Chief Editor
Manohar. R (Manu)
Photo Journalist
chitrataramanu@gmail.com
+91 9845549026
ಶ್ರೀನಿವಾಸಮೂರ್ತಿ ಅವರ ವೃತ್ತಿಜೀವನದ ಸುವರ್ಣ ಸಂಭ್ರಮಕ್ಕೆ `ಶಿವ ಮೆಚ್ಚಿದ ಕಣ್ಣಪ್ಪ` ನಾಟಕ ಪ್ರದರ್ಶನ; ತಾತನೊಂದಿಗೆ ಮೊಮ್ಮಕ್ಕಳ ರಂಗಪ್ರವೇಶ ವಿಶೇಷ ನವೆಂಬರ್ 8ರಂದು ರವೀಂದ್ರ ಕಲಾಕ್ಷೇತ್ರದಲ್ಲಿ
Posted date: 29 Thu, Oct 2026 09:40:41 AM
ಕನ್ನಡ ಚಿತ್ರರಂಗದ ಹಿರಿಯ ನಟ ಶ್ರೀನಿವಾಸಮೂರ್ತಿ ಅವರು ಕಲಾರಂಗದಲ್ಲಿ ಐದು ದಶಕಗಳ ಸಾರ್ಥಕ ಪಯಣವನ್ನು ಪೂರೈಸಿರುವ ಸಂಭ್ರಮದ ಅಂಗವಾಗಿ, ಜೆ.ಕೆ.ಎಸ್. ಮಿತ್ರ ಮಂಡಳಿ ವತಿಯಿಂದ ಇದೇ ನವೆಂಬರ್ 8ರಂದು ಭಾನುವಾರ ಸಂಜೆ 5.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಶಿವ ಮೆಚ್ಚಿದ ಕಣ್ಣಪ್ಪ’ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.
 
ಈ ನಾಟಕದಲ್ಲಿ ಹಿರಿಯ ನಟ ಶ್ರೀನಿವಾಸಮೂರ್ತಿ ಅವರು ಬೇಡರ ಕಣ್ಣಪ್ಪನಾಗಿ ಅಭಿನಯಿಸಿದರೆ, ಹಿರಿಯ ನಟ ರಮೇಶ್ ಭಟ್ ಅವರು ಮಾಯಾ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಪ್ರದರ್ಶನದ ವಿಶೇಷವೆಂದರೆ, ಶ್ರೀನಿವಾಸಮೂರ್ತಿ ಅವರ ಮೊಮ್ಮಕ್ಕಳಾದ ಹರ್ಷಿತ್ ನವೀನ್ ಹಾಗೂ ಹರುಷ್ ನವೀನ್ ಕೂಡ ನಾಟಕದಲ್ಲಿ ಅಭಿನಯಿಸುತ್ತಿದ್ದಾರೆ. ನಟ ನವೀನ್ ಕೃಷ್ಣ ಅವರ ಪುತ್ರರಾಗಿರುವ ಈ ಇಬ್ಬರು, ತಮ್ಮ ತಾತನೊಂದಿಗೆ ಒಂದೇ ರಂಗದಲ್ಲಿ ಅಭಿನಯಿಸುತ್ತಿರುವುದು ನಾಟಕದ ಪ್ರಮುಖ ಆಕರ್ಷಣೆಯಾಗಿದೆ.
 
ಶ್ರೀನಿವಾಸಮೂರ್ತಿ ಅವರ ಐದು ದಶಕಗಳ ಕಲಾಸೇವೆಯನ್ನು ಸ್ಮರಿಸುವ ಈ ಸಂದರ್ಭದಲ್ಲಿ, ಪೌರಾಣಿಕ ಕಥಾಹಂದರದ ‘ಶಿವ ಮೆಚ್ಚಿದ ಕಣ್ಣಪ್ಪ’ ನಾಟಕವು ರಂಗಪ್ರಿಯರಿಗೆ ವಿಶೇಷ ಅನುಭವ ನೀಡಲಿದೆ. ರಂಗನಾಥ್ ಅವರು ನಾಟಕವನ್ನು ನಿರ್ದೇಶಿಸುತ್ತಿದ್ದು, ಅಶ್ವತ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.
 
ನವೆಂಬರ್ 8ರಂದು ನಡೆಯಲಿರುವ ಈ ನಾಟಕ ಪ್ರದರ್ಶನಕ್ಕೆ ಹೆಚ್ಚಿನ ಪ್ರಚಾರ ನೀಡಿ, ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಹಿರಿಯ ನಟರಾದ ಶ್ರೀನಿವಾಸಮೂರ್ತಿ ಹಾಗೂ ರಮೇಶ್ ಭಟ್ ಅವರು ಮಾಧ್ಯಮ ಮಿತ್ರರಲ್ಲಿ ಮನವಿ ಮಾಡಿದ್ದಾರೆ.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಶ್ರೀನಿವಾಸಮೂರ್ತಿ ಅವರ ವೃತ್ತಿಜೀವನದ ಸುವರ್ಣ ಸಂಭ್ರಮಕ್ಕೆ `ಶಿವ ಮೆಚ್ಚಿದ ಕಣ್ಣಪ್ಪ` ನಾಟಕ ಪ್ರದರ್ಶನ; ತಾತನೊಂದಿಗೆ ಮೊಮ್ಮಕ್ಕಳ ರಂಗಪ್ರವೇಶ ವಿಶೇಷ ನವೆಂಬರ್ 8ರಂದು ರವೀಂದ್ರ ಕಲಾಕ್ಷೇತ್ರದಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95