ಚಿತ್ರ; ಮಿಸ್ಟರ್ ಲಕ್ಕಿ
ನಿರ್ದೇಶನ : ಹರ್ಷಿತ್ ರಂಗಸ್ವಾಮಿ
ತಾರಾಗಣ : ರಾಮ್ ತೇಜ್, ರಿತಿ ಶೆಟ್ಟಿ,ಐಶ್ವರ್ಯ, ಶ್ರೀನಿಧಿ , ಕಿರಣ್ ನಾಯ್ಕ್, ಆಶಾರಾಣಿ ಮತ್ತಿತರರು
ರೇಟಿಂಗ್ : 3.5 / 5
ಅಣ್ಣ ತಂಗಿಯ ಬಾಂಧವ್ಯ ,ಸೆಂಟಿಮೆಂಟ್ , ಸಹೋದರ- ಸಹೋದರಿಯ ಭಾವನಾತ್ಮಕ ಕಥೆ ಹೊಂದಿರುವ ಚಿತ್ರ ಮಿಸ್ಟರ್ ಲಕ್ಕಿ
ಅಪ್ಪ ಕಂಡ ಕನಸಿಗಿಂತ ತಂಗಿ ಪಟ್ಟ ಆಸೆ ಈಡೇರಿಸಲು ಅಣ್ಣ ಮಡುವ ಸಾಹಸ, ಎದುರಿಸುವ ಸಮಸ್ಯೆಯ ಸುತ್ತ ಸಾಗುವ ಕಥೆಯನ್ನು ನಿರ್ದೆಶಕ ಹರ್ಷಿತ್ ರಂಗಸ್ವಾಮಿ ತೆರೆಗೆ ಕಟ್ಟಿಕೊಟ್ಟಿದ್ದಾರೆ.
ಕನಸಿನ ಬೆನ್ನೆತ್ತಿದವರ ಬದುಕು, ಬವಣೆ, ತೊಂದರೆ, ತಾಪತ್ರೆಗಳಿಗೆ ವಾಸ್ತವ ಬದುಕಿನ ಕನ್ನಡಿ ಹಿಡಿದಿರುವ ಚಿತ್ರ. ಅಪ್ಪನ ಕನಸಿನ ಮನೆ ಮರಳಿ ಪಡೆಯಬೇಕೆನ್ನುವ ಛಲ, ತಂಗಿಯನ್ನು ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಕಳುಹಿಸುವ ಹಂಬಲದ ಸುತ್ತ ಸಾಗುವ ಸೆಂಟಿಮೆಂಟ್ ಜೊತೆಗೆ ಬೆಟ್ಡಿಂಗ್ ಭೂತದ ಬೆನ್ನು ಬಿದ್ದರೆ ಏನೆಲ್ಲಾ ಆಗಲಿದೆ ಎನ್ನುವ ವಿಷಯವನ್ನು ಸೂಕ್ಷ್ಮವಾಗಿ ತೆರೆಯ ಮೇಲೆ ಕಟ್ಟಿಕೊಡಲಾಗಿದೆ.
ನಾಯಕ ರಾಮ್ ತೇಜ್ ಹಾಗು ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಐಶ್ವರ್ಯ ಸುತ್ತಲೇ ಬಹುತೇಕ ಕಥೆ ಸಾಗಿದ್ದು ಇಬ್ಬರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಜೊತೆಗೆ ಅವಕಾಶ ಸಿಕ್ಕರೆ ಎಂತಹ ಪಾತ್ರ ನಿಭಾಯಿಸಬಹಿಸುವೆ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ನಾಯಕಿ ರಿತು ಶೆಟ್ಟಿ ಹೆಚ್ಚು ಅವಕಾಶವಿಲ್ಲದಿದ್ದರೂ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ.
ಲಕ್ಷಣ ( ರಾಮ್ ತೇಜ್) ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿ ಒಳ್ಳೆಯ ಕೆಲಸಗಾರ. ಇನ್ನೇನು ಟೀಮ್ ಲೀಡರ್ ಆಗಬೇಕು ಎನ್ನುವಾಗ ಕಂಪನಿ ಕೈಗೆತ್ತಿಕೊಂಡ ಸಾಮೂಹಿಕ ವಜಾ ಪ್ರಕ್ರಿಯೆಯಲ್ಲಿ ಸಿಲುಕಿ ಕೆಲಸ ಕಳೆದುಕೊಂಡ. ಕೈ ತುಂಬ ಸಂಬಳ ಸಿಕ್ಕರೂ ಮುದ್ದಿನ ತಂಗಿ ( ಐಶ್ವರ್ಯ) ಳನ್ನು ಬಿಟ್ಟು ಹೋಗಬೇಕಾಗುತ್ತದೆ ಎಂದು ಕೆಲಸವನ್ನೇ ಬಿಟ್ಟವ. ತಾನಿರುವ ಕಡೆ ಸಿಕ್ಕ ಕೆಲಸಕ್ಕೂ ಕತ್ತರಿ ಬೀಳುತ್ತೆ.
ಮತ್ತೊಂದೆಡೆ ಕಲಾವಿದೆಯಾಗಬೇಕು ಎಂದು ಕನಡು ಕಟ್ಟಿಕೊಂಡು ತೀರ್ಥಹಳ್ಳಿಬಂದ (ರಿತಿ ಶೆಟ್ಟಿ) ಲಕ್ಕಿ ಅಚಾನಕ್ ಭೇಟಿ, ಪರಿಚಯ. ಮತ್ತೊಂದೆಡೆ ಕೆಲಸವಿಲ್ಲದೆ ಕುಳಿತ ಸಮಯದಲ್ಲಿ ಸಿಕ್ಕ ಅದೃಷ್ಟದ ಟೋಪಿಯಿಂದ ಅವನ ಲಕ್ಕಿಯ ಬದುಕು ಬದಲಾಯಿಸುತ್ತಾ ಇಲ್ಲ ಸಮಸ್ಯೆಗೆ ಎಡೆ ಮಾಡುತ್ತಾ..ಅಪ್ಪನ ಕನಸಾ.. ತಂಗಿಯ ಆಸೆಯಾ ಯಾವುದನ್ನು ಲಕ್ಕಿ ಈಡೇರಿಸುತ್ತಾನೆ ಎನ್ನುವುದು ಚಿತ್ರದ ಕಥನ ಕುತೂಹಲ.
ನಿರ್ದೇಶಕ ಹರ್ಷಿತ್ ರಂಗಸ್ವಾಮಿ ಮೂರ್ನಾಲ್ಕು ಪಾತ್ರಗಳನ್ನು ಮುಂದಿಟ್ಟುಕೊಂಡು ಕುತೂಹಲಕಾರಿ ಥ್ರಿಲ್ಲರ್ ಕಥನವನ್ನು ಜನರ ಮುಂದೆ ಇಟ್ಟಿದ್ದಾರೆ. ಬೆರಳೆಣಿಕೆಯಷ್ಟು ಪಾತ್ರಗಳಿದ್ದರೂ ಅವರವರ ಪಾತ್ರಕ್ಕೆ ನ್ಯಾಯ ಒದಗಿಸಿದಶ್ರೀನಿಧಿ ನಾಯಕ ರಾಮ್ ತೇಜ್ ಲವಲವಿಕೆಯ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ಭವಿಷ್ಯದಲ್ಲಿ ಉತ್ತಮ ನಾಯಕನಾಗುವ ಭರವಸೆ ಮೂಡಿಸಿದ್ದಾರೆ. ನಾಯಕಿ ರಿತು ಶೆಟ್ಟಿ ಪಾತ್ರಕ್ಕೆ ಜೀವ ತುಂಬಿದ್ದಾರೆ, ತಂಗಿಯ ಪಾತ್ರದಲ್ಲಿ ಐಶ್ವರ್ಯ ಇಡೀ ಪಾತ್ರವನ್ನು ಆವರಿಸಿಕೊಂಡು ಜೀವಿಸಿದ್ದಾರೆ. ಉತ್ತಮ ನಟಿಯಾಗುವ ಎಲ್ಲಾ ಲಕ್ಷಣಗಳಿವೆ ಚಿತ್ರದಲ್ಲಿ ಕಿರಣ್ ನಾಯ್ಕ್, ಆಶಾರಾಣಿ, ಶ್ರೀನಿಧಿ ಸೇರಿದಂತೆ ಮತ್ತಿತರು ತಮಗೆ ಸಿಕ್ಕ ಪಾತ್ರ ನಿಬಾಯಿಸಿದ್ದಾರೆ.