ರಿಷಬ್ ಶೆಟ್ಟಿ ಫಿಲಂಸ್ ನ ನೂತನ ಚಿತ್ರದ ಆಡಿಷನ್ ಮತ್ತು ಕಾಸ್ಟಿಂಗ್ ಕಾಲ್ ಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ .
Posted date: 02 Fri, Oct 2026 10:57:49 PM

ಹೊಸಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿರುವ ರಿಷಭ್ ಶೆಟ್ಟಿ ಫಿಲಂಸ್ ಸಂಸ್ಥೆ ಬೆಂಗಳೂರಿನ ಜಯನಗರದಲ್ಲಿರುವ ವಿಜಯ ಕಾಲೇಜ್ ನಲ್ಲಿ ಇತ್ತೀಚೆಗೆ ಹೊಸಚಿತ್ರಕ್ಕಾಗಿ ಆಡಿಷನ್ ಹಾಗೂ ಕಾಸ್ಟಿಂಗ್ ಕಾಲ್ ಗೆ 20 ರಿಂದ 65 ವರ್ಷದೊಳಗಿನ ಪುರುಷರು ಹಾಗೂ 20 ರಿಂದ 60 ವರ್ಷದೊಳಗಿನ ಮಹಿಳೆಯರನ್ನು ಆಹ್ವಾನಿಸಿತ್ತು. ಆಡಿಷನ್ ಹಾಗೂ ಕಾಸ್ಟಿಂಗ್ ಕಾಲ್ ಗೆ ನಿರೀಕ್ಷೆಗೂ ಮೀರಿ ರೆಸ್ಪಾನ್ಸ್ ಬಂದಿದೆ. 4000ಕ್ಕೂ ಅಧಿಕ ಜನರು ಆಡಿಷನ್ ಹಾಗೂ ಕಾಸ್ಟಿಂಗ್ ಕಾಲ್ ಗೆ ಆಗಮಿಸಿದ್ದರು. ಸಿನಿಮಾವೊಂದರ ಆಡಿಷನ್ ಗೆ ಈ ಸಂಖ್ಯೆಯ ಜನರು ಭಾಗವಹಿಸಿರುವುದು ಇದೇ ಮೊದಲು. ತಮ್ಮ ಸಂಸ್ಥೆಯ ನೂತನ ಚಿತ್ರದ ಆಡಿಷನ್ ಗೆ ಇಷ್ಟು ಸಹಸ್ರ ಜನರು ಭಾಗಿಯಾಗಿದ್ದಕ್ಕೆ ರಿಷಬ್ ಶೆಟ್ಟಿ ಸಂಸ್ಥೆ ಸಂತಸ ವ್ಯಕ್ತಪಡಿಸಿದೆ ಹಾಗೂ ಎಲ್ಲರಿಗೂ ಧನ್ಯವಾದ ತಿಳಿಸಿದೆ.
GALLERY
Kannada Movie/Cinema News - ರಿಷಬ್ ಶೆಟ್ಟಿ ಫಿಲಂಸ್ ನ ನೂತನ ಚಿತ್ರದ ಆಡಿಷನ್ ಮತ್ತು ಕಾಸ್ಟಿಂಗ್ ಕಾಲ್ ಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ .
- Chitratara.com
Copyright 2009 chitratara.com Reproduction is forbidden unless authorized. All rights reserved.