Chief Editor
Manohar. R (Manu)
Photo Journalist
chitrataramanu@gmail.com
+91 9845549026
ರಾಮಾಯಣ ಚಿತ್ರದ ಟ್ರೈಲರ್ ಬಿಡುಗಡೆ : ಮನೆ ಮಂದಿ ನೋಡುವ ಸಿನಿಮಾ ಬೆಂಬಲವಿರಲಿ : ನಟ ಯಶ್
Posted date: 16 Fri, Oct 2026 02:26:12 PM
ಬಹುತಾರಾಗಣ ಮತ್ತು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ “ರಾಮಾಯಣ” ಚಿತ್ರ ಮುಂದಿನ ತಿಂಗಳ ಮೊದಲ ವಾರ ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು.

ಈ ವೇಳೆ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಮೂಡಿಬಂದಿರುವ ಅಂತರಾಷ್ಟ್ರೀಯ ಟ್ರೈಲ‌ರ್ ಅನ್ನು ಬಿಡುಗಡೆ ಮಾಡಿದ್ದು ಚಿತ್ರ ಮೂಡಿ ಬಂದಿರುವ ಬಗೆ, ತಂತ್ರಜ್ಞಾನದ ಬಳಕೆ, ಕಲಾವಿದರ ನಟನೆ ಚಿತ್ರದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಬಹುತಾರಾಗಣ ಮತ್ತು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ “ರಾಮಾಯಣ” ಚಿತ್ರ ಮುಂದಿನ ತಿಂಗಳ ಮೊದಲ ವಾರ ವಿಶ್ವದಾದ್ಯಂತ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು,ಈ ವೇಳೆ ಕನ್ನಡ ಮತ್ತು ಇಂಗ್ಲೀಷ್‌ನಲ್ಲಿ ಮೂಡಿಬಂದಿರುವ ಅಂತರಾಷ್ಟ್ರೀಯ ಟ್ರೈಲ‌ರ್ ಅನ್ನು ಬಿಡುಗಡೆ ಮಾಡಿದ್ದು ಚಿತ್ರ ಮೂಡಿ ಬಂದಿರುವ ಬಗೆ, ತಂತ್ರಜ್ಞಾನದ ಬಳಕೆ, ಕಲಾವಿದರ ನಟನೆ ಚಿತ್ರದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಚಿತ್ರಕ್ಕೆ ನಿತೇಶ್ ತಿವಾರಿ ಆಕ್ಷನ್ ಕಟ್ ಹೇಳಿದ್ದು ರಾಮನಾಗಿ ಬಾಲಿವುಡ್ ನಟ ರಣಬೀರ್ ಕಪೂರ್, ಸೀತೆಯಾಗಿ ದಕ್ಷಿಣ ಭಾರತದ ಖ್ಯಾತಿ ನಟಿ ಸಾಯಿಪಲ್ಲವಿ, ಲಕ್ಷಣನಾಗಿ ರವಿದುಬೆ, ಶೂರ್ಪನಖಿಯಾಗಿ ರಾಕುಲ್‌ಪ್ರೀತಿಸಿಂಗ್, ರಾವಣನಾಗಿ ನಟ ಯಶ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಹಿರಿ-ಕಿರಿಯ ಕಲಾವಿದರ ದಂಡೇ ಚಿತ್ರದಲ್ಲಿದೆ. ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಸಂಗೀತ ನೀಡಿದ್ದಾರೆ.

ನಟ ರಾಕಿಂಗ್ ಸ್ಟಾರ್ ಯಶ್ ಮಾತನಾಡಿ “ ಗಡಿ ದಾಟಿ, ಎಲ್ಲವನ್ನೂ ಪಣಕ್ಕಿಟ್ಟು ಸೋಲು- ಗೆಲುವು ಮೀರಿ ಕೆಲವು ಪ್ರಯತ್ನ ಮಾಡಬೇಕಾಗಿದೆ. ಆ ಪ್ರಯತ್ನ ಇತಿಹಾಸದಲ್ಲಿ ಮೈಲಿಗಲ್ಲಾಗುತ್ತದೆ, ಹೆಜ್ಜೆ ಗುರುತಾಗುತ್ತೆ. ಕೆಲವೊಮ್ಮೆ ಮೇಲೆ ಹತ್ತುವರಿಗೆ ಮೆಟ್ಟಿಲಾಗಲಿದೆ. ಮೆಟ್ಟಿಲು ಕೆತ್ತುವ ಕೆಲಸಕ್ಕೆ ಪ್ರತಿಯೊಬ್ಬರ ಸಹಕಾರ ಬೇಕು. ಇದರಲ್ಲಿ ಎಲ್ಲರ ಜವಬ್ದಾರಿಯೂ ಇದೆ ಎಂದರು.

ಮನೆ ಮಂದಿ ಎಲ್ಲರೂ ಒಟ್ಟಿಗೆ ಕುಳಿತು ನೋಡಬಹುದಾದ ಸಿನಿಮಾ ರಾಮಾಯಣ.
ನೂರು ಜನ ನೂರು ಕೊಂಕು ಹೇಳಬಹುದು ನಿಮಗೆ ಏನು ಇಷ್ಟ ಆಗುತ್ತೋ ಅದನ್ನು ನೋಡಿ, ಚಿತ್ರದ ಇಷ್ಟ ಆದರೆ ಆಶೀರ್ವದಿಸಿ ಇನ್ನಷ್ಟು ಉತ್ತಮ ಚಿತ್ರ. ಪ್ರಯೋಗ ಮಾಡುತ್ತೇವೆ. ನಿರ್ಮಾಪಕರಿಗೆ ಶಕ್ತಿ ನೀಡಿ ಎಂದು ಕೇಳಿಕೊಂಡರು.

ಈ ವಳೆ ಮಾತಿಗಿಳಿದ ನಿರ್ದೇಶಕ ನಿತೇಶ್ ತಿವಾರಿ, ರಾಮಾಯಣ ಬರೀ ಚಿತ್ರವಲ್ಲ, ಇಡೀ ಚಿತ್ರತಂಡಕ್ಕೆ ಒಂದು ಎಮೋಷನ್, ಎಲ್ಲ ಕಲಾವಿದರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಚಿತ್ರಕ್ಕಾಗಿ ಸಾಕಷ್ಟು ತಯಾರಿ ಸಿದ್ಧತೆ ಮಾಡಿಕೊಂಡು ತೆರೆಯ ಮೇಲೆ ತರುತ್ತಿದ್ದೇವೆ. ಇನ್ನು ಬಿಡುಗಡೆಗೆ ಎದುರು ನೋಡುತ್ತಿದ್ದೇವೆ ಎಂದರು.

ನಟ ರಣಬೀ‌ರ್ ಕಪೂ‌ರ್ ಮಾತನಾಡಿ ಸಿನಿಮಾ ನಮ್ಮ ಪಾಲಿಗೆ ಆದ್ಯಾತ್ಮದ ಅನುಭವ ಚಿತ್ರದ ಮೂಲಕ ರಾಮನನ್ನು ಮತ್ತು ರಾಮಾಯಣ, ಸಂಸ್ಕಂತಿ, ಇತಿಹಾಸವನ್ನು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗಿದೆ. ಇದು ಜೀವನದಲ್ಲಿ ಸಿಕ್ಕ ಅದ್ಭುತ ಅವಕಾಶ ಎಂದು ಎಲ್ಲರಿಗೂ ಧನ್ಯವಾದ ತಿಳಿಸಿದರು.

ನಟಿ ಸಾಯಿಪಲ್ಲವಿ ಮಾತನಾಡಿ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಖುಷಿಯಾಗಿದೆ, ಪತ್ರಿಯೊಂದು ಸನ್ನಿವೇಶವನ್ನು ಅನುಭವಿಸಿದ್ದೇವೆ.ಎಲ್ಲರ ಜೊತೆ ನಟಿಸಿ ಖುಷಿಯಾಗಿದೆ. ನಿತೇಶ್ ಕಂಡ ಅತ್ಯಂತ ಮೃಧು ಸ್ವಭಾದ ನಿರ್ದೇಶಕ. ಇದು ನನ್ನ ಕನಸಿನ ಚಿತ್ರ. ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂದು ಹೇಳಿದರು.

ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಮಾತನಾಡಿ 32 ವರ್ಷನ್‌ಗಳಲ್ಲಿ ಕಂಪೋಸ್ ಮಾಡಲಾಗಿತ್ತು. ಅದರಲ್ಲಿ ಫಿಲ್ಟರ್ ಮಾಡಿ ಮಾಡಿ ಅಂತಿಮ ಹಂತಕ್ಕೆ ಟ್ಯೂನ್ ಸಿದ್ಧಪಡಿಸಿದ್ದೇವೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು.

ಮತ್ತೊಬ್ಬ ನಟಿ ರಾಕುಲ್ ಪ್ರೀತಿ ಸಿಂಗ್ ಮಾತನಾಡಿ, ಕನ್ನಡದಲ್ಲಿ ಗಿಲ್ಲಿ ಚಿತ್ರದ ಮೂಲಕ ಚಿತ್ರ ಜೀವನ ಆರಂಭಿಸಿದ್ದು ಖುಷಿಕೊಟ್ಟಿದೆ. ಈಗ ರಾಮಾಯಣ ಚಿತ್ರದಲ್ಲಿ ನಟಿಸಿದ್ದು ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.

ನಟ ರವಿ ದುಬೆ ಮಾತನಾಡಿ ರಾಮಾಯಣದಲ್ಲಿ ನಟಿಸಲು ಸಿಕ್ಕ ಅವಕಾಶ ಜೀವನ ಪೂರ್ತಿ ನೆನಪಿನಲ್ಲಿ ಇರಲಿದೆ. ಅದ್ಭುತ ವ್ಯಕ್ತಿಗಳ ಜೊತೆ ಕೆಲಸ ಮಾಡಿದ್ದು ಖುಷಿ ಆಗಿದೆ ಎಂದರು.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ರಾಮಾಯಣ ಚಿತ್ರದ ಟ್ರೈಲರ್ ಬಿಡುಗಡೆ : ಮನೆ ಮಂದಿ ನೋಡುವ ಸಿನಿಮಾ ಬೆಂಬಲವಿರಲಿ : ನಟ ಯಶ್ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95