Chief Editor
Manohar. R (Manu)
Photo Journalist
chitrataramanu@gmail.com
+91 9845549026
ಹನುಮಾನ್‌ ಅಂಶ್‌ ರೀತಿಯಲ್ಲಿಯೇ ಕನ್ನಡದಲ್ಲಿಯೂ ಸಿದ್ದವಾಯ್ತು ಪ್ರೇಮರೂಪ ಸಾಯಿಪಾದಾನಂದ ಸಿನಿಮಾ
Posted date: 20 Tue, Oct 2026 05:34:10 PM
ಸಾಯಿಬಾಬಾ ಅವರ ಅನುಯಾಯಿ ಅವಧೂತ ಸಾಯಿ ಪಾದಾನಂದ ರಾಧಾಕೃಷ್ಣ ಸ್ವಾಮೀಜಿಯವರ ಜೀವನ ಚರಿತ್ರೆ ಕುರಿತ ಚಿತ್ರ ಪ್ರೇಮರೂಪ ಸಾಯಿಪಾದಾನಂದ. ಅಪಾರ ಶಿಷ್ಯರನ್ನ ಹೊಂದಿದ್ದ ರಾಧಾಕೃಷ್ಣ ಸ್ವಾಮೀಜಿಯ ಶಿಷ್ಯರಾದ ಟಿ ಕೃಷ್ಣಕುಮಾರ್ ಖ್ಯಾತ ನಿರ್ಮಾಣ ಸಂಸ್ಥೆ ಸತ್ಯಜ್ಯೋತಿ ಫಿಲ್ಮ್ಸ್ ಸಹಕಾರದೊಂದಿಗೆ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.. ಬಿ ನಿತ್ಯಾನಂದ ಸಿನಿಮಾ ನಿರ್ದೇಶನ ಮಾಡಿದ್ದು ಆನಂದ್ ಮೌಳಿ ಸ್ವಾಮೀಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ , ಅಭಿಷೇಕ್ ರಾಜು ಸಂಗೀತ ನಿರ್ದೇಶನದ ಪ್ರೇಮರೂಪ ಸಾಯಿಪಾದಾನಂದ ಸಿನಿಮಾದ ಚಿತ್ರೀಕರಣ ತಮಿಳುನಾಡು , ಬೆಂಗಳೂರಿನಲ್ಲಿ ಸೇರಿ ಹಲವೆಡೆ ಚಿತ್ರೀಕರಣ  ಮಾಡಲಾಗಿದೆ. 

ತಮಿಳು, ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಮೂಡಿಬಂದಿರುವ ಪ್ರೇಮರೂಪ ಸಾಯಿಪಾದಾನಂದ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ ,,
ಸಿನಿಮಾದ ಪ್ರದರ್ಶನ ಹಾಗೂ ಸುದ್ದಿಗೋಷ್ಠಿಗೆ ಸಂಸದ ಡಾ. ಸಿ.ಎನ್. ಮಂಜುನಾಥ್ ಆಗಮಿಸಿ ಸಿನಿಮಾ ಬಗ್ಗೆ ಮಾತನಾಡುವುದರ ಜೊತೆಗೆ ಚಿತ್ರತಂಡಕ್ಕೆ ಶುಭಕೋರಿದ್ರು..ಕರ್ನಾಟಕದಲ್ಲಿ ಸಾಯಿಬಾಬಾ ಅವರ ಬಗ್ಗೆ ಪ್ರಚಾರ ಮಾಡುತ್ತಿದ್ದ ರಾಧಾಕೃಷ್ಣ ಸ್ವಾಮೀಜಿಯ ಜೀವನದ ಸಂದೇಷವನ್ನ ಎಲ್ಲರ ಅಳವಡಿಸಿಕೊಳ್ಳಬೇಕು ,ಸಾಯಿಬಾಬಾರ ತತ್ವವನ್ನ ಪಸರಿಸಿದ ಖ್ಯಾತಿ ಸ್ವಾಮೀಜಿಗೆ ಸಲ್ಲಬೇಕು ಸಿನಿಮಾ ನೋಡಿ ಕಲಿಯುವುದು ಬಹಳಷ್ಟಿದೆ ಎಂದ ಡಾ. ಸಿ.ಎನ್. ಮಂಜುನಾಥ್‌, ಕಾರ್ಯಕ್ರಮದಲ್ಲಿ  ಸ್ವಾಮೀಜಿ ಜೊತೆಗಿನ ಒಡನಾಟ ಮೆಲುಕು ಹಾಕಿ ಕಣ್ಣೀರಿಟ್ಟ ಟಿ ಕೃಷ್ಣಕುಮಾರ್ . ಇವರನ್ನ ಸೇರಿದಂತೆ ಸಾಯಿ ಆಧ್ಯಾತ್ಮಿಕ ಕೇಂದ್ರದ ಚೇರ್ಮನ್ ಶ್ರೀ ಶ್ರೀಚಂದ್ ರಾಜ್ ಪಾಲ್ ಕನ್ನಡ ಸಾಯಿ ಸಚ್ಚರಿತೆಯ ಬರಹಗಾರರಾದ ಶ್ರೀ ಅನಂತ ರಾಮು ಇನ್ನು ಅನೇಕರು ಭಾಗಿ ಆಗಿದ್ರು ಸದ್ಯ ಸುದ್ದಿಗೋಷ್ಠಿ ಮಾಡಿರೋ ಸಿನಿಮಾತಂಡ ಶೀಘ್ರದಲ್ಲೆ ಥಿಯೇಟರ್‌ ನಲ್ಲಿ ಈ ಸಿನಿಮಾ ಬಿಡುಗಡೆ ಮಾಡಲಿದ್ದಾರೆ…
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಹನುಮಾನ್‌ ಅಂಶ್‌ ರೀತಿಯಲ್ಲಿಯೇ ಕನ್ನಡದಲ್ಲಿಯೂ ಸಿದ್ದವಾಯ್ತು ಪ್ರೇಮರೂಪ ಸಾಯಿಪಾದಾನಂದ ಸಿನಿಮಾ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95