Chief Editor
Manohar. R (Manu)
Photo Journalist
chitrataramanu@gmail.com
+91 9845549026
ಶೀರ್ಷಿಕೆಗೀತೆಯಲ್ಲೇ ಗಮನ ಸೆಳೆದ - ನೀ ನಂಗೆ ಅಲ್ಲವಾ -ಈಗಾಗಲೇ ಹಾಡುಗಳ ಮೂಲಕ ಹತ್ತಿರವಾಗಿರುವ ಈ ಚಿತ್ರ ನವೆಂಬರ್ 13 ರಂದು ತೆರೆಗೆ .
Posted date: 25 Sun, Oct 2026 09:28:39 PM
ಸುರಮ್ ಮೂವೀಸ್ ಲಾಂಛನದಲ್ಲಿ  ಜಯರಾಮ ದೇವಸಮುದ್ರ ನಿರ್ಮಿಸಿರುವ, ಮನೋಜ್ ಪಿ ನಡಲುಮನೆ ನಿರ್ದೇಶನದ ಹಾಗೂ ರಾಹುಲ್ ಆರ್ಕಟ್, ಕಾಶಿ ಮಾ ನಾಯಕ - ನಾಯಕಿಯಾಗಿ ನಟಿಸಿರುವ "ನೀ ನಂಗೆ ಅಲ್ಲವಾ" ಚಿತ್ರದ ಶೀರ್ಷಿಕೆಗೀತೆಯ ಅನಾವರಣ ಸಮಾರಂಭ ಇತ್ತೀಚೆಗೆ ನೆರವೇರಿತು. ನಿರ್ದೇಶಕ ಮನೋಜ್ ಪಿ ನಡಲುಮನೆ ಅವರೆ ಬರೆದಿರುವ ಈ ಹಾಡನ್ನು ಖ್ಯಾತ ಗಾಯಕ ಜಸ್ಕರಣ್ ಸಿಂಗ್ ಹಾಡಿದ್ದಾರೆ. ಸೂರಜ್ ಜೋಯಿಸ್ ಸಂಗೀತ ಸಂಯೋಜನೆ ಮಾಡಿದ್ದಾರೆ.‌ ರಾಮ್ ಕಿರಣ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದು, ರಾಹುಲ್ ಆರ್ಕಟ್ - ಕಾಶಿ ಮಾ ಹೆಜ್ಜೆ ಹಾಕಿದ್ದಾರೆ. ಸರಿಗಮ ಯೂಟ್ಯೂಬ್ ಚಾನಲ್ ಮೂಲಕ ಬಿಡುಗಡೆಯಾಗಿರುವ ಈ ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ ಹಾಗೂ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯೂ ಅಗುತ್ತಿದೆ. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.  
 
"ನೀ ನಂಗೆ ಅಲ್ಲವಾ" ಚಿತ್ರದ ಎಲ್ಲಾ ಹಾಡುಗಳು ಚೆನ್ನಾಗಿದೆ. ಇಂದು ಬಿಡುಗಡೆಯಾಗಿರುವ ಈ ಶೀರ್ಷಿಕೆಗೀತೆ ನಮ್ಮ ಇಡೀ ತಂಡದ ಅಚ್ಚುಮೆಚ್ಚು. ನಿರ್ದೇಶಕರ ಸಾಹಿತ್ಯ, ಸೂರಜ್ ಜೋಯಿಸ್ ಅವರ ಸಂಗೀತ ಹಾಗೂ ಜಸ್ಕರಣ್ ಸಿಂಗ್ ಅವರ ಗಾಯನ ತುಂಬಾ ಚೆನ್ನಾಗಿದೆ. ಈ ಹಾಡಿಗೂ ಮುಂಚೆ ಒಂದು ಗ್ಲಿಂಪ್ಸ್ ಸಹ ಬಿಡುಗಡೆ ಮಾಡಿದ್ದೇವೆ. ಕೆಲವು ನಿಮಿಷಗಳ ಗ್ಲಿಂಪ್ಸ್ ನಲ್ಲೇ ನಿರ್ದೇಶಕರು ಚಿತ್ರದ ಕಥೆ ಹೇಳಿದ್ದಾರೆ. ನಮ್ಮ ಚಿತ್ರವನ್ನು ನವೆಂಬರ್ 13 ರಂದು ಬಿಡುಗಡೆ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ ಎಂದರು ನಿರ್ಮಾಪಕ ಜಯರಾಮ್ ದೇವಸಮುದ್ರ.  
 
ನಿರ್ದೇಶಕ ಮನೋಜ್ ಪಿ ನಡಲುಮನೆ ಮಾತನಾಡಿ, ಇದು ನಾವು ಸಂಯೋಜನೆ ಮಾಡಿದ ಮೊದಲ ಗೀತೆ. ಶೀರ್ಷಿಕೆ ಅಂತಿಮ ಆದ ತಕ್ಷಣ ಈ ಹಾಡನ್ನು ಸಂಯೋಜನೆ ಮಾಡಲಾಯಿತು. ಸೂರಜ್ ಜೋಯಿಸ್ ಎಲ್ಲಾ ಹಾಡುಗಳಿಗೂ ಅದ್ಭುತವಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡನ್ನು ಜಸ್ಕರಣ್ ಸಿಂಗ್ ಅವರ ಧ್ವನಿಯಲ್ಲಿ ಕೇಳುವುದೆ ಚೆಂದ. ನಾನು ಈ ಚಿತ್ರದ ನಿರ್ದೇಶಕ ಹಾಗೂ ಗೀತರಚನೆಕಾರ ಕೂಡ. ನನಗೆ ಈ ಹಾಡಿನ ಸಾಹಿತ್ಯ ಬಹಳ ಖುಷಿಕೊಟ್ಟಿದೆ. ನಿರ್ಮಾಪಕರು ಯಾವದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಚಿತ್ರತಂಡದ ಸಹಕಾರದಿಂದ ಅಂದುಕೊಂಡ ಹಾಗೆ ಚಿತ್ರ ಬಂದಿದೆ. ಚಿತ್ರರಂಗದಲ್ಲಿ ಈಗ "ಪ್ರೇಮದ ಊರಲಿ" ಮೂಲಕ ಯಶಸ್ಸಿನ ಕಾಮನಬಿಲ್ಲು ಮೂಡಿದೆ. ನಮ್ಮ ಚಿತ್ರ ಕೂಡ ಜನರಿಗೆ ಇಷ್ಟವಾಗುವ ಭರವಸೆ ಇದೆ ಎಂದರು.   
                                     
ಈಗಾಗಲೇ ನಮ್ಮ ಚಿತ್ರದ ಕಂಟೆಂಟ್ ಎಲ್ಲರಿಗೂ ಇಷ್ಟವಾಗಿದೆ. ಟೈಟಲ್ ಸಾಂಗ್ ಕೂಡ ಸುಮಧುರವಾಗಿದೆ. ಚಿತ್ರ ಸಹ ಎಲ್ಲರಿಗೂ ಪ್ರಿಯವಾಗಲಿದೆ ಎಂದರು ನಾಯಕ ರಾಹುಲ್ ಆರ್ಕಟ್.
  
 "ನೀ ನಂಗೆ ಅಲ್ಲವಾ" ಟೈಟಲ್ ಸಂಗ್ ಬಗ್ಗೆ ಸಂಗೀತ ನಿರ್ದೇಶಕ ಸೂರಜ್ ಜೋಯಿಸ್ ಮಾಹಿತಿ ನೀಡಿದರು. ಇದು ನನಗೂ ಕೂಡ ಬಹಳ ಪ್ರಿಯವಾದ ಗೀತೆ ಎಂದು ನಾಯಕಿ ಕಾಶಿ ಮಾ ಹೇಳಿದರು. ಛಾಯಾಗ್ರಹಕ ಉದಯ್ ಲೀಲಾ, ಕಲರಿಸ್ಟ್ ನವೀನ್ ಕುಮಾರ್, ನೃತ್ಯ ನಿರ್ದೇಶಕ ರಾಮ್ ಕಿರಣ್, ಸಂಕಲನಕಾರ ನಾಗೇಂದ್ರ ಉಜ್ಜನಿ ಹಾಗೂ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು "ನೀ ನಂಗೆ ಅಲ್ಲವಾ" ಕುರಿತು ಮಾತನಾಡಿದರು.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಶೀರ್ಷಿಕೆಗೀತೆಯಲ್ಲೇ ಗಮನ ಸೆಳೆದ - ನೀ ನಂಗೆ ಅಲ್ಲವಾ -ಈಗಾಗಲೇ ಹಾಡುಗಳ ಮೂಲಕ ಹತ್ತಿರವಾಗಿರುವ ಈ ಚಿತ್ರ ನವೆಂಬರ್ 13 ರಂದು ತೆರೆಗೆ . - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95