ಯುವ ಪ್ರತಿಭಾನ್ವಿತ ಕಲಾವಿದರ ತಂಡ ಸೇರಿಕೊಂಡು ನಿರ್ಮಿಸಿ, ನಿರ್ದೇಶಿಸಿರುವ "ಮಿಸ್ ಮ್ಯಾಚ್ " ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಮೇಘಾ ಮತ್ತು ಅಕಾಶ್ ನಡುವಿನ ಕಥೆಯನ್ನು ತೆರೆಯ ಮೇಲೆ ಕಟ್ಟಿಕೊಡಲು ಚಿತ್ರತಂಡ ಮುಂದಾಗಿದ್ದಾರೆ.
ಚಿತ್ರೀಕರಣ ಪೂರ್ಣಗೊಂಡಿದ್ದು ಶೀಘ್ರದಲ್ಲೇ ಮೊದಲ ಪ್ರತಿ ಸಿದ್ದವಾಗಲಿದೆ. ಮುಂದಿನ ವರ್ಷ ಜನವರಿ 8 ರಂದು ಬಿಡುಗಡೆಯಾಗಲಿದೆ. ಚಿತ್ರಕ್ಕೆ ನಿರ್ದೇಶಕ ಸಾಯಿ ಶ್ರೀನಿಧಿ ಆಕ್ಷನ್ ಕಟ್ ಹೇಳಿದ್ದು ನಿರ್ಮಾಪಕ ತೇಜೇಶ್ ವೆಂಕಟೇಶ್ ಬಂಡವಾಳ ಹೂಡಿದ್ದಾರೆ.
ನಿರ್ದೇಶಕ ಸಾಯಿ ಶ್ರೀನಿಧಿ ಮಾತನಾಡಿ ಬಿಟಿಎಸ್ ಚಿತ್ರ ಬಿಡುಗಡೆಯಾದ ಎರಡು ವರ್ಷಗಳ ನಂತರ ಮಿಸ್ ಮ್ಯಾಚ್ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಪ್ರೀತಿ, ಪ್ರೇಮದ ಸಂಬಂದ ಕೊಡು ಕೊಳ್ಳುವಿಕೆಯ ರೀತಿ ಆಗಿದೆ. ಮುಗ್ದತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಪ್ರೀತಿ, ದ್ವೇಷ, ಅಸೂಯೆ ಎಲ್ಲವೂ ಇದೆ. ಎಲ್ಲವೂ ನ್ಯಾಚುರಲ್ ಆಗಿ ಮೂಡಿಬಂದಿದೆ. ಚಿತ್ರದಲ್ಲಿ ಐದು ಹಾಡುಗಳಿವೆ. ನಾಲ್ಕು ಬಿಟ್ ಟ್ರಾಕ್ ಇದೆ. ಮ್ಯೂಸಿಕಲ್ ರೋಮಾಂಟಿಕ್ ಕಾಮಿಡಿ ಚಿತ್ರ ಎಂದರು
ಪಕ್ಕದ ಮನೆ ಹುಡುಗಿ ರೀತಿ ನಾಯಕಿ ಬೇಕಾಗಿದ್ದ ಹಿನ್ನೆಲೆಯಲ್ಲಿ ಅಶ್ವಿತಾ ಹೆಗ್ಡೆ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಲೆನಾಡಿನ ಸಣ್ಣ ಹಳ್ಳಿಯಲ್ಲಿ ನಡೆಯುವ ಕಥೆ , ಸಿಟಿ ಬಿಟ್ಟು ಹಳ್ಳಿಗೆ ಬಂದ ಹುಡುಗ, ಹಳ್ಳಿಯ ಸಹವಾಸ ಸಾಕು ನಗರ ಬೇಕು ಎನ್ನುವ ಹುಡುಗಿಯ ನಡುವೆ ನಡೆಯುವ ಕಥೆ ಹೊಂದಿದೆ. ಇದರ ಜೊತೆಗೆ ಸ್ನೇಹಿತರು, ಅಪ್ಪ- ಅಮ್ಮನ ಎಲ್ಲವನ್ನೂ ಚಿತ್ರದ ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ ,ಅಪ್ಪ- ಅಮ್ಮ, ಮಗ, ಮಗಳು ಹೀಗೆ ಹಲವು ವಿಷಯಗಳು ಚಿತ್ರದಲ್ಲಿವೆ ಎಂದು ಹೇಳಿದರು.
ನಿರ್ಮಾಪಕ ತೇಜೇಶ್ ವೆಂಕಟೇಶ್ ಮಾತನಾಡಿ ಐಟಿ, ಮತ್ತು ಎಐ ನಲ್ಲಿ ಕೆಲಸ ಮಾಡುತ್ತಿದ್ದು ಕೆಲಸಕ್ಕೆ ವಿರಾಮ ತೆಗೆದುಕೊಂಡು ಸಿನಿಮಾ ನಿರ್ಮಾಣ ಮಾಡಿದ್ದೇನೆ. ರೋಮಾಂಟಿಕ್ ಕಾಮಿಡಿ ಚಿತ್ರವನ್ನು ನಮ್ಮದೇ ಆಡಿಯೋ ಸಂಸ್ಥೆ ಮೂಲಕ ಬಿಡುಗಡೆ ಮಾಡಲಾಗುತ್ತಿದೆ. ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ, ಚಿತ್ರಕ್ಕೆ ಎಲ್ಲರ ಸಹಕಾರವಿರಲಿ ಎಂದು ಹೇಳಿಕೊಂಡರು
ನಟ ಕೌಶಿಕ್ ಗೌಡ ಮಾತನಾಡಿ ಸಹಾಯಕ ನಿರ್ದೇಶಕನಾಗಿ ಕೆಲಸಕ್ಕೆ ಸೇರಿಕೊಂಡೆ. ಆಗಲಿನಿಂದಲೂ ನಟನೆ ಮಾಡುವ ಆಸೆ ಇತ್ತು. ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದೆ. ನಿರ್ದೇಶಕ ಸಾಯಿ ಶ್ರೀನಿಧಿ ಜೊತೆ ಕೆಲಸ ಮಾಡಿದ್ದೆ. ಬಿಟಿಎಸ್ ಚಿತ್ರದಲ್ಲಿ ತೇಜಸ್ ವೆಂಕಟೇಶ್ ಬಂದಿದ್ದರು. ಚಿತ್ರ ನೋಡಿ ಸಿನಿಮಾ ಮಾಡೋಣ ಎಂದು ಭರವಸೆ ನೀಡಿದ್ದರು. ಅದರ ಫಲವೇ ಮಿಸ್ ಮ್ಯಾಚ್. ಕಲಾವಿದರ ಜೊತೆ ಕೆಲಸ ಮಾಡಿದ್ದು ಖುಷಿ ಆಗಿದೆ. ಎಲ್ಲರ ಸಹಕಾರವಿರಲಿ ಎಂದು ಹೇಳಿದರು
ನಟ ತೇಜೇಶ್ ಎಸ್. ಎಂ ಮಾತನಾಡಿ ಚಿತ್ರೀಕರಣದ ಸಮಯದಲ್ಲಿ ಖುಷಿ ಪಟ್ಟಿದ್ದೇವೆ. ಟಿಪಿಕಲ್ ಕಾಮಿಡಿಯನ್ , ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳದ ಪಾತ್ರ ಎಂದರು.
ನಾಯಕಿ ಅಶ್ವಿತಾ ಹೆಗ್ಡೆ ಮಾತನಾಡಿ ಮಿಸ್ ಆಗಿ ಸಿನಿಮಾ ಸಿಕ್ಕಿ ಚಿತ್ರತಂಡದೊಂದಿಗೆ ಮ್ಹಾಚ್ ಆದೆ. ನಿರ್ದೇಶಕರು ಹೇಳಿದ ಕಥೆ ಕೇಳಿ ಇಷ್ಡವಾಯಿತು. ರೋಮಾಂಟಿಕ್ ಕಾಮಿಡಿಯಲ್ಲಿ ಚಮಕ್ ಕೂಡ ಇಷ್ಡವಾಯಿತು.ಚಿತ್ರ ಇಷ್ಡವಾಗಲಿದೆ ಎಂದು ಹೇಳಿದರು
ಅಮೃತಾ ಕೆ ಪಿ ಮಾತನಾಡಿ ಅಯ್ಯನ ಮನೆಯಲ್ಲಿ ಬಿಂಧು ಮಾಲಿನಿ ಎನ್ನುವ ಪಾತ್ರ ಮಾಡಿದ್ದೆ. ಇದು ಮೊದಲ ಚಿತ್ರ. ನಿರ್ದೇಶಕ ಜೊತೆ ಚರ್ಚೆ ಮಾಡಿದ ನಂತರ ನಾಯಕಿ ಅಶ್ವಿತಾ ಜೊತೆ ಉತ್ತಮ ಬಾಂಧವ್ಯ ಬೆಳೆಯಿತು. ಚಿಕ್ಕಮಗಳೂರಿನಲ್ಲಿ 45 ದಿನ ಮಜಾ ಮಾಡಿದೆವು, ಲವ್ ಲೆಟರ್ ಬರೆದಿದ್ದು ಪ್ರೇಕ್ಷಕರ ಮುಂದಿಡಲು ಸಜ್ಜಾಗಿದ್ದೇವೆ ಎಂದರು.
ಚಿತ್ರದಲ್ಲಿ ತೇಜೇಶ್ ಎಸ್. ಎಂ, ,ಅಮೃತಾ ಕೆಪಿ
ನಾಗೇಂದ್ರ ಶಾ, ಲಕ್ಷ್ಮಿ ಸಿದ್ದಯ್ಯ, ಅನಿರುದ್ದ್ ಆಚಾರ್ಯ
ಅನೂಪ್ ಮತ್ತಿತರರು ಕಾಣಿಸಿಕೊಂಡಿದ್ದಾರೆ
ಚಿತ್ರಕ್ಕೆ ಜೂಡಾ ಸ್ಯಾಂಡಿ ಸಂಗೀತ ನೀಡಿದ್ದು ಗಣೇಶ್ ಬಹಾಬಲ ಛಾಯಾಗ್ರಹಣವಿದೆ.