ಆರ್ಯ ಫಿಲಂಸ್ ಲಾಂಛನದಲ್ಲಿ ಆರ್. ಲಕ್ಷ್ಮಿ ನಾರಾಯಣಗೌಡ್ರು ನಿರ್ಮಿಸುತ್ತಿರುವ, ನೃತ್ಯ ಸಂಯೋಜಕ ಎಂ.ಆರ್. ಕಪಿಲ್ ಅವರು ನಿರ್ದೇಶಿಸುತ್ತಿರುವ ಒಂದು ಸುಂದರ ದೆವ್ವದ ಕಥೆ ಚಿತ್ರದ ಟೈಟಲ್ ಇದೀಗ ಛೇಂಜ್ ಆಗಿದ್ದು, ಹೊಸದಾಗಿ `ಬೀಟ್ ಪೊಲೀಸ್` ಎಂಬ ಶೀರ್ಷಿಕೆ ಇಡಲಾಗಿದೆ.
ನೃತ್ಯ ಸಂಯೋಜಕ ಕಪಿಲ್ ನಿರ್ದೇಶನದ 10ನೇ ಚಿತ್ರ ಇದಾಗಿದ್ದು ಇಂದಿನ ಎಜುಕೇಶನ್ ವ್ಯವಸ್ಥೆಯ ಸಾಧಕ ಬಾಧಕಗಳ ಕುರಿತಂತೆ ಹೆಣೆಯಲಾಗಿರುವ ವಿಭಿನ್ನ ಕಥಾವಸ್ತು ಚಿತ್ರದಲ್ಲಿದೆ. ಸಾಹಸ ನಿರ್ದೇಶಕ ಕೌರವ ವೆಂಕಟೇಶ್ ನಾಯಕ ನಟರಾಗಿ ನಟಿಸುತ್ತಿರೋ ಈ ಚಿತ್ರದಲ್ಲಿ ಭೀಮ ಖ್ಯಾತಿಯ ನಟಿ ಪ್ರಿಯಾ ಅವರು ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ನಟ ಶೋಭರಾಜ್ ಅವರೂ ಪೊಲೀಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಎಜುಕೇಶನ್ ಬಗ್ಗೆ ಒಂದು ಗಟ್ಟಿಯಾದ ಕಥೆ ಚಿತ್ರದಲ್ಲಿದೆ. ಲಿಲಾವತಿ ದೇಗುಲದಲ್ಲಿ ಹಾಗೂ ಬೆಂಗಳೂರು ಸುತ್ತಮುತ್ತ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ.
ದಶಕದ ಹಿಂದೆ ಕೋಲಾರ ಎಂಬ ಚಿತ್ರ ನಿರ್ಮಿಸಿದ್ದ ಆರ್. ಲಕ್ಷ್ಮೀ ನಾರಾಯಣಗೌಡ ಚಿತ್ರದ ನಿರ್ಮಾಪಕರು. ಈ ಚಿತ್ರದಲ್ಲಿ ಫಿಲಂ ಚೆಂಬರ್ ಅಧ್ಯಕ್ಷ ಆರ್. ನರಸಿಂಹಲು ಒಬ್ಬ ಅರ್ಚಕರ ಪಾತ್ರ ನಿರ್ವಹಿಸುತ್ತಿದ್ದಾರೆ. ಸಾಯಿ ಕೃಷ್ಣ ಹೆಬ್ಬಾಳ ಅವರ ಚಿತ್ರಕಥೆ, ಸಂಭಾಷಣೆ, ಹರ್ಷ ಕೊಗೋಡ್ ಅವರ ಸಂಗೀತ, ಶಂಕರ್ ಆರಾಧ್ಯ ಅವರ ಛಾಯಾಗ್ರಹಣ, ವಿನಯ್. ಜಿ. ಆಲೂರು ಅವರ ಸಂಕಲನ, ಶರಣ್ ಗದ್ವಾಲ್ ಅವರ ತಾಂತ್ರಿಕ ನಿರ್ದೇಶನ ಈ ಚಿತ್ರಕ್ಕಿದೆ.
ಕೆ.ಟಿ. ಮುನಿರಾಜ್, ಆರ್. ಲಕ್ಷ್ಮೀ ನಾರಾಯಣಗೌಡ, ವಿ. ಸಿ.ಎನ್. ಮಂಜು,ಗುರು ಪ್ರಸಾದ್, ಸುರೇಶ್ ಮುರಳಿ, ವಿಕ್ಟರಿ ದಯಾಲನ್, ನಾರಾಯಣಸ್ವಾಮಿ, ವಿಕ್ಟರಿ ವಾಸು, ಶಂಕರ್ ಭಟ್ ಪ್ರಮುಖ ಪಾತ್ರಗಳಲ್ಲಿದ್ದಾರೆ.