Chief Editor
Manohar. R (Manu)
Photo Journalist
chitrataramanu@gmail.com
+91 9845549026
ಪೈರ್ - ವೃದ್ದ ದಂಪತಿಗಳ ಅನ್ಯೋನ್ಯ ಪ್ರೇಮಕಥೆ ಇದೇ 30ರಂದು ತೆರೆಗೆ
Posted date: 29 Thu, Oct 2026 09:32:41 AM
18 ಅಂತರರಾಷ್ಟ್ರೀಯ ಚಲನಚತ್ರ ಪ್ರಶಸ್ತಿಗಳು ಹಾಗೂ 15 ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡು, ಅಪಾರ ಮೆಚ್ಚುಗೆ ಗಳಿಸಿದ ಹಿಂದಿ ಹಾಗೂ ಮಲಯಾಳಂನಲ್ಲಿ ನಿರ್ಮಾಣವಾಗಿರುವ ಚಲನಚಿತ್ರ ‘ಪೈರ್’ (PYRE – चिता). 
ಅ.30ರ ಶುಕ್ರವಾರ ಈ ಚಿತ್ರವು ಬೆಂಗಳೂರು ಸೇರಿದಂತೆ ದೇಶಾದ್ಯಂತ ಬಿಡುಗಡೆಯಾಗಲಿದೆ.
 
ಪ್ರಶಸ್ತಿವಿಜೇತ ನಿರ್ದೇಶಕ ವಿನೋದ್ ಕಾಪ್ರಿ ಅವರು ಕಥೆ ಬರೆದು ಆಕ್ಷನ್ ಕಟ್ ಹೇಳಿರುವ ಈ ಚಿತ್ರವು  ಪ್ರೀತಿ, ಒಡನಾಟ, ವೃದ್ಧಾಪ್ಯ, ಒಂಟಿತನ ಹಾಗೂ ಮಾನವೀಯ ಸಂಬಂಧಗಳ ಕುರಿತಂತೆ  ಹೃದಯಸ್ಪರ್ಶಿ ಕಥಾನಕವನ್ನು  ಹೇಳಲಿದೆ.
 
ಉತ್ತರಾಖಂಡದ ಹಿಮಾಲಯ ಪರ್ವತಗಳ ತಪ್ಪಲಲ್ಲಿರುವ ಪುಟ್ಟ ಹಳ್ಳಿಯೊಂದರ ವೃದ್ಧ ದಂಪತಿಯ ಬದುಕಿನ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ.
 
ಮಕ್ಕಳಿಗಾಗಿ ಕಾಯುತ್ತಾ, ತಮ್ಮ ಕೊನೆಯ ದಿನಗಳಲ್ಲಿ ಪರಸ್ಪರ ಆಸರೆಯಾಗಿ ಬದುಕುವ ಇಬ್ಬರು ಹಿರಿಯ ಜೀವಿಗಳ ಪ್ರೀತಿ, ನೆನಪುಗಳು ಮತ್ತು ಭಾವನೆಗಳನ್ನು ಪೈರ್ ಚಿತ್ರ ಅತ್ಯಂತ ಸಹಜವಾಗಿ ತೆರೆದಿಡುತ್ತದೆ.
 
ಈ ಚಿತ್ರದ ವಿಶೇಷತೆಯೆಂದರೆ, ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 80 ವರ್ಷದ ಪದಮ್ ಸಿಂಗ್ ಮತ್ತು 70 ವರ್ಷದ ಹೀರಾದೇವಿ ವೃತ್ತಿಪರ ಕಲಾವಿದರಲ್ಲ. ಉತ್ತರಾಖಂಡದ ಸ್ಥಳೀಯ ನಿವಾಸಿಗಳಾದ ಇವರ ಸಹಜ ಅಭಿನಯ ಚಿತ್ರಕ್ಕೆ ನೈಜತೆ ಮತ್ತು ಭಾವನಾತ್ಮಕ ಸ್ಪರ್ಷ ನೀಡಿದೆ.
 
ಎಸ್ಟೋನಿಯಾದ ಪ್ರತಿಷ್ಠಿತ ಟ್ಯಾಲಿನ್ ಬ್ಲ್ಯಾಕ್ ನೈಟ್ಸ್ ಚಲನಚಿತ್ರೋತ್ಸವದಲ್ಲಿ ಈ ಚಿತ್ರದ  ಪ್ರಥಮ ಪ್ರದರ್ಶನ ನಡೆದಾಗ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು.
 
ಟ್ಯಾಲಿನ್ ಬ್ಲ್ಯಾಕ್ ನೈಟ್ಸ್ ಚಲನಚಿತ್ರೋತ್ಸವ, ಲಂಡನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್, ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಸ್ಟುಟ್‌ಗಾರ್ಟ್,  ಬರ್ಮಿಂಗ್‌ಹ್ಯಾಮ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್, ಡಿಸಿ ಸೌತ್ ಏಷ್ಯನ್ ಫಿಲ್ಮ್ ಫೆಸ್ಟಿವಲ್ ಸೇರಿದಂತೆ ಹಲವಾರು ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗಳಿಸಿದೆ.
 
ಪ್ರಸಿದ್ಧ ಚಲನಚಿತ್ರ ನಿರ್ದೇಶಕಿ ದೀಪಾ ಮೆಹ್ತಾ ಹಾಗೂ ಖ್ಯಾತ ಕವಿ, ಗೀತರಚನೆಕಾರ ಗುಲ್ಜಾರ್ ಅವರ ಮೆಚ್ಚುಗೆಯನ್ನೂ ಈ ಚಿತ್ರ ಪಡೆದುಕೊಂಡಿದೆ.
 
ವಿನೋದ್ ಕಾಪ್ರಿ, ಅರಿಂದ್ರ ರೈ ಚೌಧರಿ ಮತ್ತು ಸುರೇಶ್ ಜೋಶಿ ಅವರು ಈ ಚಿತ್ರವನ್ನು ನಿರ್ಮಿಸಿದ್ದು, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಮೈಕೆಲ್ ಡನ್ನಾ (Mychael Danna) ಮತ್ತು ಸಾರ್ ಸಿಂಘಾಲ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಗುಲ್ಜಾರ್ ಅವರ ಸಾಹಿತ್ಯ ಶ್ರುತಿ ಸದೋಲಿಕರ್ ಅವರ ಗಾಯನ ಈ ಚಿತ್ರಕ್ಕಿದೆ. 
 
ಭಾಷೆ, ಪ್ರದೇಶ ಮತ್ತು ವಯಸ್ಸಿನ ಗಡಿಗಳನ್ನು ಮೀರಿ ಪ್ರತಿಯೊಬ್ಬರ ಹೃದಯ ಸ್ಪರ್ಶಿಸುವ ‘ಪೈರ್’ ಕೇವಲ ವೃದ್ಧಾಪ್ಯದ ಕಥೆಯಲ್ಲ. ಇದು ಜೀವನಪೂರ್ತಿ ಜೊತೆಯಾಗಿ ಬದುಕಿದ ಇಬ್ಬರು ವ್ಯಕ್ತಿಗಳ ಪ್ರೀತಿ, ಅವರ ನೆನಪುಗಳು, ಒಂಟಿತನ ಮತ್ತು ಕಾಲ ಕಳೆದರೂ ಮರೆಯಾಗದ ಮಾನವೀಯ ಸಂಬಂಧಗಳನ್ನು ಈ ಚಿತ್ರ ಹೇಳಲಿದೆ. 
 
ಜೀವನದಲ್ಲಿ ಎಲ್ಲವೂ ಬದಲಾಗಬಹುದು. ಆದರೆ ನಿಜವಾದ ಪ್ರೀತಿ ಕೊನೆಯವರೆಗೂ ಉಳಿಯಲಿದೆ ಎಂಬುದನ್ನು ಈ ಚಿತ್ರ ಮನಮುಟ್ಟುವಂತೆ ಕಟ್ಟಿಕೊಡುತ್ತದೆ.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಪೈರ್ - ವೃದ್ದ ದಂಪತಿಗಳ ಅನ್ಯೋನ್ಯ ಪ್ರೇಮಕಥೆ ಇದೇ 30ರಂದು ತೆರೆಗೆ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95