Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್ ಹಾಗೂ ರಾಜೇಶ್ ನಟರಂಗ‌ ಅಭಿನಯಿಸಿರುವ -ಎನ್ ಎಚ್ -66 - ಟೀಸರ್ ನಲ್ಲೇ ಕುತೂಹಲ ಮೂಡಿಸಿದೆ
Posted date: 27 Tue, Oct 2026 08:56:19 AM
ರಾಷ್ಟ್ರೀಯ ಹೆದ್ದಾರಿ ಮಂಗಳೂರು- ಗೋವಾ ಮಾರ್ಗವಾಗಿ ಮುಂಬೈ‌ಗೆ ಸಾಗುವ ಹೆದ್ದಾರಿಯಲ್ಲಿ ನಡೆಯುವ ರೋಚಕ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ"ಎನ್ ಎಚ್ -66". ಹೆದ್ದಾರಿ ಪಯಣದ ಈ ಕಥೆಯನ್ನು ಮಂಜುನಾಥ್ ಟಿ.ಆರ್ ನಿರ್ಮಿಸಿ, ನಿರ್ದೇಶಿಸಿದ್ದಾರೆ. ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್ ಹಾಗೂ ರಾಜೇಶ್ ನಟರಂಗ ಪ್ರಮುಖಪಾತ್ರದಲ್ಲಿ  ಅಭಿನಯಿಸಿದ್ದಾರೆ. "ಎನ್ ಎಚ್ -66" ಚಿತ್ರದ ಶೀರ್ಷಿಕೆಯಡಿ "ಒಂದು ಹೆದ್ದಾರಿ, ಅನೇಕ ರಹಸ್ಯಗಳು" ಅಡಿಬರಹವಿದೆ. 

ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ರಾಜೇಶ್ ನಟರಂಗ, ಪ್ರಮೋದ್ ಶೆಟ್ಟಿ ಹಾಗು ಶೃತಿ ಹರಿಹರನ್ ಪಾತ್ರದ ಸುತ್ತ ಸಾಗುವ ಕಥೆ ಮತ್ತಷ್ಟು ಕುತೂಹಲ ಹೆಚ್ಚಿಸುವಂತೆ ಮಾಡಿದೆ. ಟೀಸರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ‌. 

ನಿರ್ಮಾಪಕ, ನಿರ್ದೇಶಕ ಮಂಜುನಾಥ್ ಮಾತನಾಡಿ, ರಾಯರ ಕೃಪೆಯಿಂದ ಅರಂಭವಾದ ಎನ್ ಎಚ್ 66 ಚಿತ್ರ ಕಲಾವಿದರ ಸಹಕಾರದಿಂದ ಚೆನ್ನಾಗಿ ಬಂದಿದೆ. ಮೂರು ಕಲಾವಿದರು ಪ್ರತಿಯೊಂದು ಹಂತದಲ್ಲಿ ಗೈಡ್ ಆಗಿ, ಗುರುವಾಗಿ ಕೆಲಸ‌ ಮಾಡಿದ್ದಾರೆ. ಚಿತ್ರೀಕರಣ ಹೀಗೇ ಮಾಡಬೇಕು ಎಂದು ಮುಂಚೆಯೇ ನಿರ್ಧಾರ ಮಾಡಿದ್ದೆವು. ಅದೇ ರೀತಿ ಮಾಡಿದ್ದೆವೆ. "ಎನ್ ಎಚ್ 66" ಚಿತ್ರ ಪ್ರಯಾಣದ ಕಥೆ ಹೊಂದಿದೆ.‌ ಪ್ರಮೋದ್ ಶೆಟ್ಟಿ ಕಥೆ ಒಪ್ಪಿಕೊಂಡರು. ಆ ಬಳಿಕ ಗಿರಿನಗರದ  ಪಾರ್ಕ್ ನಲ್ಲಿ  ವಾಕ್ ಮಾಡುವಾಗ ಕಥೆ ಕೇಳಿ ರಾಜೇಶ್ ನಟರಂಗ ಸಹ ಒಪ್ಪಿಗೆ ನೀಡಿದರು. ನಾಯಕಿಗಾಗಿ ಶೋಧ ನಡೆದಿದ್ದಾಗ,  ಶೃತಿ ಹರಿಹರನ್ ಅವರೊಂದಿಗೆ ಗೂಗಲ್ ಮೀಟ್ ಮೂಲಕ ಮಾತನಾಡಿ‌ ಅವರನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಯಿತು. ಸಿನಿಮಾದ ಇಡೀ ಚಿತ್ರೀಕರಣ ಪ್ರವಾಸದಲ್ಲಿ ಮುಗಿದಿದೆ. ಇದಕ್ಕಾಗಿ 650 ಕಿಲೋ ಮೀಟರ್ ಸಂಚರಿಸಿದ್ದೇವೆ. ನಾನು ಹೊಸಬ ಅಂತ ರಾಜೇಶ್ ನಟರಂಗ ಅಥವಾ ಪ್ರಮೋದ್ ಶೆಟ್ಟಿ ಅವರು ಎಂದೂ ನೋಡಲಿಲ್ಲ. ಎಲ್ಲರ ಸಹಕಾರ ಬೆಂಬಲ ಉತ್ತಮವಾಗಿತ್ತು. ಮಂಗಳೂರು, ಗೋವಾ ,ಕುಂದಾಪುರ, ಮುಂಬೈ  ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ. ‌ಇದೊಂದು ಫ್ಯಾಮಿಲಿ ಎಂಟರ್ಟೈನ್ಮೆಂಟ್ ಜೊತೆಗಿನ ಥ್ರಿಲ್ಲರ್ ಸಿನಿಮಾ. ಸಿನಿಮಾಪ್ರಿಯರಿಗೆ ನಮ್ಮ ಸಿನಿಮಾ ಪ್ರಿಯವಾಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ರಾಜೇಶ್ ನಟರಂಗ ಮಾತನಾಡಿ ಬೆಂಬಲ ಎಂದು ಹೇಳಬೇಡಿ. ನಾವೂ ಕೂಡ ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿರುತ್ತೇವೆ.  ಅದರಲ್ಲಿ ನಮ್ಮ ಸ್ವಾರ್ಥವೂ ಇರಲಿದೆ. ಒಪ್ಪಿಕೊಂಡ ಚಿತ್ರದಲ್ಲಿ ಕೆಲಸ ಮಾಡುವುದು ನಮ್ಮ ಧರ್ಮ. ಈ ಚಿತ್ರದ ಪಾತ್ರ ಕೂಡ ಚೆನ್ನಾಗಿದೆ ಎಂದರು.

ನಟ ಪ್ರಮೋದ್ ಶೆಟ್ಟಿ ಮಾತನಾಡಿ  ನಿರ್ದೇಶಕರು ಹಾಕಿಕೊಂಡಿದ್ದ ಪ್ಲಾನ್ ಸ್ವಲ್ಪ ವ್ಯತ್ಯಾಸವಾದ್ದಾಗ ಅವರಿಗೆ ಸಮಾಧಾನ ಮಾಡಿದ್ದೆವು. ಇದುವರೆಗೆ ಖಾಕಿ ಹಾಕಿ ಬೆಜಾರಿತ್ತು. ಈ ಚಿತ್ರದಲ್ಲಿ ಬಿಳಿಬಟ್ಟೆ ಹಾಕಿದ್ದೇನೆ. ಪಾತ್ರ ಚೆನ್ನಾಗಿದೆ. ಚಿತ್ರದಲ್ಲಿರುವ ಮೂರು ಮಂದಿ ನಾಯಕರೇ ಎಲ್ಲರಿಗೂ ಸಮಾನ ತೂಕವಿದೆ. ಚಿತ್ರ ಶೀಘ್ರ ತೆರೆಗೆ ಬರಲಿದೆ ಎಂದರು

ಸಂಗೀತ ನಿರ್ದೇಶಕ  ಸ್ವಾಮಿನಾಥನ್ ಹಾಗೂ  ಛಾಯಾಗ್ರಹಕ ಸುನೀತ್ ಹಲಗೇರಿ ಸಹ "NH 66" ಕುರಿತು ಮಾತನಾಡಿದರು. ಉಜ್ವಲ್ ಚಂದ್ರ ಅವರ ಸಂಕಲನಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪ್ರಮೋದ್ ಶೆಟ್ಟಿ, ಶೃತಿ ಹರಿಹರನ್ ಹಾಗೂ ರಾಜೇಶ್ ನಟರಂಗ‌ ಅಭಿನಯಿಸಿರುವ -ಎನ್ ಎಚ್ -66 - ಟೀಸರ್ ನಲ್ಲೇ ಕುತೂಹಲ ಮೂಡಿಸಿದೆ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95