Chief Editor
Manohar. R (Manu)
Photo Journalist
chitrataramanu@gmail.com
+91 9845549026
ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಿದ ನಟಭಯಂಕರ
Posted date: 01 Tue, Jun 2021 02:29:17 PM
ನಟ, ನಿರ್ದೇಶಕ ಈಗ ನಿರ್ಮಾಪಕನೂ ಆಗಿರುವ ಒಳ್ಳೇ ಹುಡುಗ ಪ್ರಥಮ್ ಕಳೆದ ಕೊರೋನಾ ಲಾಕ್‌ಡೌನ್ ಆರಂಭವಾದಾಗಿನಿಂದಲೂ ಒಂದಲ್ಲ ಒಂದುರೀತಿ ಜನರಿಗೆ ನೆರವಾಗುತ್ತಲೇ ಬಂದಿದ್ದಾರೆ.  ಈಗ  ತಮ್ಮ  ನಿರ್ಮಾಣದ ನಟ ಭಯಂಕರ  ಚಿತ್ರತಂಡದ ನೂರಕ್ಕೂ ಹೆಚ್ಚು  ಕಾರ್ಮಿಕ, ತಂತ್ರಜ್ಞರಿಗೆ  ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳು ಅಲ್ಲದೆ  ಕೊರೋನಾ ಸೋಂಕು ನಿಗ್ರಹಿಸುವ ಮೆಡಿಕಲ್ ಕಿಟ್ ಕೂಡ ನೀಡಿzರೆ. ಈಕಿಟ್‌ನಲ್ಲಿ ಉತ್ತಮ ಗುಣಮಟ್ಟದ ಪದಾರ್ಥಗಳನ್ನೇ ಇಡಲಾಗಿದ್ದು, ಎಲ್ಲಾ ಸೇರಿ ಆರು ಸಾವಿರ ರೂ. ಮೌಲ್ಯದ ವಸ್ತುಗಳನ್ನು ತಮ್ಮ ಚಿತ್ರದಲ್ಲಿ ದುಡಿದಂಥ ಎಲ್ಲಾ ಸದಸ್ಯರಿಗೆ  ವಿತರಿಸುವ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.  
ಕಳೆದ ವರ್ಷವೂ ಸಹ ಪ್ರಥಮ್ ತಮ್ಮ ಚಿತ್ರತಂಡದ ಜೊತೆ ಸೇರಿ ಅನೇಕರಿಗೆ ಸಹಾಯ ಮಾಡಿದ್ದರು. ಬಿಗ್‌ಬಾಸ್ ಪ್ರಥಮ್ ಎಂದೇ ಕರೆಯಲ್ಪಡುವ ಇವರು ಸಿನಿಮಾ ಕೆಲಸದ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಈಗಾಗಲೇ  ನಟಭಯಂಕರ  ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು ಚಿತ್ರವೂ ಬಿಡುಗಡೆಗೆ  ಸಿದ್ದವಾಗಿದೆ. ಇದರ ಜೊತೆಗೆ ಕರ್ನಾಟಕದ ಅಳಿಯ ಎನ್ನುವ  ಸಿನಿಮಾದಲ್ಲೂ  ಸಹ  ಪ್ರಥಮ್ ನಾಯಕನಾಗಿ  ಕಾಣಿಸಿಕೊಂಡಿzರೆ. ಇಲ್ಲಿ ಹಿರಿಯ ನಟ ರಾಘವೇಂದ್ರ ರಾಜ್‌ಕುಮಾರ್ ಅವರಿಗೆ ಪ್ರಮುಖ ಪಾತ್ರವಿದೆ. ಇದರ ಜೊತೆಗೆ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಕುಕ್ಕು ವಿಥ್ ಕಿರಿಕ್ ಎನ್ನುವ  ಕಾಮಿಡಿ ಕಾರ್ಯಕ್ರಮದಲ್ಲೂ ಸಹ ಪ್ರಥಮ್ ಅವರು ಭಾಗವಹಿಸುತ್ತಿದ್ದಾರೆ,  
 
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಕಾರ್ಮಿಕರಿಗೆ ಆಹಾರದ ಕಿಟ್ ವಿತರಿಸಿದ ನಟಭಯಂಕರ - Chitratara.com
Copyright 2009 chitratara.com Reproduction is forbidden unless authorized. All rights reserved.