Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಕ್ಕಳ ಸಾಹಸದ ಕಥೆಯಾಧಾರಿತ ಪುಟಾಣಿ ಸಫಾರಿ
Posted date: 10 Mon, Apr 2017 07:57:24 AM

ಸ್ವರ್ಣಗಂಗಾ ಫಿಲಂಸ್ ಲಾಂಛನದಲ್ಲಿ ಬಿ.ಎಸ್. ಚಂದ್ರ ಶೇಖರ್ [ಕೇಬಲ್ ಚಂದ್ರು] ಅವರ ನಿರ್ಮಾಣದ ಮಕ್ಕಳ ಸಾಹಸದ ಕಥೆಯಾಧಾರಿತ ಚಿತ್ರ ಪುಟಾಣಿ ಸಫಾರಿ. ಈಗಾಗಲೇ ಚಿತ್ರದ ಬಹುತೇಕ ಕೆಲಸಗಳು ಮುಗಿದಿದ್ದು, ಸಧ್ಯದಲ್ಲೇ ಬಿಡುಗಡೆಯಾಗಲು  ಸಿದ್ದವಾಗಿದೆ.  ಈ ಚಿತ್ರಕ್ಕೆ ಕತೆ, ಚಿತ್ರಕತೆ, ಸಂಭಾಷಣೆಗಳನ್ನು ಬರೆದು ನಿರ್ದೇಶನ ಮಾಡಿರುವವರು ರವೀಂದ್ರ ವಂಶಿ.

ಮಕ್ಕಳ ಮನರಂಜನೆಯನ್ನೇ ಮೂಲ ಉದ್ದೇಶವನ್ನಾಗಿಟ್ಟುಕೊಂಡು ನಿರ್ಮಾಣ ಮಾಡಿರುವ ಚಿತ್ರ ಇದಾಗಿದ್ದು, ದಟ್ಟ ಅರಣ್ಯದಲ್ಲಿ, ವನ್ಯಮೃಗಗಳ ನಡುವೆ ಸಮಾಜದ ೨ ಭಿನ್ನ ಸ್ತರದಿಂದ ಬಂದಂತಹ ಮಕ್ಕಳಿಬ್ಬರು ಅನಿವಾರ್ಯವಾಗಿ ಬದುಕಬೇಕಾದ ಸಂದರ್ಭ ಬಂದಾಗ ಅವರು ಹೇಗೆ ಅದನ್ನು ಎದುರಿಸುತ್ತಾರೆ ಎನ್ನುವುದೇ ಪುಟಾಣಿ ಸಫಾರಿ ಚಿತ್ರದ ಕಥಾವಸ್ತು. ಈ ಚಿತ್ರದಲ್ಲಿ ಕಾಡು ಪ್ರಾಣಿಗಳು, ದಟ್ಟ ಕಾನನದ ಜೊತೆ ಹಾಸ್ಯ ಹಾಗೂ  ಸೆಂಟಿಮೆಂಟ್ ಕೂಡ ಇದೆ.

ಸಿರಸಿ, ಸಿದ್ಧಾಪುರ, ಬಂಡೀಪುರ, ಕೆ.ಗುಡಿ ಮುಂತಾದ ರಕ್ಷಿತಾರಣ್ಯದಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಜಂಗಲ್‌ಬುಕ್ ಮಾದರಿಯಲ್ಲಿ ಈ ಚಿತ್ರ ತಯಾರಾಗಿದೆ. ನಿರ್ದೇಶಕ ಯೋಗರಾಜ ಭಟ್ಟರು ಮೊದಲಬಾರಿಗೆ  ಮಕ್ಕಳ ಚಿತ್ರಕ್ಕಾಗಿ ಹಾಡನ್ನು ಬರೆದಿರುವುದು ವಿಶೇಷ. ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಜಗದೀಶ್‌ಎಂ.ಕೆ ಹಾಗೂ ಮಂಜುನಾಥ್ ಬಿ[ಕೇಬಲ್‌ಮಂಜಣ್ಣ]

ಬಂಡವಾಳ ಹೂಡಿದ್ದಾರೆ. ಜೀವನ  ಗೌಡ ಚಿತ್ರದ ಛಾಯಾಗ್ರಾಹಕರಾಗಿದ್ದು, ವೀರ ಸಮರ್ಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. ಚಿತ್ರದ ಪ್ರಮುಖ ತಾರಾಗಣದಲ್ಲಿ ಮನೀಶ್ ಬಲ್ಲಾಳ್, ಸಹನಶ್ರೀ, ಕೈಲಾಶ್ ಟಿ.ಪಿ, ಜಗದೀಶ್, ವಿಜಯಾ, ಮಾ.ರಾಕಿನ್, ಮಾ.ರಾಜೀವ್ ಪ್ರಥಮ್, ಬೃಂದಾ, ಮಾನಸ ಮುಂತಾದವರು ನಟಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಕ್ಕಳ ಸಾಹಸದ ಕಥೆಯಾಧಾರಿತ ಪುಟಾಣಿ ಸಫಾರಿ - Chitratara.com
Copyright 2009 chitratara.com Reproduction is forbidden unless authorized. All rights reserved.