ಅರಣ್ಯ ನಾಶ ಮತ್ತು ಅದರ ಉಳಿವು ಮತ್ತು ಮಕ್ಕಳ ಬಾಲ್ಯ ಸೇರಿದಂತೆ ಸೂಕ್ಷ್ಮ ವಿಚಾರಗಳನ್ನು ಮುಂದಿಟ್ಟಿಕೊಂಡು " ಪಾಠಶಾಲಾ" ಚಿತ್ರ ನವೆಂಬರ್ 14 ರಂದು ತೆರೆಗೆ ಬರಲು ಸಜ್ಜಾಗಿದೆ.
ಈ ಕುರಿತು ಮಾಹಿತಿ ನೀಡಿದ ನಿರ್ದೇಶಕ ಹೆದ್ದೂರು ಮಂಜುನಾಥ್ ಶೆಟ್ಟಿ. ಪಾಠಶಾಲಾ ಎನ್ನುವ ಹೆಸರು ಇದೆ ಎಂದ ಮಾತ್ರಕ್ಕೆ ಇದು ಮಕ್ಕಳ ಚಿತ್ರ ಅಲ್ಲ ಬದಲಾಗಿ ಹಿರಿಯರ ಚಿತ್ರ. ಸದ್ಯದಲ್ಲಿಯೇ ಸೆನ್ಸಾರ್ ಆಗಲಿದೆ. ನವಂಬರ್ 14 ರಂದು ಚಿತ್ರ ತೆರೆಗೆ ತರಲಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು.
ಶಿಕ್ಣಕರು ಮತ್ತು ವಿದ್ಯಾರ್ಥಿಗಳ ನಡುವೆ ದೊಡ್ಡ ಗ್ಯಾಪ್ ಇದೆ. ಜೊತೆಗೆ ಪತ್ನಿಯ ಚಿಕ್ಕಪ್ಪ ಹೇಳಿದ ಕಥೆ, ಅರಣ್ಯ ಭೂಮಿ ಒತ್ತುವರಿ ಮತ್ತು ತೆರವು ಮಾಡುವ ಸೂಕ್ಷ್ಮ ವಿಷಯ ಮತ್ತು ಬಾಲ್ಯ ವನ್ನು ಇಟ್ಟು ಸಿನಿಮಾ ಮಾಡಿದ್ದೇವೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಆಡಿಷನ್, ಕಥೆ ಲೊಕೇಶನ್ ಮತ್ತು ನಿರ್ಮಾಪಕರು ಅಲ್ಲೇ ಸಿಕ್ಕರು ಜೊತೆಗೆ ಅಲ್ಲೇ 20 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಿದರು.
ಚಿತ್ರದ ಶೀರ್ಷಿಕೆ ಕೆಳಗೆ ಓದು ಇಲ್ಲ ಓಡೋಗು ಎನ್ನುವ ಅಡಿ ಬರಹವಿದೆ. ಅದು ಯಾಕೆ ಎನ್ನುವುದು ಚಿತ್ರದಲ್ಲಿಯೇ ನೋಡಬೇಕು. ಅದಕ್ಕೀ ಹಿನ್ನೆಲೆ ಇದೆ ಎಂದು ಮಾಹಿತಿ ಹಂಚಿಕೊಂಡರು.
ಹಿರಿಯ ಕಲಾವಿದ ಕಿರಣ್ ನಾಯಕ್ ಮಾತನಾಡಿ , ಚಿತ್ರದಲ್ಲಿ ಸಂಜೀವಣ್ಣ ಎನ್ನುವ ನೈಜ ಪಾತ್ರ ಮಾಡಿದ್ದೇನೆ. ಅರಣ್ಯ ನಾಶ ಆಗುತ್ತಿರುವುದು ಬುಡುಕಟ್ಟು ಜನರಿಂದ ಅಲ್ಲ ಬದಲಾಗಿ ಅರಣ್ಯ ಇಲಾಖೆಯಿಂದ. ಈ ಸತ್ಯ ಗೊತ್ತಿದ್ದರೂ ಅನಗತ್ಯವಾಗಿ ಬುಡಕಟ್ಟು ಜನರ ಮೇಲೆ ಆರೋಪ ಹೊರಿಸುವ ಕೆಲಸಮಾಡಲಾಗುತ್ತಿದೆ ಎಂದರು ಪಾತರ ನೈಜ ಘಟನೆ ಚಿತ್ರ ಕೃಷಿಕ ಪ್ರತಿ ವರ್ಷದಿಣಮದ ಬುಡುಕಟ್ಟು ಜನರಿಂದ ಅರಣ್ತ ನಾಶವಾಗುತ್ತಿದೆ ಎಂದು ಹೇಳಿದರು.
ಮತ್ತೊಬ್ಬ ನಟ ಅಕ್ಷಯ್ ಮಾತನಾಡಿ ನವೀನ್ ಎನ್ನುವ ಪಾತ್ರ, ಸೈಕಲ್ ಶಾಪ್ ಇಟ್ಟುಕೊಂಡಿರುತ್ತೇನೆ. ಚಿತ್ರೀಕರಣದ ಸಮಯದಲ್ಲಿ ಚಿತ್ರೀಕರಣ ಮಾಡಿದ ಅನುಭವ ಮರೆಯಲಾರದ್ದು ಎಂದರು.
ಹಿರಿಯ ಕಲಾವಿದರಾದ ಸುಧಾಕರ್ ಬನ್ನಂಜೆ ಮಾತನಾಡಿ, ಹೆಡ್ ಮಾಸ್ಟರ್ ಪಾತ್ರ. ಚೆನ್ನಾಗಿ ಮೂಡಿ ಬಂದಿದೆ. 80 ರ ದಶದಕಲ್ಲಿ ಶಿಕ್ಣಕರು ಊರಿನ ಬಗ್ಗೆ ಇದ್ದ ಭಾಂಧವ್ಯ ,ಮಕ್ಕಳ ಬಗ್ಗೆ ಇದ್ದ ಕಾಳಜಿ ಚಿತ್ರದಲ್ಲಿದೆ. ಶೈಕ್ಷಣಿಕ ಪಾಠಶಾಲೆ ಅಲ್ಲ ಬದುಕಿನ ಪಾಠಶಾಲೆ ಚಿತ್ರದ ಕಥಾವಸ್ತು. ಚೆನ್ನಾಗಿ ಮೂಡಿಬಂದಿದಡ. ಪ್ರತಿ ಮಗುವಿನ ಹಿನ್ನೆಲೆಯಲ್ಲಿ ಒಂದೊಂದು ಕಥೆ ಇದೆ ಅದನ್ನು ನಿರ್ದೇಶಕರು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ತೀರ್ಥಹಳ್ಳಿ, ಶಿವಮೊಗ್ಗ ಮಲೆನಾಢ ಭಾಗ ಭಾಷೆ ಕೇಳಬಹುದಾಗಿದೆ ಎಂದರು.
ಬಾಲ ಕಲಾವಿದರಾದ ದಿಗಂತ್, ಮಿಥುನ್, ಆಯುಷ್, ಶ್ರೀಯ ನಿರ್ಮಾಪಕರಾದ ಪ್ರದೀಪ್ ಗುಡ್ಡೇಮನೆ, ಅರುಣ್ ಮಲ್ಲೇಸರ, ಭಾಸ್ಕರ್ ಕಮ್ಮರಡಿ, ನೃತ್ಯ ನಿರ್ದೇಶಕ ಅರುಣ್ , ಅಂಬಿಕಾ ಮತ್ತಿತರರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.