ಜಗತ್ತಿಗೆ ಕಳೆದ ಐದು ಸಾವಿರ ವರ್ಷಗಳ ಹಿಂದೆ ನಮ್ಮ ಸನಾತನ ಧರ್ಮ ನೀಡಿದ ಅತ್ಯಂತ ದೊಡ್ಡ ಕೊಡುಗೆಯಾದ. ಯೋಗದಿಂದ ಆರೋಗ್ಯವನ್ನು ರಕ್ಷಿಸಿಕೊಳ್ಳುವಂತಾಗಿದೆ ಕನ್ನಡದ ಪೂಜಾರಿ, ಖ್ಯಾತ ವಾಗ್ಮಿ, ಲೇಖಕರು-ಚಿಂತಕರೂ ಆದ ಹಿರೇಮಗಳೂರು ಕಣ್ಣನ್ ಹೇಳಿದ್ದಾರೆ.
ಮಹಾಲಕ್ಷ್ಮಿಪುರಂನ ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದ ವತಿಯಿಂದ ೧೧ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಯಾರ ಮನಸ್ಸು ಯೋಗದಿಂದ ಕೂಡಿರುತ್ತದೆ ಅಂತಹವರ ನಡೆ ಮತ್ತು ನುಡಿ ಕೇವಲ ಆದರ್ಶಪ್ರಾಯವಾಗಿರುವುದಿಲ್ಲ, ಆರೋಗ್ಯ ಪ್ರಾಯವಾಗಿರುತ್ತದೆ. ಆರೋಗ್ಯವೆಂದರೆ, ಕಾಮ,ಕ್ರೋಧ,ಲೋಭ,ಮೋಹ, ಮದ, ಮಾತ್ಸರ್ಯ ಈ ಆರು ಯೋಗ್ಯವಾಗಿದ್ದರೆ, ನಮ್ಮ ಜೀವನದಲ್ಲಿ ಅರೋಗ್ಯ ಸಮರ್ಪಕವಾಗಿರುತ್ತದೆ ಎಂದರು.
ಎಲ್ಲರಿಗೂ ಯೋಗಾಭ್ಯಾಸದ ಅಅವಶ್ಯಕತೆಯನ್ನು ಒತ್ತಿ ಹೇಳಿದರು. ಮತ್ತು ನಮ್ಮ ಹಿರಿಯರ ಜೀವನಚರಿತ್ರೆ-ವಿಚಾರಗಳನ್ನು ಓದಿ, ಆರೋಗ್ಯಕರ ಮನಸ್ಥಿತಿ ಬೆಳೆಸಿಕೊಳ್ಳಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಯೋಗ ಕ್ಷೇತ್ರದಲ್ಲಿ ದುಡಿದ ಮಹನೀಯರುಗಳಾದ ಯೋಗಾಚಾರ್ಯ, ಪ್ರಕೃತಿ ಚಿಕಿತ್ಸಕ, ಪರ್ಯಾಯ ಔಷಧ ತಜ್ಞರಾದ ಡಾ.ಬಿ.ಎನ್.ಬ್ರಹ್ಮಾಚಾರ್ಯ ಮತ್ತು ಹುಬ್ಬಳ್ಳಿಯ ಧನ್ಯ ಯೋಗ ಶಾಲೆಯ ಸಂಸ್ಥಾಪಕರಾದ ಯೋಗಾಚಾರ್ಯ ವಿನಾಯಕ ತಲಗೇರಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನಿತ ಡಾ:ಬ್ರಹ್ಮಾಚಾರ್ಯರು ಆರೋಗ್ಯವನ್ನು ಕಾಪಾಡಿಕೊಳ್ಳಲು ದೈನಂದಿನ ಚಟುವಟಿಕೆಗಳಲ್ಲಿ ಮಿತಾಹಾರ, ನೀರಿನ ಸೇವನೆ, ವ್ಯಾಯಾಮ, ಸ್ವಚ್ಛತೆ, ಆರೋಗ್ಯಕರ ಹವ್ಯಾಸ ಈ ಪಂಚಸೂತ್ರಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಲು ಕರೆನೀಡಿದರಲ್ಲದೆ, ಯೋಗ ಮತ್ತು ಆರೋಗ್ಯ ಕುರಿತು ಸಲಹೆಗಳನ್ನು ನೀಡಿದರು.
ಸನ್ಮಾನಿತ ಶ್ರೀ ವಿನಾಯಕ ತಲಗೇರಿಯವರು ಮಾತನಾಡಿ, ಜೀವನದಲ್ಲಿ ಮಾನ್ಯತೆಗಿಂತ ಧನ್ಯತೆ ಬಹುಮುಖ್ಯ. ಸನ್ಮಾನ ತಮ್ಮ ಜವಾಬ್ದಾರಿ ಹೆಚ್ಚಿಗೆ ಮಾಡುತ್ತದೆ. ಯೋಗ ಎಲ್ಲರನ್ನು ಒಟ್ಟುಗೂಡಿಸುತ್ತದೆ, ಯೋಗದಿಂದ ಮನಸ್ಸಿನ ಮೇಲೆ ನಿಯಂತ್ರಣ ತಂದುಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದ ವಿಶಿಷ್ಟ ಕಾರ್ಯಕ್ರಮವಾಗಿ ಯೋಗ ಪ್ರದರ್ಶನವನ್ನು ಯೋಗ ಕೇಂದ್ರದ ಸದಸ್ಯರು ಮತ್ತು ನೃತ್ಯಪಟುಗಳ ಸಂಯೋಜನೆಯಲ್ಲಿ ಜನಪದ, ಕನಕದಾಸರ ಹಾಡು ಮತ್ತು ದೇಶಭಕ್ತಿಗಳ ಹಿನ್ನಲೆಯಲ್ಲಿ ಅದ್ಭತವಾಗಿ ನಡೆದು, ನೆರೆದಿದ್ದರ ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿತು.
ಕಾರ್ಯಕ್ರಮದಲ್ಲಿ ಯೋಗಕ್ಷೇತ್ರದ ಹಲವು ಗಣ್ಯರು, ವಿಶೇಷ ಆಹ್ವಾನಿತರು, ಯೋಗಾಸಕ್ತರು ಗಣನೀಯ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಯೋಗಾಚಾರ್ಯ ನಾಗೇಶ್ ಸಾರಥ್ಯದಲ್ಲಿ ನಡೆದ ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾರ್ಥನೆಯನ್ನು ಸುಮಾ ನಾಗೇಶ್ ಮಾಡಿದರೆ, ಸ್ವಗತವನ್ನು ನಾಗೇಶ್‌ರಾವ್ ಮಾಡಿದರೆ, ಪ್ರಸನ್ನರವರು ನಿರೂಪಣೆಯನ್ನು, ವಂದನಾರ್ಪಣೆಯನ್ನು ಲೋಕೇಶ್ ಮಾಡಿದರು.