ಆಕ್ಷನ್, ಡ್ರಾಮ, ಥ್ರಿಲ್ಲರ್ ಕಥೆ ಹೊಂದಿರುವ " ನೀ ನಂಗೆ ಅಲ್ಲವಾ" ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಚಿತ್ರ ನವಂಬರ್ 13 ರಂದು ತೆರೆಗೆ ಬರಲು ಸಜ್ಜಾಗಿದೆ.
ಚಂದನವನದ ಹಿರಿಯ ನಿರ್ದೇಶಕರಾದ ಶಶಾಂಕ್, ಚೇತನ್ , ಪವನ್ ಒಡೆಯರ್, ಗುರುದತ್, ಮಹೇಶ್, ರೋಹಿತ್ ಪದಕಿ , ಪ್ರೇಮದ ಊರಲಿ ಚಿತ್ರದ ನಿರ್ಮಾಪಕ ದೇವೇಂದ್ರ ಸೇರಿದಂತೆ ಹಲವು ಗಣ್ಯರು ಸಿನಿಮಾಗೆ ಮೊದಲ ಇನ್ವಿಟೆಷನ್ ಚಿತ್ರದ ಶೀರ್ಷಿಕೆ. ಟೈಟಲ್ ಮೂಲಕ ಗಮನ ಸೆಳೆದಿದ್ದಾರೆ ಹೊಸಬರ ಹವಾ, ಚಿತ್ರರಂಗಕ್ಕೆ ಚೈತನ್ಯ ನೀಡುತ್ತಿರುವರು ಹೊಸಬರು. ನವಂಬರ್ 14 ರಂದು ನಾಯಕ, ನಾಯಕಿಯರು ಕಲಾವಿದರು ಸ್ಟಾರ್ ಗಳಾಗಲಿ. ಪ್ರೇಮದ ಊರಲಿ ಚಿತ್ರದ ರೀತಿ ಯಶಸ್ವಿಯಾಗಲಿ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ನಿರ್ದೇಶಕ ಮನೋಜ್ ಪಿ ನಡವಲಮನೆ ನಿರ್ದೆಶನ ಮಾಡಿರುವ "ನೀ ನಂಗೆ ಅಲ್ಲವಾ " ಚಿತ್ರಕ್ಕೆ ಜಯರಾಮ ದೇವಸಮುದ್ರ ಚಿತ್ರಕ್ಕೆ ಬಂಡವಾಳ ಹೂಡಿದ್ದು
ನಟ ರಾಹುಲ್ ಆರ್ಕಾಟ್ ಮತ್ತು ನಾಯಕಿ ಕಾಶಿಮಾ ರಫಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ನಿರ್ದೇಶಕ ಮನೋಜ್ ಪಿ ನಡವಲಮನೆ ಮಾತನಾಡಿ ಸಿನಿಮಾ ಹಿಟ್ ಆಗಲಿದೆ. ಹೊಸಬರು ಎನ್ನುವ ಹಣೆಪಟ್ಟಿ ಹೋಗಬೇಕು. ನನ್ನದು ಇದು ಮೂರನೇ ಸಿನಿಮಾ, ಇರುವುದರಲ್ಲಿ ನಾಯಕ ಮಾತ್ರ ಹೊಸಬ. ಪ್ರತಿಯೊಂದು ತಂಡಕ್ಕೆ ಜನರ ಬೆಂಬಲ ಬೇಕು. ಸಾಂಗ್ ಟ್ರೈಲರ್ ಎಲ್ಲವನ್ನು ಬಿಟ್ಟಿದ್ದೇವೆ. ನವಂಬರ್ 13 ಕ್ಕೆ ಸಿನಿಮಾ ನೋಡಿ ಹರಸಿ ಎಂದು ಹೇಳಿದರು.
ನಿರ್ಮಾಪಕ ಜಯರಾಮ್ ದೇವಸಮುದ್ರ ಮಾತನಾಡಿ ಹಿರಿಯ ನಿರ್ದೇಶಕರು ತಂಡಕ್ಕೆ ಆಗಮಿಸಿ ಬೆಂಬಲ ನೀಡಿರುವುದು ಖುಷಿಯ ವಿಚಾರ. ಸಿನಿಮಾ ಆರಂಭ ಕಷ್ಟದ ಕೆಲಸ. ಬಹಳಷ್ಟು ಜನರ ಕನಸು. ಜೊತೆಗೆ ಜೀವನ ಕೂಡ. ಇಂತಹ ಕನಸನ್ನು ಬೆಂಬಲಿಸುವ ಕೆಲಸ ಮಾಡಲಾಗುತ್ತಿದೆ. ಸಿನಿಮಾ ಮಾಡುವುದು ನಮ್ಮಕೆಲಸ, ನೀ ನಂಗೆ ಅಲ್ಲವಾ ಸಂಪೂರ್ಣ ಮನರಂಜನಾ ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ, ಮನೆಯಲ್ಲಿ ಪತ್ನಿ ಪಲ್ಲವಿ ಬೆಂಬಲ ನೀಡಿದ್ದರಿಂದ ಸಿನಿಮಾ ಪ್ರಯಾಣಕ್ಕೆ ಸಹಕಾರಿಯಾಗಿದೆ. ಜೊತೆಗೆ ಸಹೋದ್ಯೋಗಿಗಳ ಸಹಕಾರ, ಪ್ರೋತ್ಸಾಹದಿಂದ ಚಿತ್ರ ಮೂಡಿಬಂದಿದೆ.ಚಿತ್ರ ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿದೆ. ನಗು, ಸಂದೇಶ ಎಲ್ಲವೂ ಇದೆ, ಪ್ರೇಮದ ಊರಲಿ ಚಿತ್ರ ನೂರು ದಿನ ಓಡಲಿ ಎಂದು ಹಾರೈಸಿದರು.
ನಟ ರಾಹುಲ್ ಅರ್ಕಾಟ್ ಮಾತನಾಡಿ ಮೊದಲ ಸಿನಿಮಾ, ಹಿರಿಯ ನಿರ್ದೇಶಕರು ಹಾರೈಸಿದರು ಮತ್ತಷ್ಟು ಬಲಬಂದಿದೆ. ನಿರ್ಮಾಪಕರಿಗಾಗಿ ಹುಡುಕಾಟ ನಡೆಸುವ ಸಮಯದಲ್ಲಿ ದೇವರಾಗಿ ಬಂದವರು ನಿರ್ಮಾಪಕ ಜಯರಾಮ್ ದೇವಸಮುದ್ರ.ಅವರನ್ನು ಒಪ್ಪಿಸುವಲ್ಲಿ ಪಲ್ಲವಿ ಮೇಡಂ ಪಾತ್ರವೂ ಹಿರಿಯ. ಕಷ್ಟ ಪಟ್ಟು ಸಿನಿಮಾ ಮಾಡಿದ್ದೇವೆ , 2 ಗಂಟೆ ಸಿನಿಮಾ ಬೋರ್ ಆಗಲ್ಲ. ಒಂದೂ ಮಿಸ್ಟೇಕ್ ಕಂಡು ಹಿಡಿಯಲು ಆಗಲ್ಲ ಎಲ್ಲರ ಬೆಂಬಲ ಸಹಕಾರವಿಲಿ ಎಂದರು.
ನಟಿ ಕಾಶಿಮಾ ರಫಿ ಮಾತನಾಡಿ ಚಿತ್ರದ ಬಗ್ಗೆ ವ್ಯಕ್ತವಾಗುತ್ತಿರುವ ಅಭಿಪ್ರಾಯಕ್ಕೆ ಭಾವನಾತ್ಮಕವಾಗಿಸಿದೆ. ಚಿತ್ರ ವಿಶೇಷವಾದ ಸಿನಿಮಾ. ಸಿನಿಮಾರಂಗ ಆಗಿ ಬರಲ್ಲ. ಕಷ್ಟ ಆಗುತ್ತಿದೆ. ಸಿನಿಮಾ ರಂಗ ಬಿಟ್ಟು ಬಿಡೋಣ ಎನ್ನುವ ಸಮಯದಲ್ಲಿ ನೀ ನಂಗೆ ಅಲ್ಲವಾ ಸಿನಿಮಾ ಸಿಕ್ಕಿದೆ. ಖುಷಿ ಎನ್ನುವ ಪಾತ್ರ. ಅರ್ಥಪೂರ್ಣ ಪಾತ್ರ. ಖುಷಿಯ ನೋವು,ನಲಿವು, ಸಂತೋಷ ನೋಡಬಹುದು. ಹೆಣ್ಣುಮಗಳು ಸಮಾಜದಲ್ಲಿ ಹೇಗೆ ಕಷ್ಟ ಪಡ್ತಾಳೆ ಎನ್ನುವುದನ್ನು ಸಿನಿಮೀಯವಾಗಿ ಅಲ್ಲದೆ ನೈಜವಾಗಿ ಕಟ್ಟಿಕೊಡಲಾಗಿದೆ ಎಲ್ಲರ ಸಹಕಾರವಿರಲಿ ,ತಾಯಿಯ ಸಹಕಾರದಿಂದ ಇಲ್ಲಿ ನಿಂತಿದ್ದೇನೆ ಎಂದು ಕಣ್ಣಂಚಲಿ ನೀರು ತುಂಬಿಕೊಂಡರು.
ಹಿರಿಯ ಕಲಾವಿದ ಮಂಜುನಾಥ್ ಹೆಗ್ಡೆ ಮಾತನಾಡಿ ನಾಯಕನ ತಂದೆ ಪಾತ್ರ ಮಾಡಿದ್ದೇನೆ. ಚಿತ್ರೀಕರಣದಲ್ಲಿ ನಾಯಕ ಚೆನ್ನಾಗಿ ಕಾಣಿಸಿರಲಿಲ್ಲ. ಟ್ರೈಲರ್ ನೋಡಿ ಎಷ್ಟು ಚೆನ್ನಾಗಿ ಮಾಡಿದ್ದಾನೆ ನಾನೂ ಅವನ ರೀತಿ ನಟಿಸಬೇಕು ಅನ್ನಿಸಲಿದೆ. ಜೊತೆಗೆ ನಿರ್ದೇಶಕ ಮನೋಜ್ ಚಿತ್ರೀಕರಣ ಮಾಡುವಾಗ ಸ್ಪಷ್ಟತೆ ಇತ್ತು ಇಂತಹ ನಿರ್ದೇಶಕರು ಹೆಚ್ಚು ಬರಲಿ, ಪ್ರೇಮದ ಊರಲಿ ಚಿತ್ರದ ರೀತಿ ಯಶಸ್ಸು ಗಳಿಸಲಿ ಎಂದು ಹಾರೈಸಿದರು.