ಬಿಗ್ ಬಾಸ್ ವಿಜೇತ, ವಾಗ್ಮಿ, `ಕರ್ನಾಟಕ ಅಳಿಯ` ಖ್ಯಾತಿಯ ಪ್ರಥಮ್ ನಾಯಕ, ಹಿರಿಯ ಸಾಹಸ ಸಂಯೋಜಕ ಕೌರವ ವೆಂಕಟೇಶ್ ಮೊದಲ ಬಾರಿ ನಿರ್ದೇಶನ ಮಾಡುತ್ತಿರುವ ನೋ ಕೋಕೇನ್ ಸಿನಿಮಾದ ಸೂಕ್ಷ ದೃಶ್ಯದ ಚಿತ್ರೀಕರಣ ಬನ್ನೇರುಘಟ್ಟ ರಸ್ತೆಯಲ್ಲಿರುವ ವೈಟ್ ಹೌಸ್ ಬಿಲ್ಡಿಂಗ್‌ದಲ್ಲಿ ನಡೆಯುತ್ತಿತ್ತು. ದ ಡಫಿನಿಷನ್ ಆಫ್ ಪ್ಯಾಟ್ರಿಯಾಟಿಸಮ್ ಎಂಬ ಅಡಿಬರಹವಿದೆ. ಅಯೋಧ್ಯರಾಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ಪುನೀತ್ ನಿರ್ಮಾಣ ಮಾಡುತ್ತಿದ್ದಾರೆ. ಅಂದು ಕಲಾವಿದರುಗಳಾದ ಶೋಭರಾಜ್, ಸಿದ್ಲಿಂಗು ಶ್ರೀಧರ್, ಜಗದೀಶ್‌ಕೊಪ್ಪ ಮತ್ತು ತೆಲುಗು ಚಿತ್ರರಂಗದ ಖ್ಯಾತ ನಟ ಸೂರ್ಯಭಗವಾನ್ ದಾಸ್ ಸೆಟ್‌ದಲ್ಲಿ ಹಾಜರಿದ್ದರು.
ಪತ್ರಕರ್ತರುಗಳು ಸೆಟ್‌ಗೆ ಭೇಟಿ ನೀಡಿದಾಗ ಪ್ರಥಮ್ ಮುಖ ಹಾಗೂ ಮೈ ತುಂಬಾ ರಕ್ತದ ಕಲೆಯಲ್ಲಿ ಕಾಣಿಸಿಕೊಂಡರು. ಶಾಟ್ ಓಕೆ ಆದಾಗ ತಂಡವು ಮಾತಿಗೆ ಕುಳಿತುಕೊಂಡತು.
ಪ್ರಥಮ್ ಮಾತನಾಡಿ ಇಂದು ನಡೆಯತ್ತಿರುವ ಸನ್ನಿವೇಶವು ಪ್ರಸಕ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಿಕ್ಕಾಟದ ಸುದ್ದಿ ಹೋಲುತ್ತದೆ. ಸಿದ್ಲಿಂಗು ಸರ್ ಅವರೊಂದಿಗೆ ಇದೇ ವಿಷಯವಾಗಿ ಮಾತಾಡಿಕೊಂಡಿದ್ದೇವು. ಟಾಲಿವುಡ್‌ನ ಸೂರ್ಯಭಗವಾನ್ ದಾಸ್ ಅವರು ಮೊದಲ ಬಾರಿ ಗೃಹ ಸಚಿವರ ಪಾತ್ರದಲ್ಲಿ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದಾರೆ. ಎರಡು ದಿವಸಗಳಿಂದ ಪ್ರಯಾಣ, ಶೂಟಿಂಗ್‌ದಲ್ಲಿ ಇರುವುದರಿಂದ ಬಳಲಿದ್ದಾರೆ. ಆದಕಾರಣ ಅವರು ವಿಶ್ರಾಂತಿಗೆ ಹೋದರು. ಇಷ್ಟುವರ್ಷದ ಅನುಭವಗಳನ್ನು ಬುಟ್ಟಿಗೆ ಹಾಕಿಕೊಂಡು, ದೊಡ್ಡ ಮಟ್ಟದ ರಿಸ್ಕ್ ತೆಗೆದುಕೊಳ್ಳುತ್ತಿದ್ದೇನೆ. ಅದೇ ರೀತಿ ಚಿತ್ರವನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದೇನೆ. ದಯಮಾಡಿ ಒಪ್ಪಿಸಿಕೊಳ್ಳಬೇಕೆಂದು ಅನುಭವಗಳನ್ನು ಹಂಚಿಕೊಂಡರು.
ಕೌರವವೆಂಕಟೇಶ್ ಮಾತನಾಡಿ ಕೇಂದ್ರ ರಕ್ಷಣಾ ಸಚಿವರಾಗಿ ಸಿದ್ಲಿಂಗು ಶ್ರೀಧರ್, ಗೃಹ ಸಚಿವ, ಪೋಲೀಸ್ ಆಯುಕ್ತರೊಂದಿಗೆ ಕೋಕೇನ್ ಬಗ್ಗೆ ಗಂಭೀರ ಚರ್ಚೆ ನಡೆಸುತ್ತಿರುವಾಗ ನಾಯಕನ ಆಗಮನವಾಗುತ್ತದೆ. ಸೆಕ್ಯೂರಿಟಿ ಅವರುಗಳನ್ನು ಭೇದಿಸಿ ಬಂದಿದ್ದರಿಂದ, ನಮ್ಮ ಮೇಲೆ ಆಕ್ರಮಣ ಮಾಡಲು ಬಂದಿದ್ದರಂದು ಅನುಮಾನಿಸಿ ಫೈರಿಂಗ್ ಮಾಡಿದಾಗ, ಅಲ್ಲಿಗೆ ಇಂಟರ್‌ವೆಲ್. ಆತ ಏತಕ್ಕೆ ಬಂದ? ಹೇಳುವುದಾದರೂ ಏನಿತ್ತು? ಇದಕ್ಕೆಲ್ಲಾ ಉತ್ತರ ಚಿತ್ರ ನೋಡಿದರೆ ತಿಳಿಯುತ್ತದೆ. ಇಲ್ಲಿಯವರೆಗೂ 25 ದಿವಸ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಇನ್ನು ಬಾಕಿ ಹತ್ತು ದಿನದಲ್ಲಿ ಕ್ಲೈಮಾಕ್ಸ್‌ನ್ನು ಮಂಗಳೂರು, ಒಂದು ಹಾಡಿಗಾಗಿ ವಿದೇಶಕ್ಕೆ ಹೋಗುವ ಇರಾದೆ ಇದೆ ಎಂದರು.
ಒಬ್ಬ ಪೋಲೀಸ್ ಆಯುಕ್ತ ಎಷ್ಟು ಒಳ್ಳೆಯವನು ಎಂಬುದನ್ನು ಇದರಲ್ಲಿ ತೋರಿಸಲಾಗಿದೆ. ಪ್ರಥಮ್ ಇದ್ದರೆ ಶೂಟಿಂಗ್ ಸುಲಭವೆಂದು ಶೋಭರಾಜ್ ಹೇಳಿದರು.
ನಾಯಕಿ ಆರನ ಮೂಳೇರ್, ಉಳಿದಂತೆ ರಚಿತಾ, ಮಿಮಿಕ್ರಿಗೋಪಿ, ರವಿಕಾಳೆ ಮುಂತಾದವರು ಅಭಿನಯಿಸಿದ್ದಾರೆ. ಯೋಗರಾಜಭಟ್-ಭರ್ಜರಿ ಚೇತನ್ ಸಾಹಿತ್ಯದ ಗೀತೆಗಳಿಗೆ ಡಿ.ಆರ್.ಕಲ್ಕಿ ಅಭಿಷೇಕ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಸಾಮ್ರಾಟ್, ಸಂಕಲನ ರಘು ಅವರದಾಗಿದೆ.