವಾಗಿ ಪ್ರೀತಿಯ ಬೀಜ ಅಂಕುರಿಸಿದ ಜೋಡಿ ಅದು, ಆತ ಮೈಸೂರು, ಆಕೆಯದು ತಮಿಳುನಾಡಿನ ಸೇಲಂ. ಈತ ಹೇಳಿಕೇಳಿ ಕ್ಯಾಬ್ ಚಾಲಕ, ಆಕೆ ಶ್ರೀಮಂತ ಮನೆತನದ ಹುಡುಗಿ, ಇವರಿಬ್ಬರ ಪ್ರೀತಿ ಕಂಡು ಹುಡುಗಿ ಮನೆಯದರು ಆಕೆಗೆ ಮದುವೆ ನಿಶ್ಚಯ ಮಾಡ್ತಾರೆ. ಮನೆಯಿಂದ ಓಡಿ ಬರುವ ಮುನ್ನ ಹೇಳುವ ಮಾತಿದು
2004 ಅಕ್ಟೋಬರ್ 18ರಲ್ಲಿ ನಡೆಯುವ ಕಥೆ,ಕಾಡುಗಳ್ಳ ವೀರಪ್ಪನ್ ಕಾಲದಲ್ಲಿ ನಡೆದ ಶಸ್ತಾಸ್ತ್ರ ಕಳ್ಳಸಾಗಾಣೆ, ಎಸ್‍ಟಿಎಫ್ ಕಾರ್ಯಾಚರಣೆ ಈ ನಡುವೆ ಮುದ್ದಾದ ಪ್ರೇಮಕಥೆಯ ತಿರುವಳು ಹೊಂದಿರುವ ಎದೆ ನಡುಗಿಸುವ ಕಹಾನಿ ಹೊಂದಿರುವ ಚಿತ್ರ. ಚಿತ್ರಕಥೆಯಲ್ಲಿ ಹಿಡಿತವಿದೆ. ನಿರೂಪಣೆಯಲ್ಲಿ ಹೊಸತನವಿದೆ. ಅಲ್ಲಲ್ಲಿ ಕೊಂಚ ಟೆಸ್ಟೂ ಇದೆ.
ಸಿನಿಮಾದ ಸ್ಟ್ರೆಂಥೇ ಗಾಢವಾದ ಕಥೆ. ಎಲ್ಲೂ ಗೊಂದಲಕ್ಕೀಡು ಮಾಡದ ಚಿತ್ರಕಥೆಯೇ ಚಿತ್ರದೊಳಗಿನ ಹೂರಣ. ಮೊದಲರ್ಧ ಸಲೀಸಾಗಿ ಸಾಗುವ ಚಿತ್ರದಲ್ಲಿ ಕುತೂಹಲವೇ ಹೆಚ್ಚು. ದ್ವಿತಿಯಾರ್ಧ ಆ ಕುತೂಹಲ ಮತ್ತಷ್ಟು ದುಪ್ಪಟ್ಟು. ಕುತೂಹಲ ಭರಿತ ಚಿತ್ರಕಥೆಯನ್ನು ಕೊನೆತನಕ ಕುತೂಹಲಕಾರಿಯಾಗಿ ತೆರೆಗೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಪುನೀತ್ ರಂಗಸ್ವಾಮಿ, ಜೊತೆಗೆ ಕಾಡು ಮೇಡು, ಸೇರಿದಂತೆ ಕ್ಷಣ ಕ್ಷಣಕ್ಕೂ ತಿರುವು ಇರುವ ಕುತೂಹಲಕಾರಿ ಚಿತ್ರವನ್ನು ತೆರೆಗೆ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ
ಹರೀಶ್ ( ರಾಣಾ) ಕ್ಯಾಬ್ ಚಾಲಕ, ಮೈಸೂರಿನಲ್ಲಿ ಓದುತ್ತಿದ್ದ ವೇಳೆ ತಮಿಳುನಾಡಿನ ಸೇಲಂನ ಯುವತಿ ರೇವತಿ (ಪ್ರಿಯಾಂಕ) ಳನ್ನು ಇಷ್ಟಪಡುತ್ತಾಳೆ, ಈ ವಿಷಯ ಮನೆಯರಿಗೆ ತಿಳಿದು ಮಗಳಿಗೆ ಬೇರೆ ಮದುವೆ ಮಾಡಲು ಮುಂದಾಗುತ್ತಾರೆ. ಇದು ಅರಿತ ರೇವತಿ ಮನೆ ಬಿಟ್ಟು ಪರಾರಿ ಆಗ್ತಾಳೆ
ಪ್ರಿಯತಮ ಹರೀಶ್ ಭೇಟಿ ಮಾಡಲು ಬಂದ ರೇವತಿ ಎದುರಿಸುವ ಸಮಸ್ಯೆ, ಇತ್ತ ಪ್ರೇಮಿಯನ್ನು ಭೇಟಿ ಮಾಡಲು ಪರದಾಡುವ ಹರೀಶ್, ಇದರ ನಡುವೆ ಪೊಲೀಸರ ಪೀಕಲಾಟ, ಪರದಾಟ, ಕಾಡುಗಳ್ಳನ ಕಥೆ, ಶಸ್ತಾಸ್ತ್ರ ಕಳ್ಳ ಸಾಗಾಣೆ ಸೇರಿದಂತೆ ವಿವಿಧ ವಿಷಯವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ. ಪ್ರೇಮಿಗಳು ಒಂದಾಗುತ್ತಾರಾ ಇಲ್ಲವೇ ಎನ್ನುವುದನ್ನು ಚಿತ್ರದಲ್ಲಿ ನೋಡಿದರೆ ಅದರ ಮಜಾನೇ ಬೇರೆ.
ಕೂತಹಲಕಾರಿ ಸನ್ನಿವೇಶಗಳನ್ನು ನಿರ್ದೇಶಕ ಪುನೀತ್ ರಂಗಸ್ವಾಮಿ ತೆರೆಗೆ ಕಟ್ಟಿಕೊಟ್ಟಿದ್ದಾರೆ.ನಟ ರಾಣಾ ಎರಡನೇ ಸಿನಿಮಾದಲ್ಲಿ ಗಮನ ಸೆಳೆದಿದ್ಧಾರೆ, ನಾಯಕಿ ಪ್ರಿಯಾಂಕ ಚಿತ್ರರಂಗದಲ್ಲಿ ಉತ್ತಮ ನಟಿಯಾಗುವ ಭರವಸೆ ಮೂಡಿಸಿದ್ದಾರೆ
ತೆರೆ ಮೇಲೆ ಕಿಶೋರ್ ಎಂದಿನಂತೆ ಖಡಕ್ ಪೊಲೀಸ್ ಅಧಿಕಾರಿ. ಹುಲಿಯಂತೆ ಘರ್ಜಿಸಿ ಓಡಾಡಿದ್ದಾರೆ. ಇಡೀ ಸಿನಿಮಾದಲ್ಲಿ ಮಹದೇವಪ್ಪನಾಗಿ ನಾಗಾಭರಣ ಅವರು ಗಮನ ಸೆಳೆಯುತ್ತಾರೆ. ಜಗಪತಿಬಾಬು, ಸರ್ದಾರ್ ಸತ್ಯ, ಜಗ್ಗಪ್ಪ ಇತರೆ ಕಲಾವಿದರು ಗಮನ ಸೆಳೆಯುತ್ತಾರೆ ನಿರ್ಮಾಪಕರಿಗೆ ನಿರೀಕ್ಷಿಸುವುದಕ್ಕಿಂತ ಹೆಚ್ಚು ಸಂಗ್ರಹಿಸುತ್ತದೆ ಬಾಕ್ಸ್ ಆಫೀಸ್ ಫುಲ್ .