ಮರೆಯಾಗುತ್ತಿರುವ ಸೂಲಗಿತ್ತಿಯರ ಮಹತ್ವ ಸಾರುವ “ ತಾಯವ್ವ” ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಪ್ರಣಯರಾಜ ಶ್ರೀನಾಥ್, ಸಂತಾನೋತ್ಪತ್ತಿ ತಜ್ಞರಾದ ಡಾ. ಕಾಮಿನಿ ರಾವ್, ಈ ವೇಳೆ ಲಹರಿ ವೇಲು ಹಾಡು ಬಿಡುಗಡೆ ಮಾಡಿ ಶುಭಹಾರೈಸುವ ಮೂಲಕ ಚಿತ್ರಕ್ಕೆ ಕಳೆ ತಂದುಕೊಟ್ಟಿದ್ದಾರೆ.
ಗೀತಪ್ರಿಯ ಚೊಚ್ಚಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದು ಸೂಲಗಿತ್ತಿಯ ಪಾತ್ರ ಮಾಡಿದ್ದಾರೆ.ಜೊತೆಗೆ ಚಿತ್ರಕ್ಕೆ ಬಂಡವಾಳವನ್ನೂ ಹಾಕಿದ್ದಾರೆ. ಅವರೊಂದಿಗೆ ಪದ್ಮಾವತಿ ಚಂದ್ರಶೇಖರ್ ಸಹ ನಿರ್ಮಾಣದಲ್ಲಿ ಕೈಜೋಡಿಸಿದ್ದು ಇವರೆಗೆ ಬೆಂಬಲವಾಗಿ ವಾಣಿಜ್ಯಮಂಡಳಿ ಮಾಜಿ ಅಧ್ಯಕ್ಷ ಭಾ.ಮ ಹರೀಶ್ ನಿಂತಿದ್ದಾರೆ.
ನಾಯಕಿಯಾಗಿ ಕಾಣಿಸಿಕೊಳ್ಳುವ ಜೊತೆಗೆ ಚಿತ್ರದಲ್ಲಿ ಬರುವ 11 ಹಾಡುಗಳಿಗೆ ಗೀತಪ್ರಿಯಾ ಅವರೇ ಹಾಡಿರುವುದು ವಿಶೇಷ. ಚಿತ್ರಕ್ಕೆ ಅನಂತ್ ಆರ್ಯನ್ ಸಂಗೀತ ನೀಡಿದ್ದು ಗ್ರಾಮೀಣ ಸೊಗಡಿನಲ್ಲಿ ಹಾಡುಗಳು ಮೂಡಿ ಬಂದಿವೆ. ಚಿತ್ರಕ್ಕೆ ಸಾತ್ವಿಕ್ ಪವನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.ಈ ವೇಳೆ ಮಾತನಾಡಿದ ಹಿರಿಯ ನಟ ಶ್ರೀನಾಥ್, ಗ್ರಾಮೀಣ ಪ್ರದೇಶದಲ್ಲಿ ಹೆರಿಗೆ ಮಾಡಿಸುವಲ್ಲಿ ಸೂಲಗಿತ್ತಿಯರ ಪಾತ್ರ ದೊಡ್ಡದು ಅಂತಹ ಮಹಿಳೆಯರ ಕುರಿತು ಚಿತ್ರ ಮಾಡುವ ಮೂಲಕ ಅವರನ್ನು ನೆನಪು ಮಾಡಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ, ನಾಯಕಿಯಾಗಿ ಕಾಣಿಸಿಕೊಂಡಿರುವ ಗೀತಪ್ರಿಯಾ ಅದ್ಬುತವಾಗಿ ನಟಿಸಿದ್ದಾರೆ.ಒಳ್ಳೆಯದಾಗಲಿ ಎಂದು ಶುಭಕೋರಿದರು.
ಡಾ. ಕಾಮಿನಿ ರಾವ್ ಮಾತನಾಡಿ, ನಾಯಕಿಯಾಗಿ ಕಾಣಿಸಿಕೊಂಡಿರುವ ಗೀತ ಪ್ರಿಯಾ ಅವರಿಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ. ಸೂಲಗಿತ್ತಿಯ ಪಾತ್ರದಲ್ಲಿ ಅವರ ನಟನೆ ಉತ್ತಮವಾಗಿದೆ. ಚಿತ್ರರಂಗದಲ್ಲಿ ಇನ್ನಷ್ಟು ಉತ್ತಮ ಪಾತ್ರಗಳನ್ನು ಮಾಡಲಿ ಎಂದರು.
ನಾಯಕಿ ಕಮ್ ನಿರ್ಮಾಪಕಿ ಗೀತ ಪ್ರಿಯಾ ಮಾತನಾಡಿ, ತಾಯವ್ವ ಅಪ್ಪಟ ಗ್ರಾಮೀಣ ಸೊಗಡಿನಲ್ಲಿ ಮೂಡಿಬಂದಿರುವ ಚಿತ್ರ. ಚಿತ್ರದಲ್ಲಿ ಹೆಣ್ಣು ಮಕ್ಕಳನ್ನು ಉಳಿಸಿ ಬೆಳೆಸಿ ಎನ್ನುವ ಸಂದೇಶ ಕೂಡ ಇದೆ. ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು ಶೀಘ್ರದಲ್ಲಿ ತೆರೆಗೆ ತರವು ಆಲೋಚನೆ ಇದೆ.
ಸಹ ನಿರ್ಮಾಪಕಿ ಪದ್ಮಾವತಿ ಚಂದ್ರಶೇಖರ್ ಮಾತನಾಡಿ ಸಾಮಾಜಿಕ ಕಳಕಳಿ ಇರುವ ಚಿತ್ರ ತಾಯವ್ವ. ಚಿತರ ಉತ್ತಮವಾಗಿ ಮೂಡಿ ಬಂದಿದೆ. ಗೀತ ಪ್ರಿಯಾ ಅವರಿಗೆ ಮತ್ತೊಂದು ಚಿತ್ರ “ಸಾಕವ್ವ” ನಿರ್ಮಾಣ ಮಾಡುತ್ತಿರುವುದಾಗಿ ಇದೇ ವೇಳೆ ಪ್ರಕಟಿಸಿದರು.
ಬಾ.ಮ ಹರೀಶ್, ಚಿತ್ರದಲ್ಲಿ ಗೀತ ಪ್ರಿಯ ಅವರು ಉತ್ತಮವಾಗಿ ನಟಿಸಿದ್ದಾರೆ, ಅವರಿಗೆ ಗೀತ ಪ್ರಿಯಾ ಎಂದು ಹೆಸರು ಕೊಟ್ಟಿದ್ದೆ ನಾನು, ಈ ಮುಂಚೆ ಅವರ ಹೆಸರು ಗೀತಾ ನಾಗ್‍ಪಾಲ್, ನಮ್ಮದೇ ಆದ ಆಡಿಯೋ ಕಂಪನಿಯಿಂದ ಹಾಡುಗಳು ಹೊರಬಂದಿವೆ ಎಂದರು.
ಸಂಗೀತ ನೀಡಿರುವ ಅನಂತ್ ಆರ್ಯನ್ ಸೇರಿದಂತೆ ಹಲವು ಗಣ್ಯರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.