Chief Editor
Manohar. R (Manu)
Photo Journalist
chitrataramanu@gmail.com
+91 9845549026
`‘ದಿಲ್ ವಾಲಾ` ಅಲ್ಲಲ್ಲಿ ಬಿನ್ನ ನಾಯಕನ ಗುನ್ನ ಪ್ರೇಕ್ಷಕರಿಗೆ ಪರಮಾನ್ನ
Posted date: 05 Sat, Oct 2013 – 09:11:01 AM

‘ದಿಲ್ ವಾಲಾ’ ಆರಂಭದಲ್ಲೇ ಒಂದು ಸೂಚನೆ ಸಿಗುತ್ತದೆ – ಕೈ ಚಾಚಿ ಹಿಡಿಯುವೆನು ಉಸಿರಿರುವ ವರೆಗೂ...ಎಂಬ ಹಾಡಿನ ಸಾಲು...ಓಹೋ ಚಿತ್ರ ಟ್ಟ್ರ್ಯಾಜಿಡಿ ಎಂದು ಪ್ರೇಕ್ಷಕ ಸಿದ್ದ ಆಗುತ್ತಾನೆ. ಅದಾದ 150 ನಿಮಿಷಗಳ ಸುಧೀರ್ಘ ಆವದಿಯಲ್ಲಿ ‘ದಿಲ್ ವಾಲಾ’ ಹೊಲದಲ್ಲಿ ನೆಟ್ಟಿರುವ ಎತ್ತರದ ಹುಲ್ಲು ಹಾಸಿನ ಮೇಲೆ ತನ್ನ ಪ್ರೇಯಸಿ ಇಂದ ಕೆನ್ನೆಗೆ ಮುತ್ತು ಸ್ವೀಕರಿಸಿ ತನ್ನ ತೆಕ್ಕೆಯಲ್ಲಿ ಅವಳನ್ನು ಬಳಸುತ್ತಾನೆ. ಅದೆಲ್ಲ ಆಗುವುದು ಮೇಲುಕೋಟೆಯ ಪುಷ್ಕರಿಣಿಯಿಂದ ಪ್ರೇಯಸಿಯನ್ನು ಪಾರು ಮಾಡಿ, ಬದುಕಿರುವಳೋ, ಸತ್ತಿರುವಳೋ ಎಂಬ ಯೋಚನೆ ಹಚ್ಚಿದ ಮೇಲೆ! ಇದು ದಿಲ್ ಮಾಂಗೆ ಮೋರ್ ಅಲ್ಲ...ದಿಲ್ ವಾಲಾ ಮಾನ್ ಗೆ ಶೋರ್!

 

ವಾರೆ ವಾಹ್ ‘ದಿಲ್ ವಾಲಾ’ ಅನ್ನುವುದಕ್ಕೆ ಅನೇಕ ಅವಕಾಶಗಳನ್ನು ಅನಿಲ್ ಕುಮಾರ್ ಅವರು ಎರಡನೇ ನಿರ್ದೇಶನದಲ್ಲಿ ಇಟ್ಟಿದ್ದಾರೆ ನಿಜ. ಹಾಗೆಯೇ ಅತಿಯಾದ ಪ್ರೀತಿಯಿಂದ ಸಿನೆಮವನ್ನು ತುಂಬಾ ಜಗ್ಗಾಡಿದ್ದಾರೆ ಕೂಡ.

ರಂಬೆ ಹೊಡದ್ರೆ ಬೀಳಲ್ಲ ಎನ್ನುವ ಜಯಸಿಂಹ, ಉರಿಯುವ ಕಣ್ಣುಗಳ ದೇವರಾಜ ಇವರ ಮಧ್ಯೆ ಮುರಿದುಬಿಳುವ ಮಧ್ವೆ. ಅದೇ ಮಧ್ವೆ ಕೊನೆಯಲ್ಲಿ ನಾಯಕ ಮಾಡುವುದು ತತ್ತರಿಸುವ ಸಂದರ್ಭಕ್ಕೆ ಕಾರಣರಾದವರನ್ನು ಒಂದು ಮಾಡುವುದು ಸಹ.

ಪ್ರೀತಿಯ ರಾಧಿಕಾ ಹಾಗೂ ಪ್ರೇಮಿಸುವ ಸುಮಂತ್ – ಇವರಿಬ್ಬರ ನಡುವಿನ ಸ್ನೇಹ, ಪ್ರೀತಿ, ಸಲ್ಲಾಪ, ಸರಸ, ಸಂದಿಗ್ದ ಮನಸ್ಥಿತಿ ಒಂದು ಕಡೆ ಆದರೆ ಮತ್ತೊಂದು ಕಡೆ ಎರಡು ಗ್ಯಾಂಗ್ ವಾರ್. ನಾಯಕ ಒಂದು ಗ್ಯಾಂಗ್ ಲೀಡರ್ ಮಗ ಸಹ ಆಗಿರುವಾಗ ಎಂತಹ ಪರಿಸ್ಥಿತಿಯ ಪಿತೂರಿ ಅವನನ್ನು ಕಾಡಬಹುದು ಎಂಬುದನ್ನೂ ನೀವೇ ಊಹಿಸಿ. ಆದರೂ ತನ್ನ ಐಡೆಂಟಿಟೀ ಅನ್ನು ದೂರ ಇಟ್ಟು ನಾಯಕ ವಿದ್ಯಾರ್ಥಿ ಆಗಿ ಬದುಕಲು ಸಾಧ್ಯವೇ. ಅಲ್ಲೇ ಟ್ವಿಸ್ಟ್ ರೀಲ್ ಗಳ ನಂತರ ಪ್ರೇಕ್ಷಕನ ಮುಂದೆ.

ಪ್ಯಾಟೆ ಹುಡುಗ್ರು ಗೋಡೆಗೆ ಅಂಟಿದ ಸುಣ್ಣ ಹುಷಾರು ಎಂದು ಅಮ್ಮನಿಂದ ಹಿತವಚನ ಹೇಳಿಸಿಕೊಂಡು ಬರುವ ಪ್ರೀತಿ, ಪ್ರೇಮದ ಮನಸ್ಸಿಗೆ ಅಪ್ಪಿಕೊಳ್ಳುವುದಕ್ಕೂ ಬಲವಾದ ಕಾರಣಗಳು ಇವೆ. ಅವನಾದರೂ ನನ್ನುಸಿರ ಉತ್ಸವ ನೀನು....ಎಂದರೆ ನಾಯಕಿ ನಿರಾಕಾಸಿವುದಾದರೂ ಹ್ಯಾಗೆ ಸ್ವಾಮಿ!

ಲವ್, ಗ್ಲೋಬ್, ಲೈಫ್ ಅನ್ನುವ ನಾಯಕ ಪ್ರೀತಿಯ ಮನೆಯವರಿಗೆ ಹತ್ತಿರವಾಗುವುದಕ್ಕೆ ಕಾರಣ. ಆದರೂ ಅವಳ ಕಣ್ಣು ಹಾಗೂ ನಗೆ ನೋಡಿದಾಗ....ಎ ಹುಡುಗಿ.... ನಾನು ಪ್ರೇಮಿ ಆಗ್ತಿನೋ ಸ್ವಾಮಿ ಅಂದು ಹೇಳಿಕೊಳ್ಳುತ್ತಾನೆ. ಅದೇ ನಾಯಕ ಕನ್ನಡಿ ಒಂದೇ ಸುಳ್ಳು ಹೇಳೋಲ್ಲ, ನಾನು ನಿನ್ನ ಕನ್ನಡಿ ಅಗಿರ್ಥಿನಿ ಎಂದಾಗ ಪ್ರೇಮದ ‘ಆಟ’ ಒಂದು ಹಂತ ತಲುಪಿತು ಎಂದು ನೀವು ಅಂದು ಕೊಂಡರೆ ತಪ್ಪು. ಅಲ್ಲಿಂದಲೆ ಪ್ರೇಮ, ಪ್ರೀತಿ ಪರೀಕ್ಷೆ ಆರಂಭ.

ನಾವೇ ಎಲ್ಲ ಹೇಳಿಬಿಟ್ಟರೆ ನೀವು ಹೋಗಿ ಸಿನೆಮಾ ನೋಡಿ ಅಂತಿವಿ ನಾವು. ಪ್ರೇಮಿಗಳ ಪಾಲಿಗೆ ನಾಯಕ ಪ್ರೇಮ ನಿವೇದನೆ ಮಾಡುವ ಸಂದರ್ಭ ಕನ್ನಡದ ಮಟ್ಟಿಗಂತೂ ಇಷ್ಟೊಂದು ವೈಭವವಾಗಿ ಬಂದಿಲ್ಲ ಬಿಡಿ. ಐ ಲವ್ ಯು ಎಂದು ಟ್ಟ್ರ್ಯಾಕ್ಟರ್ ಬಳಸಿ ನಾಯಕ ಟ್ಟ್ರ್ಯಾಕ್ಟರ್ ಬಳಸುವ ರೈತನ ಮಗಳನ್ನು ಗೆಲ್ಲುವುದು ಖುಷಿ ಕೊಡುವುದು ಅದರ ಜೊತೆಗೆ ಕೆ ಆರ್ ಎಸ್ ಬೃಂದಾವನ ಗಾರ್ಡನ್ ವೈಭವೋಪೇತ ಆಗಿ ಕಣ್ಣುಗಳನ್ನು ಮಿಟುಕಿಸದಂತೆ ಮಾಡುವುದು.

ಸುಮಂತ್ ಎರಡನೇ ಸಿನೆಮಾದಲ್ಲಿ ಭಯಂಕರ ಬದಲಾವಣೆ ತಂದುಕೊಂಡಿದ್ದಾರೆ. ಅವರು ಉತ್ತಮ ಕಥಾ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವುದಷ್ಟೇ ಮುಂದಿನ ದಿನಗಳಲ್ಲಿ ಬಾಕಿ. ನಿಜಕ್ಕೂ ತೆಲುಗು ಹೀರೋ ಅಂತೆ ಕಂಗೊಳಿಸುತ್ತಾರೆ ಸುಮಂತ್. ಅಪ್ಪ ಹಾಕಿದ ದುಡ್ಡಿಗೆ ಅವರ ಪರಿಶ್ರಮ ಸೂಪರ್ಬ್.

ನಟನೆಯಲ್ಲಿ ಪಂಡಿತರೇ ಆಗಿ ಹೋಗಿರುವ ಈ ಚಂದುಳ್ಳಿ ಚೆಲುವೆ ರಾಧಿಕಾ ಪಂಡಿತ್ ಯಾವ ಹಿಂದಿ ಸಿನೆಮಾ ಹೀರೋಯಿನ್ಗೆ ಕಡಿಮೆ ಇಲ್ಲ ಬಿಡಿ. ಸುಂದರ, ಸರಳ, ಸಜ್ಜನಿಕೆ, ಸಮ್ಮೋಹನ ಶಕ್ತಿ ರಾಧಿಕಾ ಅವರಲ್ಲಿ ಮೇಳೈಸಿದೆ.

ಚಿತ್ರದಲ್ಲಿ ಸ್ವಲ್ಪ ಅತಿಯಗೋದು ಪವನ್, ಸಾಧು ಕೋಕಿಲ ಅವರ ಕಾಂಬಿನೇಷನ್. ಶರತ್, ರವಿಶಂಕರ್ ಅವರ ದಿಟ್ಟ ಅಭಿನಯ ಹಾಗೆ ಕೊನೆಗೆ ಕರಗಿ ಹೋಗುವುದು ಹಿಂಗಾಗಬೇಕಪ್ಪ ಎಂದು ಪ್ರೇಕ್ಷಕ ನಿಟ್ಟುಸಿರು ಬಿಡುವಂತಿದೆ.

ಅರ್ಜುನ್ ಜನ್ಯ ಅವರ ಎತ್ತಕೋಂಡ್ ಹೋಗ್ತಾ ಇರೋದೇ.... ಪಡ್ಡೆಗಳಿಗೆ ದಿಲ್ ಪಸಂಧ್. ಪ್ರೇಮಿಗಳಿಗೂ ಹಾಡಿದೆ ಪಾಪಿಗಳಿಗೂ ಚಿತ್ರದಲ್ಲಿ ಹಾಡಿದೆ.

ಸುಧಾಕರ್ ಅವರ ಛಾಯಾಗ್ರಹಣದಲ್ಲಿ ಯಾವುದೇ ಗ್ರಹಣ ಹಿಡಿದಿಲ್ಲ, ಸನ್ನಿವೇಶಗಳು ಅತಿ ಸುಂದರವಾಗೆ ಕಟ್ಟಿ ಕೊಟ್ಟಿದ್ದಾರೆ.

ದಿಲ್ ಬೇಕು ಸಿನೆಮಾ ಮಾಡಕ್ಕೆ, ದಿಲ್ ವಾಲಾ ಅಗಿರ್ಬೆಕು ಪ್ರೀತಿ ಮಾಡಕ್ಕೆ – ಅಪ್ಪ ಹಾಗೂ ಮಗ ‘ದಿಲ್ ವಾಲಾ’ ಇಂದ ಎರಡನ್ನೂ ಮಾಡಿದ್ದಾರೆ.

ನಿರ್ದೇಶಕರಿಗೆ ಕೊನೆ ಮಾತು – ಸ್ವಲ್ಪ ಕತ್ತರಿ ಚಿತ್ರೀಕರಣದ ಮುಂಚೆಯೇ ಮಾಡಿದ್ದರೆ ನಿರ್ಮಾಪಕನಿಗೆ ಒಳಿತಲ್ಲವೇ!

                                                                                                                                                                                                          ವಿಮರ್ಶೆ ವಸಿಷ್ಠ

Kannada Cinema's Latest Wallpapers
Kannada Cinema's Latest Videos
Kannada Movie/Cinema News - `‘ದಿಲ್ ವಾಲಾ` ಅಲ್ಲಲ್ಲಿ ಬಿನ್ನ ನಾಯಕನ ಗುನ್ನ ಪ್ರೇಕ್ಷಕರಿಗೆ ಪರಮಾನ್ನ - Chitratara.com
Copyright 2009 chitratara.com Reproduction is forbidden unless authorized. All rights reserved.