ಭಿನ್ನ ಮನಸುಗಳು, ವಿಭಿನ್ನ ನಂಬಿಕೆಗಳ ಜೊತೆಗೆ ಅಸಾದ್ಯ ಪ್ರೇಮಕಥೆಯ ತಿರುಳು ಹೊಂದಿರುವ " ಓ ಮನಸೇ ." ಧಾರಾವಾಹಿ ನವಂಬರ್ 10 ರಿಂದ ರಾತ್ರಿ 8.30 ಕ್ಕೆ ಸ್ಡಾರ್ ಸುವರ್ಣ ವಾಹಿನಿಯ ಮೂಲಕ ಜನರ ಮನ ಮನೆಗಳಿಗೆ ಬರಲು ಸಜ್ಜಾಗಿದೆ.
ಮೈಸೂರಿನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಕಥಾ ನಾಯಕಿ ರಾಗಾಗೆ ಶಿಕ್ಷಣವೆಂದರೆ ಜೀವ. ಪುಸ್ತಕ ಓದುವುದು ಅವಳ ಹವ್ಯಾಸ, ಶಿಕ್ಷಣ ಕೇವಲ ಪದವಿ ಪಡೆಯುವ ಸಾಧನವಲ್ಲ, ಅದು ಸ್ನಾತಂತ್ರ್ಯದ ಹಾದಿ ಎಂದು ನಂಬಿರೋಳು ರಾಗಾಳ ಬದುಕಿನ ಅತಿದೊಡ್ಡ ಸ್ಪೂರ್ತಿ ಅಂದ್ರೆ ಪ್ರೊಫೆಸರ್ ಕಲ್ಯಾಣಿ. ಆದರೆ ಮುಗಿಲು ಮುಟ್ಟೋ ಕನಸನ್ನು ಹೊಂದಿರುವ ರಾಗಾಳಿಗೆ ಸ್ವಂತ ಅಪ್ಪನೇ ತಡೆಗೋಡೆ.
ಶ್ರೀಮಂತ ಕುಟುಂಬದಲ್ಲಿ ಬೆಳೆದಿರೋ ಕಥಾನಾಯಕ ರಿಷಿ, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ. ತನ್ನೆಲ್ಲಾ ಭಾವನೆಗಳನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಟ್ಟುಕೊಂಡು ಬದುಕುತ್ತಿತುವ ವ್ಯಕ್ತಿ. ಪ್ರೀತಿ ಎಂಬ ಪದದ ಮೇಲೆ ರಿಷಿಗೆ ನಂಬಿಕೆಯಿಲ್ಲ. ತಾಯಿ ಕಲ್ಯಾಣಿಯ ಪ್ರೀತಿ, ಮಮತೆಯಿಂದ ದೂರವಾಗಿರುವ ರಿಷಿಗೆ ಅವಳ ಬಗ್ಗೆ ತೀವ್ರ ಅಸಹನೆ.
ಎರಡು ವಿಭಿನ್ನ ವ್ಯಕ್ತಿತ್ವಗಳನ್ನು ಹೊಂದಿರುವ ರಾಗಾ-ರಿಷಿಯ ಬದುಕಿನ ಪಯಣದಲ್ಲಿ ವರ್ಷಗಳಿಂದ ಹೆಪ್ಪುಗಟ್ಟಿರುವ ಕಲ್ಯಾಣಿ ಮತ್ತು ಜಯರಾಮ್ ನಡುವಿನ ಮನಸ್ತಾಪ ದೂರವಾಗುತ್ತಾ..ತಂದೆಯ ಮಾತನ್ನು ಮೀರಿ ತನ್ನ ಕನಸನ್ನು ರಾಗಾ ಹೇಗೆ ನನಸು ಮಾಡುತ್ತಾಳೆ ..ವಿರುದ್ಧ ದಿಕ್ಕಿನ ವ್ಯಕ್ತಿತ ಹೊಂದಿರುವ ರಾಗಾ-ರಿಷಿ ಒಂದಾಗಲು ಸಾಧ್ಯನಾ ಎನ್ನುವುದೇ ಓ ಮನಸೇ.. ಧಾರಾವಾಹಿಯ ಮುಖ್ಯ ಕಥಾ ಹಂದರ.
ಯಾರೆಲ್ಲಾ ಕಲಾವಿದರಿದ್ದಾರೆ.
ರಿಷಿ ಪಾತ್ರದಲ್ಲಿ ನಟ ದರ್ಶಕ್ ಗೌಡ ಹಾಗು ನಾಯಕಿ ರಾಗಾ ಪಾತ್ರದಲ್ಲಿ ನಟಿ ಮಧುಮಿತಾ ಗೌಡ ನಟಿಸುತ್ತಿದ್ದಾರೆ. ಜೊತೆಗೆ ಅಶ್ವಿನಿ ಗೌಡ, ಅಜಿತ್ ಹಂದೆ, ರೇಖಾ ಕೃಷ್ಣಪ್ಪ, ರಮೇಶ್ ಪಂಡಿತ್, ಸಹನಾ, ಪ್ರಮೋದ್ ರಾಜ್, ದೀಪಾ ಕಟ್ಟೆ, ನಿಸರ್ಗ ಅಣ್ಣಪ್ಪ ಸೇರಿದಂತೆ ಇನ್ನು ಅನೇಕ ಅನುಭವಿ ಕಲಾವಿದರು ಅಭಿನಯಿಸುತ್ತಿದ್ದಾರೆ
ನಿರ್ಮಾಪಕ ಗಣಪತಿ ಭಟ್ ಧಾರಾವಾಹಿ ನಿರ್ಮಿಸುತ್ತಿದ್ದು, ಬಿ. ಮಧುಸೂದನ್ ನಿರ್ದೇಶಿಸುತ್ತಿದ್ದಾರೆ. ಎರಡು ಭಿನ್ನ ಮನಸುಗಳ ಅಸಾಧ್ಯ ಪ್ರೇಮಕಥೆ "ಓ ಮನಸೇ" ಇದೇ ನವೆಂಬರ್ 10.ರಿಂದ ಪ್ರತಿ ದಿನ ರಾತ್ರಿ 8.30 ಕ್ಕೆ ಸ್ಟಾರ್ ಸುವರ್ಣ ಹಾಗೂ ಜಿಯೋ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗಲಿದೆ.
"ವಸುದೇವ ಕುಟುಂಬ ಇದೇ ನವೆಂಬರ್ 10, ಮಂಗಳವಾರದಿಂದ ಪ್ರತಿದಿನ ರಾತ್ರಿ 9 ಗಂಟೆಗೆ ಬದಲಾದ ಸಮಯದಲ್ಲಿ ಪ್ರಸಾರವಾಗಲಿದೆ.