Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮನುಷ್ಯತ್ವವನ್ನು ಬಡಿದೇಳಿಸುವ ಸಿನಿಮಾ Case 18/9
Posted date: 04 Sun, Aug 2013 – 01:04:03 PM

ರಿಮೇಕ್ ಸಿನಿಮಾ ಆಗಿದ್ದರೂ ನಿರ್ದೇಶಕ ಮಹೇಶ್‌ರಾವ್ ಕನ್ನಡಿಕರಣಕ್ಕೆ ತಕ್ಕಂತೆ ಚಿತ್ರಿಸುವಲ್ಲಿ ಸಪಲರಾಗಿದ್ದಾರೆ. ಸಿನಿಮಾ  ಶುರುವಾದಗ ಇದೆಂತಹಾ ಸಿನಿಮಾ ಎನಿಸುತ್ತದೆ. ಕ್ಲೈಮಾಕ್ಸ್ ಸೀನ್ ನೋಡುವಾಗ ಅಳುವುದು ಬೇಡವೆಂದು ಕೊಂಡರೆ ಕಣ್ಣಿನ ರೆಪ್ಪೆಗಳು ತನಗೆ ಅರಿವಿಲ್ಲದಂತೆ ಒದ್ದೆಯಾಗುತ್ತದೆ. ಅಂತಹ ಮನಮಿಡಿಯುವ ದೃಶ್ಯಗಳು  ಬರುತ್ತವೆ. ಜೋಶ್ ಚಿತ್ರದಲ್ಲಿ ನಟಿಸಿದ್ದ ನಿರಂಜನ್   ರಿಯಲ್‌ನಲ್ಲಿ  ಕೂಲಿಕೆಲಸ ಮಾಡುವವರು ಹೇಗೆ ಇರುತ್ತಾರೋ ಅವರಂತೆಯೆ ಕಾಣಿಸಿಕೊಂಡು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿ ನಟನೆಗೆ ಶೇಕಡ ೧೦೦ ಅಂಕ ಕೊಡಬಹುದು. ನಾಯಕಿ ಸಿಂಧೂಲೋಕನಾಥ್ ಮನೆಗೆಲಸ ಹುಡುಗಿಯಾಗಿ ಅಮೋಘವಾಗಿ ಅಭಿನಯಿಸಿ ಕೊನೆಯಲ್ಲಿ ಅವರ ವಿಕೃತವಾದ ಆನನವನ್ನು ನೋಡಿದಾಗ ಕರುಳು ಚುರು ಎನಿಸುತ್ತದೆ. ಗ್ಲಾಮರ್ ಬೆಡಗಿ ಶ್ವೇತಾಪಂಡಿತ್  ಪ್ರೌಢಶಾಲೆ ವಿದ್ಯಾರ್ಥಿಯಾಗಿ ತುಂಟುತುಂಟಾಗಿ ನಟಿಸಿದ್ದಾರೆ. ಕಥೆಗೆ ತಿರುವು ಕೊಡುವ ಪಾತ್ರದಲ್ಲಿ ಚೂಚ್ಚಲಬಾರಿಗೆ ಅಭಿಷೇಕ್ ಗಮನ ಸೆಳೆಯುತ್ತಾರೆ. ಐಟಂ ಹಾಡಿಗೆ ಹೆಜ್ಜೆ ಹಾಕಿದ ಹರ್ಷಿಕಾಪೂರ್ಣಚ್ಚಾ ಇದ್ದಾರೆ ಎನ್ನಬಹುದು.
ಅರ್ಜುನ್‌ಜನ್ಯಾರ ೨೫ ಚಿತ್ರವಾಗಿದ್ದು, ನಿಂತಲ್ಲೆ ನಿಂತುಕೊಳ್ಳೆ ಮತ್ತು ನೋಡ್ಕಂಡು ನೋಡ್ಕಂಡು ಹಾಡುಗಳು ಹೊರಬಂದ ನಂತರವು ಗುನುಗುವಂತೆ ಮಾಡಿದೆ.  ಮಾರ್ಮಿಕನಂತೆ  ಮರುಳು ಮಾಡಿ ನಾಯಕನಿಗೆ ಮೋಸ ಮಾಡುವ ಪಾತ್ರದಲ್ಲಿ ಪಕ್ವವಾಗಿ ಅಭಿನಯಿಸಿರುವ  ರಂಗಾಯಣರಘು  ಕಥೆಗೆ ಕಾಯಕಲ್ಪ ಕೊಟ್ಟಿದ್ದಾರೆ ಎಂದರೆ ಅತಿಶಯೋಕ್ತಿ ಎನಿಸಿವುದಿಲ್ಲ. ಕರಿಸುಬ್ಬು ಮತ್ತು ಕಾರ್ತಿಕ್‌ಶರ್ಮಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಬಿಹಾರದಲ್ಲಿ ನಡೆದ ನೈಜ ಘಟನೆಯನ್ನು ತೆಗೆದುಕೊಂಡು ತಮಿಳಿನಲ್ಲಿ ಬಿಡುಗಡೆಯಾಗಿ ಹಿಟ್ ಎನಿಸಿಕೊಂಡಿತ್ತು. ಅದೇ ರೀತಿ ಕನ್ನಡ ಚಿತ್ರವು  ಪ್ರೇಕ್ಷಕರನ್ನು ಮನಸೂರೆಗೊಳ್ಳುವ ಲಕ್ಷಣಗಳು  ೧೮/೯ ಚಿತ್ರಕ್ಕೆ ಗೋಚರಿಸುತ್ತದೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮನುಷ್ಯತ್ವವನ್ನು ಬಡಿದೇಳಿಸುವ ಸಿನಿಮಾ Case 18/9 - Chitratara.com
Copyright 2009 chitratara.com Reproduction is forbidden unless authorized. All rights reserved.