Flash News

Contact Us

Manohar. R (Manu)

Photo Journalist

Chitrataramanu@gmail.com

+91 9845549026

News
ಈ ವಾರ ತೆರೆಗೆ `ಆರಕ್ಷಕ`

Posted date: 23 Mon, Jan 2012 ? 09:07:29 AM

ಪಿ.ವಾಸು ನಿರ್ದೇಶನದಲ್ಲಿ ಸೂಪರ್‌ಸ್ಟಾರ್ ಉಪೇಂದ್ರ ನಾಯಕರಾಗಿ ಅಭಿನಯಿಸಿರುವ ‘ಆರಕ್ಷಕ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
      ಕೇರಳ, ಮೈಸೂರು, ಚೆನ್ನಪಟ್ಟಣ ಹಾಗೂ ಬೆಂಗಳೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ‘ಆರಕ್ಷಕನ ಮೂರು ಹಾಡುಗಳು ಇಂಡೋನೇಷಿಯಾದಲ್ಲಿ ಚಿತ್ರೀಕರಣಗೊಂಡಿದೆ.
      ಉದಯರವಿ ಫ಼ಿಲಂಸ್ ಲಾಂಛನದಡಿಯಲ್ಲಿ ಕೃಷ್ಣಪ್ರಜ್ವಲ್ ನಿರ್ಮಿಸಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಗುರುಕಿರಣ್ ಸಂಗೀತವಿರುವ ಚಿತ್ರಕ್ಕೆ ಪಿ.ಕೆ.ಎಚ್ ದಾಸ್ ಅವರ ಛಾಯಾಗ್ರಹಣವಿದೆ. ಸುರೇಶ್ ಅರಸ್ ಸಂಕಲನ, ವೇಣು ಕಲಾ ನಿರ್ದೇಶನ, ಡಿಫ಼ರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮತ್ತು ಚಂಪಕಧಾಮ ಬಾಬು ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರದ ತಾರಾಬಳಗದಲ್ಲಿ ಉಪೇಂದ್ರ, ಸೀತಾ, ಸದಾ, ರಾಗಿಣಿ, ಶಯಾಜಿ ಶಿಂಧೆ, ಶರಣ್ ಮುಂತಾದವರಿದ್ದಾರೆ.



 
 
Chitratara.com
Introduction
News
Reviews
 
Our Policy
 
Customer Service
Contact Us
 
Connect With Us
       

Copyright 2009 chitratara.com Reproduction is forbidden unless authorized. All rights reserved. | Powered by Webpaque