ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ “ ರಾಮಾಯಣ” ಚಿತ್ರದ ಶೀರ್ಷಿಕೆಯ ಟೀಸರ್ ಬಿಡುಗಡೆಯಾಗಿದ್ದು ಭಾರತೀಯ ಚಿತ್ರರಂಗದ ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದೆ.
ರಾಮನಾಗಿ ರಣಬೀರ್ ಕಪೂರ್ ಮತ್ತು ರಾವಣವಾಗಿ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿದ್ದು ಇಬ್ಬರ ಪಾತ್ರದ ಟೀಸರ್ ಬಿಡುಗಡೆಯಾಗಿದ್ದಯ ಅಭಿಮಾನಿಗಳ ನಿರೀಕ್ಷೆ ಮತು ಕುತೂಹಲವನ್ನು ಮತ್ತಷ್ಟು ಹೆಚ್ಚು ಮಾಡಿದೆ.
ಲಕ್ಷ್ಮಣನಾಗಿ ರವೀ ದುಬೆ, ಸೀತಯಾಗಿ ಸಾಯಿ ಪಲ್ಲವಿ, ಹನುಮಾನ್ ಪಾತ್ರದಲ್ಲಿ ಸನ್ನಿ ಡಿಯೋಲ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.ನಮಿತ್ ಮಲ್ರೋತ್ರಾ ಮತ್ತು ರಾಕಿಂಗ್ ಸ್ಟಾರ್ ಯಶ್ “ ರಾಮಾಯಣ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿತೇಶ್ ತಿವಾರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.
ರಾಮಾಯಣ ಚಿತ್ರದ ಮೊದಲ ಭಾಗ 2026 ದೀಪಾವಳಿಗೆ ಬಿಡುಗಡೆಯಾಗಲಿದ್ದು ಎರಡನೇ ಭಾಗ 2027ರ ದೀಪಾವಳಿಗೆ ಚಿತ್ರ ತೆರೆಗೆ ಬರಲಿದೆ. ಎರಡು ಭಾಗಗಳಲ್ಲಿ ರಾಮಾಯಣ ತೆರೆಗೆ ಬರಲಿದ್ದು ಭಾರತೀಯ ಚಿತ್ರರಂಗದ ಅಭಿಮಾನಿಗಳನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದೆ.
ಕೆಜಿಎಫ್ ಸರಣಿಯ ಯಶಸ್ಸಿನ ನಂತರ ನಟ ರಾಕಿಂಗ್ ಸ್ಟಾರ್ ಯಶ್, ಟಾಕ್ಸಿಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ, ಆ ಚಿತ್ರ ಇದೇ ವರ್ಷ ತೆರೆಗೆ ಬರುವ ಎಲ್ಲಾ ಸಾಧ್ಯತೆ ಇದೆ, ಆ ಬಳಿಕ 2026 ಮತ್ತು 2027ರಲ್ಲಿ ದೀಪಾವಳಿಗೆ ರಾಮಾಯಣ ಭಾಗ-1 ಮತ್ತು ಭಾಗ -2 ಒಂದು ವರ್ಷದ ಅಂತರದಲ್ಲಿ ತೆರೆಗೆ ಬರಲಿದೆ.
ರಾಕಿಂಗ್ ಸ್ಟಾರ್ ಯಶ್ ನಿರ್ಮಾಣ ಸಂಸ್ಥೆ ಮಾಸ್ಟರ್ ಮೈಂಡ್ ಮತ್ತು ಪ್ರೈಮ್ ಪೋಕಸ್ ಸಂಸ್ಥೆ ಚಿತ್ರಕ್ಕೆ ಬಂಡವಾಳ ಹಾಕಿವೆ. ಚಿತ್ರ ಹಿಂದಿ, ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ.