Chief Editor
Manohar. R (Manu)
Photo Journalist
chitrataramanu@gmail.com
+91 9845549026
ಬಿಡುಗಡೆಯಾಯ್ತು ಮ್ಯಾರೇಜ್ ಪಾರ್ಟಿಯ ಗಲಾಟೆ ವೀಡಿಯೋ ಸಾಂಗ್!
Posted date: 02 Mon, Nov 2026 03:34:23 PM
ಚಯನ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಮ್ಯಾರೇಜ್ ಪಾರ್ಟಿ ಚಿತ್ರದ ಗಲಾಟೆ ವೀಡಿಯೋ ಸಾಂಗ್ ಬಿಡುಗಡೆಗೊಂಡಿದೆ. ಇದೇ ಡಿಸೆಂಬರ್ 4ರಂದು ಅದ್ದೂರಿಯಾಗಿ ತೆರೆಗಾಣಲಿರುವ ಈ ಚಿತ್ರದ ಗೌಜು, ಗಮ್ಮತ್ತನ್ನು ತೆರೆದಿಡುವ ಶೈಲಿಯಲ್ಲಿ ಮೂಡಿ ಬಂದಿರುವ ಗಲಾಟೆ ಸಾಂಗ್ ಬಿಡುಗಡೆ ನೆಪದಲ್ಲಿ ನಡೆದ ಮೊದಲ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಚಯನ್ ಶೆಟ್ಟಿ, ನವೀನ್ ಡಿ ಪಡೀಲ್, ಪ್ರಕಾಶ್ ತುಮಿನಾಡು, ಪುಷ್ಪರಾಜ್ ಬೋಳಾರ್, ನಿರ್ಮಾಪಕ ಸಂತೋಷ್.ವಿ, ಕೋರಿಯೋಗ್ರಾಫರ್ ಮುರುಗ, ಮೈಮ್ ರಾಮದಾಸ್, ಭೀಮ್ ರಾವ್ ವಾಸ್ಟರ್, ಜ್ಯೋತಿ ಶೆಟ್ಟಿ, ನಮಿತಾ ಕಿರಣ್, ಅನನ್ಯಾ, ರಕ್ಷಿತಾ ಸೇರಿದಂತೆ ಚಿತ್ರತಂಡ ಭಾಗಿಯಾಗಿ, ಒಂದಷ್ಟು ಲವಲವಿಕೆಯ ಸಂಗತಿಗಳನ್ನು ಹಂಚಿಕೊಂಡಿದೆ.

ಈ ಹಾಡಿನ ಕುರಿತಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಚಯನ್ ಶೆಟ್ಟಿ  `ಇದು ಹೆಸರೇ ಸೂಚಿಸುವಂತೆ ಮದುವೆಯೊಂದರ ಸುತ್ತ ಘಟಿಸುವ ಕಥೆಯ ಚಿತ್ರ. ಇದರಲ್ಲಿ ಹಾರರ್ ಅಂಶಗಳೂ ಇವೆ. ಈ ಹಾಡು ಇಷ್ಟೊಂದು ಚೆನ್ನಾಗಿ ಮೂಡಿ ಬರಲು ಕಾರಣ ನಿರ್ಮಾಪಕ ಸಂತೋಷ್.ವಿ. ಮ್ಯಾರೇಜ್ ಪಾರ್ಟಿ ಅಂದಾಕ್ಷಣ ಇದು ಸಂಪೂರ್ಣವಾಗಿ ಮದುವೆ ಸುತ್ತಲೇ ಸುತ್ತುವ ಕಥೆ ಅಂದುಕೊಳ್ಳಬೇಕಿಲ್ಲ. ಅದರಲ್ಲಿ ಬೇರೆ ಕಥನಗಳೂ ಇದ್ದಾವೆ` ಎಂಬ ಸುಳಿವು ಬಿಟ್ಟುಕೊಟ್ಟರು. 

ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಮೊದಲ ಹೆಜ್ಜೆಯಿಟ್ಟಿರುವ ಸಂತೋಷ್ ವಿ `ಇದು ನಿರ್ಮಾಪಕನಾಗಿ ನನ್ನ ಮೊದಲ ಚಿತ್ರ. ಮೊದಲ ಹೆಜ್ಜೆಯಲ್ಲಿಯೇ ಅತ್ಯಂತ ಅಚ್ಚುಕಟ್ಟಾಗಿ ತನ್ನ ಕೆಲಸವನ್ನು ನಿರ್ವಹಿಸುವ ಚಯನ್ ಶೆಟ್ಟಿ ನಿರ್ದೇಶಕರಾಗಿ ಸಿಕ್ಕಿರೋದು ಹೆಮ್ಮೆಯ ವಿಚಾರ. ಎಲ್ಲ ತಂತ್ರಜ್ಞರು, ಕಲಾವಿದ ಸಾಥ್‌ನೊಂದಿಗೆ ಇದೊಂದು ಅದ್ಭುತ ಚಿತ್ರವಾಗಿ ಮೂಡಿ ಬಂದಿದೆ ` ಎನ್ನುತ್ತಲೇ, ಈ ಚಿತ್ರವನ್ನು ನೋಡಿ ಪ್ರೋತ್ಸಾಹಿಸುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡರು.

ಇನ್ನುಳಿದಂತೆ ಈ ಸಿನಿಮಾದ ಪ್ರಧಾನ ಪಾತ್ರಗಳಲ್ಲಿ ನಟಿಸಿರುವ, ಸದರಿ ಗಲಾಟೆ ಸಾಂಗ್‌ನಲ್ಲಿ ಹೆಜ್ಜೆ ಹಾಕಿರುವ ನವೀನ್ ಡಿ ಪಡೀಲ್, ಪ್ರಕಾಶ್ ತುಮಿನಾಡು ಮತ್ತು ಮೈಮ್ ರಾಮ್‌ದಾಸ್ ತಮ್ಮ ಅನುಭವಗಳನ್ನು ಹಂಚಿಕೊಂಡರು. ಚಿತ್ರೀಕರಣದ ರಸವತ್ತಾದ ಕ್ಷಣಗಳನ್ನು ಮೆಲುಕು ಹಾಕುತ್ತಲೇ, ಇದು ದೊಡ್ಡ ಮಟ್ಟದಲ್ಲಿ ಗೆಲುವು ಕಾಣಲಿದೆ ಎಂಬ ಭರವಸೆಯ ಮಾತುಗಳನ್ನಾಡಿದರು. ಅಂದಹಾಗೆ, ಮದುವೆ ಮನೆಯಲ್ಲಿ ಗಮ್ಮತ್ತಿಗೆ ನಡೆಯೋ ಎಣ್ಣೆ ಪಾರ್ಟಿಯ ಅಮೋಘ ನಶೆ ಹೊದ್ದುಕೊಂಡಂತಿರೋ ಈ ಹಾಡನ್ನು ಪ್ರಣವಮ್ ಸಸಿ ಹಾಡಿದ್ದಾರೆ. ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯಕ್ಕೆ ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಲವಾರು ರಿಯಾಲಿಟಿ ಶೋಗಳ ಮೂಲಕ ಹೆಸರಾಗಿರುವ ಮುರುಗ ಮಾಸ್ಟರ್ ನೃತ್ಯ ನಿರ್ದೇಶನದಲ್ಲಿ ಈ ಹಾಡು ಮೂಡಿ ಬಂದಿದೆ.

ಈಗಾಗಲೇ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ವಿನೀತ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರವೀಗ ಸಂಪೂರ್ಣವಾಗಿ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ತೆರೆಗಾಣಲು ಸನ್ನದ್ಧವಾಗಿದೆ. ಶ್ರೀ ವಾರಾಹಿ ಫಿಲಂಸ್ ಬ್ಯಾನರಿನಡಿಯಲ್ಲಿ ಸಂತೋಷ್ ವಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.  ಶ್ರೀಕಾಂತ್ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ, ಸು ಫ್ರಂ ಸೋ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನ, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ, ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್‌ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿ ಶೆಟ್ಟಿ, ರಾಧಾಕೃಷ್ಣ, ಪಿಡಿ ಸತೀಶ್, ಭೀಮ್ ರಾವ್ ವಾಸ್ಟರ್ ಮುಂತಾದವರ ತಾರಾಗಣವಿರುವ ಈ ಚಿತ್ರ ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಗಾಣಲಿದೆ.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಬಿಡುಗಡೆಯಾಯ್ತು ಮ್ಯಾರೇಜ್ ಪಾರ್ಟಿಯ ಗಲಾಟೆ ವೀಡಿಯೋ ಸಾಂಗ್! - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95