Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಲಾವಿದರು ಮತ್ತು ಮಂಗಳಮುಖಿಯರುಗಳಿಗೆ ನೆರವು ನೀಡುತ್ತಿರುವ ಭರತ್‌ಗೌಡ ಚಾರಿಟಬಲ್ ಟ್ರಸ್ಟ್
Posted date: 29 Sat, May 2021 01:14:50 PM
ಕನ್ನಡ ಚಿತ್ರರಂಗದ ಪೋಷಕ ಕಲಾವಿದರುಗಳು, ತಂತ್ರಜ್ಘರುಗಳಿಗೆ `ಭರತ್‌ಗೌಡ ಚಾರಿಟಬಲ್ ಟ್ರಸ್ಟ್` ಸಂಸ್ಥೆಯು ಆಹಾರದ ಕಿಟ್‌ಗಳನ್ನು ವಿತರಣೆ ಮಾಡುತ್ತಿದೆ. ಭಾನುವಾರದಂದು ಮಾನ್ಯ ಉಪಮುಖ್ಯಮಂತ್ರಿಗಳಾದ ಡಾ.ಅಶ್ವಥ್‌ನಾರಾಯಣ್ ಅವರು ಕಿಟ್‌ಗಳನ್ನು ವಿತರಣೆ ಮಾಡುವುದರ ಮೂಲಕ ಚಾಲನೆ ನೀಡಿ, ಭರತ್‌ಗೌಡರವರ ಸಮಾಜ ಸೇವೆಯನ್ನು ಶ್ಲಾಘನೆ ಮಾಡಬೇಕಾಗಿದೆ. ಇವರು ಸಿನಿಮಾ ಕೃಷಿಗೆ  ಪಾದಾರ್ಪಣೆ ಮಾಡಿ ’ಕಟ್ಲೆ’ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ತಿಳಿದು ಬಂದಿದೆ. ಇವರಿಗೆ ಎರಡರಲ್ಲೂ ಯಶಸ್ಸು ಸಿಗಲೆಂದು ಶುಭ ಹಾರೈಸಿದ್ದರು. 
ಮೊನ್ನೆ ನಡೆದ ಎರಡನೆ ಹಂತದ ಕಾರ್ಯಕ್ರಮದಲ್ಲಿ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕ ಭರತ್‌ಗೌಡಹೊಸಕೋಟೆ ಹೇಳುವಂತೆ ಕಳೆದವಾರ ಹೊಸಕೋಟೆಯ ಬಡವರುಗಳಿಗೆ ನೆರವು ನೀಡಲಾಗಿತ್ತು.  ಡಿಸಿಎಂ ಸಾಹೇಬ್ರ ಕಡೆಯಿಂದ ಫುಡ್‌ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ಬಾಕಿ ಸಂಕಷ್ಟದಲ್ಲಿರುವವರಿಗೆ ಬಾಕ್ಸ್‌ಗಳನ್ನು ವೆಸ್ಟ್ ಆಫ್ ಕಾರ್ಡ್ ರೋಡ್‌ದಲ್ಲಿರುವ ವಿದ್ಯಾನಿಕೇತನ ಶಾಲೆಯ ಆವರಣದಲ್ಲಿ ನೀಡಲಾಗಿದೆ. ಮುಂದೆ ಮೆಡಿಕಲ್ ಕಿಟ್‌ಗಳನ್ನು ಕೊಡಲು ಯೋಜನೆ ಹಾಕಲಾಗಿದೆ ಎಂದರು. ಮಾಜಿ ಉಪಮಹಾಪೌರರಾದ ಹರೀಶ್ ಆಗಮಿಸಿ ಟ್ರಸ್ಟ್‌ನ ಸೇವಾ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ನಂತರ ಮೂರನೇ ಹಂತದಲ್ಲಿ ಮಂಗಳಮುಖಿಯರನ್ನು ಗುರುತಿಸಿ ಅವರಿಗೂ ಫುಡ್ ಕಿಟ್‌ಗಳನ್ನು ವಿತರಣೆ ಮಾಡಿದ್ದರಿಂದ ಎಲ್ಲಾ ಕಡೆಗಳಿಂದ ಭರತ್‌ಗೌಡರನ್ನು ಶ್ಲಾಘಿಸುತ್ತಿದ್ದಾರೆ. 
89 ಚಿತ್ರಗಳ ನಂತರ ನಾಯಕನಾಗಿ ಬಡ್ತಿ ಹೊಂದಿರುವ ಕಂಪೆಗೌಡ ಮಾತನಾಡಿ ನಿರ್ಮಾಪಕರಿಗೆ ಧನ್ಯವಾದ ಹೇಳಬೇಕು. ಹಸಿದವರಿಗೆ ಆಹಾರ ನೀಡುತ್ತಿದ್ದಾರೆ. ಇಂತಹವರಿಂದ ಇತರರಿಗೂ ಪ್ರೇರಣೆಯಾಗಲಿ ಎಂದರು. ಹಿರಿಯ ನಟ ಗಣೇಶ್‌ರಾವ್‌ಕೇಸರ್‌ಕರ್ ಸದರಿ ಕಿಟ್‌ಗಳು ಎಲ್ಲರಿಗೂ ಸಿಗುವಂತೆ ಕ್ರಮಬದ್ದವಾಗಿ ಏರ್ಪಾಟು ಮಾಡಿದ್ದರಿಂದ ಎಲ್ಲಿಯೂ ಅಭಾಸ ಕಂಡುಬರಲಿಲ್ಲ.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಲಾವಿದರು ಮತ್ತು ಮಂಗಳಮುಖಿಯರುಗಳಿಗೆ ನೆರವು ನೀಡುತ್ತಿರುವ ಭರತ್‌ಗೌಡ ಚಾರಿಟಬಲ್ ಟ್ರಸ್ಟ್ - Chitratara.com
Copyright 2009 chitratara.com Reproduction is forbidden unless authorized. All rights reserved.