Chief Editor
Manohar. R (Manu)
Photo Journalist
chitrataramanu@gmail.com
+91 9845549026
‘ರಿಲ್ಯಾಕ್ಸ್’ ಆಗಿ ಕೇಳಿ ‘ಗುಡ್ ಮಾರ್ನಿಂಗ್ ಮೇಡಂ’ ಹಾಡು ! ಕೋಮಲ್ ಕುಮಾರ್, ಸೋನಾಲ್ ಮೊಂತೆರೊ, ವಿನೋದ್ ಪ್ರಭಾಕರ್ ಅಭಿನಯದ ‘ರಿಲ್ಯಾಕ್ಸ್’ ನವೆಂಬರ್ 27ರಂದು ಅದ್ದೂರಿ ಬಿಡುಗಡೆ
Posted date: 30 Fri, Oct 2026 11:27:13 AM
ಮಧು ಫಿಲಂ ಸರ್ಕ್ಯೂಟ್ಸ್ ಸಂಸ್ಥೆಯಡಿ ಅಂಬಟಿ ಮಧು ಮೋಹನ್ ನಿರ್ಮಿಸಿ, ಶ್ರೀನಿವಾಸ್ ಮಂಡ್ಯ ನಿರ್ದೇಶಿಸಿರುವ ‘ರೋಲೆಕ್ಸ್’ ಚಿತ್ರ ಇದೀಗ ‘ರಿಲ್ಯಾಕ್ಸ್’ ಎಂಬ ಹೊಸ ಶೀರ್ಷಿಕೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಕೋಮಲ್ ಕುಮಾರ್ ನಾಯಕನಾಗಿ, ಸೋನಾಲ್ ಮೊಂತೆರೊ ನಾಯಕಿಯಾಗಿ ಹಾಗೂ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರದ ‘ಗುಡ್ ಮಾರ್ನಿಂಗ್ ಮೇಡಂ’ ಹಾಡು ಇತ್ತೀಚೆಗೆ A2 Music ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿ ಹಾಡಿರುವ ಈ ಗೀತೆಗೆ ಕವಿರಾಜ್ ಸಾಹಿತ್ಯ ರಚಿಸಿದ್ದಾರೆ. ಕೋಮಲ್ ಕುಮಾರ್ ಅವರ ಹಾಸ್ಯಭರಿತ ಹಾವಭಾವ ಹಾಗೂ ಸೋನಾಲ್ ಮೊಂತೆರೊ ಅವರ ಗಂಭೀರ ಅಭಿನಯ ಹಾಡಿನ ಆಕರ್ಷಣೆಯನ್ನು ಹೆಚ್ಚಿಸಿದೆ. ಚಿತ್ರದ ಟೀಸರ್ ಹಾಗೂ ಹಾಡುಗಳಿಗೆ ಆರಂಭದಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿರೀಕ್ಷೆಗೂ ಮೀರಿದ ಪ್ರಶಂಸೆ ವ್ಯಕ್ತವಾಗಿದೆ.

ವಿಭಿನ್ನ ಕಥಾಹಂದರ ಹೊಂದಿರುವ ‘ರಿಲ್ಯಾಕ್ಸ್’ ಚಿತ್ರ ಅಕ್ಟೋಬರ್ 30ರಂದು ತೆರೆಗೆ ಬರಬೇಕಿತ್ತು. ಆದರೆ, ಯಶ್ ಅಭಿನಯದ ಬಹು ನಿರೀಕ್ಷಿತ "ರಾಮಾಯಣ" ಚಿತ್ರ ನವೆಂಬರ್ 5 ರಂದು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ "ರಿಲ್ಯಾಕ್ಸ್" ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ನವೆಂಬರ್ 27ರಂದು ಚಿತ್ರವನ್ನು ಅದ್ದೂರಿಯಾಗಿ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಮುರಳಿಕೃಷ್ಣ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿರುವ ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ನಂದು (ಕೆ.ಜಿ.ಎಫ್) ಹಿನ್ನೆಲೆ ಸಂಗೀತ ನೀಡಿದ್ದು, ರಾಕೇಶ್ ಸಿ. ತಿಲಕ್ ಛಾಯಾಗ್ರಹಣ ಹಾಗೂ ಅರವಿಂದ್ ರಾಜ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ರಾಜೇಶ್ ವರ್ಮ ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸಿದ್ದಾರೆ.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ‘ರಿಲ್ಯಾಕ್ಸ್’ ಆಗಿ ಕೇಳಿ ‘ಗುಡ್ ಮಾರ್ನಿಂಗ್ ಮೇಡಂ’ ಹಾಡು ! ಕೋಮಲ್ ಕುಮಾರ್, ಸೋನಾಲ್ ಮೊಂತೆರೊ, ವಿನೋದ್ ಪ್ರಭಾಕರ್ ಅಭಿನಯದ ‘ರಿಲ್ಯಾಕ್ಸ್’ ನವೆಂಬರ್ 27ರಂದು ಅದ್ದೂರಿ ಬಿಡುಗಡೆ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95