ಚಿತ್ರ : ಟೈಮ್‍ಪಾಸ್
ನಿರ್ದೇಶನ ; ಕೆ.ಚೇತನ್ ಜೋಡಿದಾರ್,
ತಾರಾಗಣ: ಇಮ್ರಾನ್ ಪಾಷ, ವೈಸಿರಿ ಕೆ ಗೌಡ, ಕೆ,ಚೇತನ್ ಜೋಡಿದಾರ್ ,ರತ್ಷಾರಾಮ್, ಓಂ ಶ್ರೀ ಯಕ್ಷಿಪ್, ಪ್ರಭಾಕರ್ ರಾವ್, ನವೀನ್ ಕುಮಾರ್,ಸಂಪತ್ ಕುಮಾರ್, ಅಶ್ವಿನಿ ಶ್ರೀನಿವಾಸ್ ಮತ್ತಿತರರು
ರೇಟಿಂಗ್ ; * 3 / 5
ಸಿನಿಮಾದೊಳಗೊಂದು ಸಿನಿಮಾ, ಕನ್ನಡದಲ್ಲಿ ಅನೇಕ ಸಿನಿಮಾಗಳು ಬಂದಿವೆ. ಆ ರೀತಿಯ ಮತ್ತೊಂದು ಪ್ರಯತ್ನ ಟೈಮ್‍ಪಾಸ್ ಚಿತ್ರ ಈವಾರ ತೆರೆಗೆ ಬಂದಿದೆ
ಸಿನಿಮಾದೊಳಗೆ ಸಿನಿಮಾ ಬಂದ ಸಿನಿಮಾಕ್ಕಿಂತ ಭಿನ್ನವಾಗಿದೆ. ಇಲ್ಲಿ ಕಲಾವಿದರು ಹೊಸಬರಾದರೂ ಚಿತ್ರದ ಕಥೆಯ ಇಲ್ಲಿ ನಾಯಕ.ನಾಯಕಿ, ನಿರ್ದೇಶಕ ಕೆ ಚೇತನ್ ಜೋಡಿದಾರ್ ಚಿತ್ರರಂಗದಲ್ಲಿ ಕಂಡ ಹಲವು ವಾಸ್ತವ ಸಂಗತಿಗಳನ್ನು ಚಿತ್ರದ ಮೂಲಕ ತೆರೆಗೆ ಕಟ್ಟಿಕೊಟ್ಟಿದ್ದಾರೆ.
ತುಂಟತನ, ಡಬ್ಬಲ್ ಮೀನಿಂಗ್ ಸಂಭಾಷಣೆ, ಮನಸ್ಸಿದ್ದರೆ ಮಾಡುವ ಯಾವುದೇ ಕೆಲಸ ಅಸಾಧ್ಯವಲ್ಲ ಎನ್ನುವುದನ್ನು ಸಿನಿಮಾ ಮೂಲಕ ನಿರೂಪಿಸಿದ್ದಾರೆ ಜೊತೆಗೆ ಕೌಟುಂಬಿಕ ಸಂಬಂಧಗಳಿಗೂ ಚಿತ್ರದಲ್ಲಿ ಒತ್ತು ನೀಡಿದ್ದಾರೆ. ಜೊತೆಗೆ ಮನರಂಜನೆಗೂ ಆದ್ಯತೆ ನೀಡಿ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಇಟ್ಟಿದ್ದಾರೆ. ಕೆಲವು ಕಡೆ ಅನಗತ್ಯ ಅನ್ನಿಸುವ ಸನ್ನಿವೇಶಗಳು ಇವೆ. ಅವು ಅಗತ್ಯವಿರಲಿಲ್ಲ ಅದನ್ನು ಸಂಭಾಷಣೆಯ ಮೂಲಕ ಹೇಳಬಹುದಿತ್ತು. ಅದನ್ನು ಹೊರತು ಪಡಿಸಿದರೆ ಟೈಮ್ ಪಾಸ್ ಉತ್ತಮ ಚಿತ್ರ ಎನ್ನಲು ಅಡ್ಡಿಯಿಲ್ಲ.
ಶಂಕರ್ (ಇಮಾನ್ರಾ ಪಾಷ) ಗೆ ಸಿನಿಮಾ ಮೇಲೆ ಎಲ್ಲಿಲ್ಲದ ಪ್ರೀತಿ, ಸಿನಿಮಾ ನಿರ್ದೇಶನ ಮಾಡಬೇಕು ಎನ್ನುವುದು ಆತನ ಜೀವನದ ಬಹುದೊಡ್ಡ ಕನಸು. ಅಪ್ಪ- ಅಮ್ಮನ ವಿರೋದ ಕಟ್ಟಿಕೊಂಡು ಮನೆ ಬಿಟ್ಟು ಹೊರ ಬರ್ತಾನೆ. ಪ್ರೀತಿಸಿದ ಹುಡುಗಿ ( ವೈಸಿರಿ ಕೆ ಗೌಡ)ಗೆ ಹುಡುಗ ಜೀವನದಲ್ಲಿ ಸಾಧನೆ ಮಾಡಬೇಕು ಮನೆಗೆ ಬಂದು ಮಗಳನ್ನು ಕೇಳಿ ಮದುವೆ ಮಾಡಿಕೊಳ್ಳಬೇಕು ಎನ್ನುವ ಆಸೆ.
ಇನ್ನೊಂದೆಡೆ ಯಾರದೋ ಕಥೆಗೆ ಇನ್ನೋರೋ ಹೆಸರು ಹಾಕಿಕೊಂಡು ಹಣ ಹೆಸರು ಮಾಡ್ತಾರೆ. ಮಾಡಿದ ಕೆಲಸಕ್ಕೆ ಸೂಕ್ತ ಸಂಭಾವನೆ ಕೊಡದೆ ಅವಮಾನಿಸುತ್ತಾರೆ. ಇತ್ತೆ ಸಿನಿಮಾ ನಿರ್ದೇಶಕನಾಗಬೇಕು ಎನ್ನುವ ಛಲ ಬಿಡದ ಶಂಕರ್, ಸೋತು ಸುಣ್ಣವಾದ ನಿರ್ಮಾಪಕ ಬೆನ್ನುಬಿದ್ದು ಸಿನಿಮಾ ನಿರ್ಮಾಣ ಮಾಡಲು ಮುಂದಾಗತ್ತಾನೆ. ತನ್ನ ಸುತ್ತ ಮುತ್ತಲಿರುವ ಮಂದಿಯೇ ನಾಯಕ,ನಾಯಕಿ, ಮತ್ತು ಕಲಾವಿದರು. ಕಷ್ಠಪಟ್ಟು ಮಾಡಿದ ಸಿನಿಮಾ ಯಶಸ್ವಿಯಾಗುತ್ತಾ ಇಲ್ಲ ಮುಂದೇನು ಎನ್ನುವುದು ಚಿತ್ರದ ತಿರುಳು.
ನಿರ್ದೇಶಕ ಕೆ. ಚೇತನ್ ಜೋಡಿದಾರ್, ಟೈಮ್ ಪಾಸ್ ಚಿತ್ರಕ್ಕಾಗಿ ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರರಂಗದಲ್ಲಿ ತನಗಾದ ನೋವು, ಅವಮಾನ ಮತ್ತು ಹೊಸಬರನ್ನು ಚಿತ್ರರಂಗ ನಡೆಸಿಕೊಳ್ಳುವ ಬಗೆ ಎಲ್ಲವೂ ಕಣ್ಣಿಗೆ ಕಟ್ಟಿದಹಾಗೆ ಚಿತ್ರದ ಮೂಲಕ ತೆರೆಗೆ ತಂದಿದ್ಧಾರೆ. ಈ ನಿಟ್ಟಿನಲ್ಲಿ ನಿರ್ದೇಶಕರು ತಮ್ಮ ಕೆಲಸದಲ್ಲಿ ಯಶಸ್ಸು ಕಂಡಿದ್ಧಾರೆ. ಟೈಮ್ ಪಾಸ್ ಗಾಗಿ ಮಾಡಿದ ಸಿನಿಮಾ ಎಲ್ಲರಿಗೂ ಇಷ್ಟವಾಗುತ್ತದೆ.
ಚಿತ್ರದಲ್ಲಿ ನಟಿಸಿರುವ ಇಮ್ರಾನ್ ಪಾಷ, ವೈಸಿರಿ ಕೆ ಗೌಡ, ,ರತ್ಷಾರಾಮ್, ಓಂ ಶ್ರೀ ಯಕ್ಷಿಪ್, ಪ್ರಭಾಕರ್ ರಾವ್, ನವೀನ್ ಕುಮಾರ್,ಸಂಪತ್ ಕುಮಾರ್, ಅಶ್ವಿನಿ ಶ್ರೀನಿವಾಸ್ ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬುವ ಪ್ರಯತ್ನ ಮಾಡಿದ್ದಾರೆ.