Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮೆಡಿಕಲ್ ಮಾಫಿಯಾ ಸುತ್ತ ಯುವಾನ್ ಪ್ರತಾಪ್ ಅಭಿನಯದ - ಕಲುಷ - ಟೀಸರ್ ಅನಾವರಣ ಮಾಡಿ ಹಾರೈಸಿದ -ಜಾಲಿಡೇಸ್- ಖ್ಯಾತಿಯ ನಟಿ ಐಶ್ವರ್ಯ ನಾಗ್ .
Posted date: 09 Fri, Oct 2026 04:32:40 PM
ಎಸ್ ಪಿ ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರತಾಪ್ ಆರ್, ನರಹರಿ ನಿರ್ಮಿಸಿರುವ, ಡಿ ಮ್ಯೂಸಿಕ್ಸ್ ಅರ್ಪಿಸುವ, ಯುವಾನ್ ಪ್ರತಾಪ್ & ಐಶ್ವರ್ಯ ಮುತ್ತುರಾಜ್ ನಾಯಕ - ನಾಯಕಿಯಾಗಿ ನಟಿಸಿರುವ "ಕಲುಷ" ಚಿತ್ರದ ಟೀಸರ್ ಹಾಗೂ ಹಾಡು ಬಿಡುಗಡೆ ಸಮಾರಂಭ ಇತ್ತೀಚಿಗೆ ನೆರವೇರಿತು. 

"ಜಾಲಿಡೇಸ್" ಖ್ಯಾತಿಯ ನಟಿ ಐಶ್ವರ್ಯ ನಾಗ್ ಟೀಸರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ದೇವ್ ಗ್ರೂಪ್ಸ್ ಹಾಗೂ ಡಿ ಮ್ಯೂಸಿಕ್ ಮುಖ್ಯಸ್ಥ ದೇವರಾಜ್ ಎನ್, ಉದ್ಯಮಿ ಸಚಿನ್ ಗೌಡ, ಆನಂದ್, ಮಹಾರಾಜ ಜಗ್ಗಿ, ವಿಜಯ್ ಜಾಧವ್,  ಪೂಜಾ, ಅಶೋಕ್ ಮುಂತಾದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.                            

ನಾನು ಮೂಲತಃ ಸಾಫ್ಟ್‌ವೇರ್ ಉದ್ಯೋಗಿ. ಜೊತೆಗೆ 2013 ರಿಂದ ಕನ್ನಡ ಚಿತ್ರರಂಗದೊಂದಿಗೆ ನಂಟು.  "ರಾಬರ್ಟ್", " ಗಾಳ" ಸೇರಿದಂತೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾಯಕನಾಗಿ ಇದು ಮೊದಲ ಚಿತ್ರ. ಈ ಚಿತ್ರಕ್ಕೆ ಕಥೆ ಹಾಗೂ ಚಿತ್ರಕಥೆ ನಾನೇ ಬರೆದಿದ್ದು, ನಿರ್ಮಾಣವನ್ನು ಮಾಡಿದ್ದೇನೆ. ನರಹರಿ ಅವರು ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. 
ಮಂಜುಳಾ, ಹೇಮ ಎನ್ ಕೆ ಹಾಗೂ  ಹರ್ಷಿತಾ ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ.  ಷಣ್ಮುಖ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಐಶ್ವರ್ಯ ಮುತ್ತುರಾಜ್, ಬಲ ರಾಜ್ವಾಡಿ, ಕೆ.ಎಸ್ ಶ್ರೀಧರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. 

ವಿನೋದ್ ಹಿರೇಮಠ ಹಾಗೂ ವಾಸೀಂ ಅಕ್ರಮ್ ಸಂಗೀತ ನೀಡಿದ್ದಾರೆ. "ಕಲುಷ" ಎಂದರೆ ಕೋಪ, ಆಕ್ರೋಶ ಎಂಬ ಅರ್ಥ ಬರುತ್ತದೆ. ಇದೊಂದು ಮೆಡಿಕಲ್ ಮಾಫಿಯಾ ಸುತ್ತ ಹೆಣೆದಿರುವ ಕಥೆ. ನಮಗೆ ತಿಳಿದಿರುವ ಹಾಗೆ ಯಾರು ಇಲ್ಲದ ಅನೇಕರು ಇದಕ್ಕೆ ಇದ್ದ ಹಾಗೆ  ನಾಪತ್ತೆಯಾಗುತ್ತಾರೆ. ನಾಪತ್ತೆಯಾದವರು ಏನಾಗುತ್ತಾರೆ? ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಿದ್ದೇವೆ. ಬೆಂಗಳೂರು, ದಾವಣಗೆರೆ, ಹರಪನಹಳ್ಳಿ ಮುಂತದ ಕಡೆ ಚಿತ್ರೀಕರಣ ಮಾಡಿದ್ದೇವೆ. ಈಗಾಗಲೇ ಟೀಸರ್ ಹಾಗೂ ಹಾಡನ್ನು ಉದ್ಯಮಿ ದೇವರಾಜ್ ಎನ್ ಅವರ ಡಿ ಮ್ಯೂಸಿಕ್ ಸಂಸ್ಥೆ ಮೂಲಕ ಬಿಡುಗಡೆ ಮಾಡಿದ್ದೇವೆ. ಚಿತ್ರವನ್ನು ಸದ್ಯದಲ್ಲೇ ತೆರೆಗೆ ತರುತ್ತೇವೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಹಾಗೂ ನಾಯಕ ಯುವಾನ್ ಪ್ರತಾಪ್. 

ನಾನು ಈಗಾಗಲೇ ಐದು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಆದರೆ, ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ ಇದು. ಮರ್ಡರ್ ಮಾಫಿಯಾದ ಕಥಾಹಂದರ ಹೊಂದಿರುವ ಚಿತ್ರವಾದರೂ, ಪ್ರೇಮಕಥೆಯೂ ಇದೆ. ನಾನು ಮಧ್ಯಮವರ್ಗದ ಕುಟುಂಬದ  ಹುಡುಗಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದು ನಾಯಕಿ ಐಶ್ವರ್ಯ ಮುತ್ತುರಾಜ್ ಹೇಳಿದರು. 

ನಮ್ಮ ಡಿ ಮ್ಯೂಸಿಕ್ ಸಂಸ್ಥೆ ಈ ಚಿತ್ರದ ಆಡಿಯೋ ಹಕ್ಕನ್ನು ಪಡೆದುಕೊಂಡಿದೆ. ಹೊಸ ಪ್ರತಿಭೆಗಳಿಗೆ ನಮ್ಮ ಸಂಸ್ಥೆ ಸದಾ ಬೆನ್ನಲುಬಾಗಿ ನಿಲ್ಲುತ್ತದೆ. ಇದು ನಮ್ಮ ಡಿ ಮ್ಯೂಸಿಕ್ ಸಂಸ್ಥೆಯ ಮೊದಲ ಚಿತ್ರ ಎಂದು ದೇವ್ ಗ್ರೂಪ್ಸ್ ಹಾಗೂ ಡಿ ಮ್ಯೂಸಿಕ್ ನ ಮುಖ್ಯಸ್ಥ ದೇವರಾಜ್ ಎನ್ ತಿಳಿಸಿದರು.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮೆಡಿಕಲ್ ಮಾಫಿಯಾ ಸುತ್ತ ಯುವಾನ್ ಪ್ರತಾಪ್ ಅಭಿನಯದ - ಕಲುಷ - ಟೀಸರ್ ಅನಾವರಣ ಮಾಡಿ ಹಾರೈಸಿದ -ಜಾಲಿಡೇಸ್- ಖ್ಯಾತಿಯ ನಟಿ ಐಶ್ವರ್ಯ ನಾಗ್ . - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95