Chief Editor
Manohar. R (Manu)
Photo Journalist
chitrataramanu@gmail.com
+91 9845549026
ಅಕ್ಕ ತಂಗಿಯರ ಭರತನಾಟ್ಯ ರಂಗಪ್ರವೇಶ ನೂಪುರದ್ವಯಂ ಮೂಲಕ ಧನ್ಯಾಗಣೇಶ್- ಸಿರಿ ಗಣೇಶ್ ಕಲಾಪಯಣ ಆರಂಭ
Posted date: 02 Mon, Nov 2026 04:02:08 PM
ವೈಯಾಲಿಕಾವಲಿನ ತೆಲುಗು ವಿಜ್ಞಾನ ಸಮಿತಿಯ ಕೃಷ್ಣದೇವರಾಯ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಸಹೋದರಿಯರಾದ ಕುಮಾರಿ ಧನ್ಯಾ ಗಣೇಶ್ ಮತ್ತು ಕುಮಾರಿ ಸಿರಿ ಗಣೇಶ್ ಅವರ ಜೋಡಿ ರಂಗಪ್ರವೇಶ ನೃತ್ಯಕಾರ್ಯಕ್ರಮ ಎಲ್ಲರ ಮನಗೆದ್ದಿತು.
 
ನಿರ್ಮಾಪಕ ಗಣೇಶ್ ಕೃಷ್ಣಮೂರ್ತಿ ಅವರ ಪುತ್ರಿಯರು ಹಾಗೂ ವಿದುಷಿ ಶ್ರೀಮತಿ ಶ್ರೀಲಕ್ಷ್ಮಿ ತೇಜಸ್ ಅವರ ಶಿಷ್ಯೆಯರಾದ ಈ  ಸಹೋದರಿಯರು ಸುಮಾರು ನಾಲ್ಕು ಗಂಟೆಗಳ ಕಾಲ ವಿವಿಧ ಭರತನಾಟ್ಯ ಪ್ರಾಕಾರಗಳನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿ, ನೆರೆದಿದ್ದ ಕಲಾಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
 
ಕಾರ್ಯಕ್ರಮದಲ್ಲಿ  ಗುರು ಡಾ.ಲಲಿತಾ ಶ್ರೀನಿವಾಸನ್ (ನಿರ್ದೇಶಕರು, ನೂಪುರ ಸ್ಕೂಲ್ ಆಫ್ ಭರತನಾಟ್ಯ) ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಗೌರವಾನ್ವಿತ ಅತಿಥಿಗಳಾಗಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ಎನ್. ಕುಮಾರ್ ಹಾಗೂ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಶುಭಾ ಧನಂಜಯ್ ಭಾಗವಹಿಸಿ ಸಹೋದರಿಯರಿಗೆ ಶುಭ ಹಾರೈಸಿದರು.
 
ಮುಖ್ಯ ಅತಿಥಿಗಳು ಮಾತನಾಡಿ, "ಇಬ್ಬರು ಸಹೋದರಿಯರು ಒಟ್ಟಿಗೆ ರಂಗಪ್ರವೇಶ ಮಾಡುವುದು ವಿಶೇಷ. ಗುರು-ಶಿಷ್ಯ ಪರಂಪರೆಯನ್ನು ಇಬ್ಬರೂ ಉಳಿಸಿಕೊಂಡು ಬೆಳೆಸಲಿ. ಭರತನಾಟ್ಯ ಕೇವಲ ನೃತ್ಯವಲ್ಲ, ಒಂದು ತಪಸ್ಸು" ಎಂದು ಶುಭ ಹಾರೈಸಿದರು.
   
ಕಾರ್ಯಕ್ರಮವನ್ನು ಸಹೋದರಿಯರ ಪೋಷಕರು ಹಾಗೂ ಚಲನಚಿತ್ರ ನಿರ್ಮಾಪಕರಾದ ಶ್ರೀಮತಿ ಪ್ರತಿಮಾ ಗಣೇಶ್ ಮತ್ತು  ಗಣೇಶ್ ಕೃಷ್ಣಮೂರ್ತಿ ಅವರು ಆಯೋಜಿಸಿದ್ದರು.
GALLERY
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಅಕ್ಕ ತಂಗಿಯರ ಭರತನಾಟ್ಯ ರಂಗಪ್ರವೇಶ ನೂಪುರದ್ವಯಂ ಮೂಲಕ ಧನ್ಯಾಗಣೇಶ್- ಸಿರಿ ಗಣೇಶ್ ಕಲಾಪಯಣ ಆರಂಭ - Chitratara.com
Copyright 2009 chitratara.com Reproduction is forbidden unless authorized. All rights reserved.

Fatal error: Uncaught ArgumentCountError: mysqli_close() expects exactly 1 argument, 0 given in /var/www/2abd550b-0850-492e-b3fe-6b047f2ad0c0/public_html/show-content.php:95 Stack trace: #0 /var/www/2abd550b-0850-492e-b3fe-6b047f2ad0c0/public_html/show-content.php(95): mysqli_close() #1 {main} thrown in /var/www/2abd550b-0850-492e-b3fe-6b047f2ad0c0/public_html/show-content.php on line 95