ಚಿತ್ರ: ರಾಮಾಯಣ
ನಿರ್ದೇಶನ : ನಿತೇಶ್ ತಿವಾರಿ
ನಿರ್ಮಾಣ : ನಮಿತ್ ಮಲ್ಹೋತ್ರ, ಯಶ್,
ತಾರಾಗಣ : ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ರವಿದುಬೆ, ಅರುಣ್ ಗೋವಿಲ್, ರಾಕುಲ್ ಪ್ರೀತಿ ಸಿಂಗ್, ಲಾರಾ ದತ್ತ, ಇಂದಿರಾ ಕೃಷ್ಣನ್, ಶೋಭನಾ, ವಿವೇಕ್ ಒಬೆರಾಯ್. ಕಾಜಲ್ ಅಗರ್ ವಾಲ್, ಅನುಪಮ್ ಖೇರ್ ಮತ್ತಿತರರು
ರೇಟಿಂಗ್ : **** 4/5
ರಾಮಾಯಣದ ಬಗ್ಗೆ ಯಾರು ನೋಡಿಲ್ಲ, ಕೇಳಿಲ್ಲ.. ಆದರೆ ಅಂತಹ ವಿಷಯವನ್ನು ದೃಶ್ಯ ರೂಪದಲ್ಲಿ ತೆರೆಯ ಮೇಲೆ ಜನರಿಗೆ ಇನ್ನಷ್ಟು ಹತ್ತಿರವಾಗುವಂತೆ ಕಟ್ಟಿಕೊಡುವುದು ಸವಾಲಿನ ಕೆಲಸ ಅಂತಹ ಕೆಲಸವನ್ನು ರಾಮಾಯಣ ಚಿತ್ರತಂಡ ಮಾಡಿದ್ದು ಜನರಿಗೆ ತಾಂತ್ರಿಕ ವೈಭವದ ದೃಶ್ಯಕಾವ್ಯವನ್ನು ಜನರ ಮುಂದಿಟ್ಟಿದ್ದಾರೆ.
ದೇವಲೋಕ,ಭೂಲೋಕ, ಪಾತಾಳಲೋಕಕ್ಕೆ ಅಧಿಪತಿಯಾಗಬೇಕು ಎನ್ನುವ ರಾವಣನ ಕನಸು, ಇಂತಹ ಮೂರು ಲೋಕದ ಸಾಕ್ಷಿಯಾಗಿ ಸಂಹಾರ ಮಾಡುತ್ತೇನೆ ಎಂದು ರಾಮನ ಶಪಥ. ಇವರಿಬ್ಬರ ನಡುವೆ ನಡೆಯುವ ರೋಚಕ ಕಥನ ‘ರಾಮಾಯಣ”" ಈ ವಾರ ತೆರೆಗೆ ಬಂದಿದೆ
ನಿರ್ದೇಶಕ ನಿತೇಶ್ ತಿವಾರಿ ``ರಾಮಾಯಣ'ದ ಮೂಲಕ ದೃಶ್ಯ ವೈಭವವನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಟ್ಟಿದ್ದಾರೆ. ಅಷ್ಟೇ ಅಲ್ಲ ಪ್ರತಿಯೊಂದು ಸನ್ನಿವೇಶದಲ್ಲಿ ಚಿತ್ರವನ್ನು ಕಟ್ಟಿಕೊಟ್ಟಿರುವ ರೀತಿಗೆ ಎಂತವರೂ ಬೆರಗಾಗದೆ ಇರಲಾರರು.
ನಟ ಯಶ್ ರಾವಣನ ಅವತಾರದಲ್ಲಿ ತಮ್ಮ ನಟನೆಯ ಮೂಲಕ ಜನರನ್ನು ಮಂತ್ರಮುಗ್ದಗೊಳಿಸಿದ್ದಾರೆ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಸಾಥ್ ನೀಡಿದ್ದಾರೆ. ಇಬರಿಬ್ಬರ ಜುಗಲ್ ಬಂಧಿ ಮೋಡಿಮಾಡಿದೆ.
ಅಸುರರ ನಡುವೆ ನಡೆದ ಯುದ್ದದಲ್ಲಿ ರಾಕ್ಷಸರನ್ನು ಧ್ವನಿ ಎತ್ತದಂತೆ ಮಾಡುವ ದೇವತೆಗಳು. ರಾಕ್ಷಸರ ಸ್ಥಿತಿ ಕಂಡು ಸೇಡು ತೀರಿಸಿಕೊಳ್ಳಬೇಕೆಂದು ಕಾಯುವ ಕೈಕಸಿ (ಶೋಭನಾ) ಪುತ್ರ ರಾವಣ (ಯಶ್)ನನ್ನು ಪ್ರಚೋದಿಸುತ್ತಾಳೆ. ಕಠಿಣ ತಪ್ಪಸ್ಸು ಮಾಡಿ ಸೃಷ್ಠಿಕರ್ತ ಬ್ರಹ್ಮನಿಂದ ಅಮರತ್ವದ ವರ ಪಡೆದ ರಾವಣ, ದೇವತೆಗಳ ವಿರುದ್ದ ಸೇಡು ತೀರಿಸಿಕೊಳ್ಳಲು ಪ್ರಯತ್ನ ನಡೆಸುತ್ತಾನೆ.
ದಶರಥ (ಅರುಣ್ ಗೋವಿಲ್) ಪುತ್ರ ರಾಮ (ರಣಬೀರ್ ಕಪೂರ್)ನಿಗೆ ಪಟ್ಟಾಭಿಷೇಕ ಮಾಡಲು ಎಲ್ಲಾ ಸಿದ್ದತೆ ಮಾಡಿಕೊಂಡವ ಕೈಕೇಯಿ (ಲಾರಾ ದತ್ತ) ತನ್ನ ಮಗ ಭರತನಿಗೆ ಪಟ್ಟಕಟ್ಟುವ ಆಸೆ. ಅದಕ್ಕಾಗಿ ಆಕೆ ರಾಮನನ್ನು ವನವಾಸಕ್ಕೆ ಕಳುಹಿಸುತ್ತಾಳೆ. ರಾಮನನ್ನು ಪತಿ ಸೀತೆ (ಸಾಯಿ ಪಲ್ಲವಿ) ಹಿಂಬಾಲಿಸುತ್ತಾಳೆ. ಕಥೆ ಮತ್ತೊಂದು ಮಗ್ಗಲು ಪಡೆಯುತ್ತದೆ. ಅಲ್ಲಿಂದ ಮುಂದೇನು ಎನ್ನುವದನ್ನು ಚಿತ್ರದಲ್ಲಿ ನೋಡಬೇಕು.
ಜೊತೆಗೆ ನಟ ಯಶ್, ರಾವಣನಾಗಿ ಅಬ್ಬರಿಸಿ, ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ನಡೆ, ನುಡಿ ಹಾವ ಭಾವದ ಮೂಲಕ ತಾವೊಬ್ಬ ಶ್ರೇಷ್ಠ ಕಲಾವಿದ ಎನ್ನುವುದನ್ನು ಈ ಬಾರಿ ಜಗತ್ತಿಗೇ ಸಾರಿ ಹೇಳಿದ್ದಾರೆ, ರಾಮನಾಗಿ ರಣಬೀರ್ ಕಪೂರ್ ಸಹಜವಾಗಿ ನಟಿಸಿದ್ದು ಸಾಯಿ ಪಲ್ಲವಿ ಮುಗ್ದತೆಯಿಂದ ಗಮನ ಸೆಳೆದಿದ್ದಾರೆ.
ಲಕ್ಷ್ಮಣನಾಗಿ ರವಿ ದುಬೆ, ಹನುಮಂತನಾಗಿ ಸನ್ನಿ ಡಿಯೋಲ್, ದಶರಥನಾಗಿ ಅರುಣ್ ಗೋವಿಲ್,ಮಂಡೋದರಿಯಾಗಿ ಕಾಜಲ್ ಅಗರ್ವಾಲ್,ಶೂರ್ಪಣಖಿನಾಗಿ ರಕುಲ್ ಪ್ರೀತ್ ಸಿಂಗ್,ಕೈಕೇಯಿಯಾಗಿ ಲಾರಾ ದತ್ತಾ , ಕೌಸಲ್ಯೆಯಾಗಿ ಇಂದಿರಾ ಕೃಷ್ಣನ್ , ಕೈಕಸಿಯಾಗಿ ಶೋಭನಾ, ಮಂಥರೆಯಾಗಿ ಶೀಬಾ ಚಡ್ಡಾ ,ಸುಮಿತ್ರೆಯಾಗಿ ಸೋನಲ್ ಝಾ ಭರತನಾಗಿ ಅದಿನಾಥ್ ಕೊಠಾರೆ ಸೇರಿದಂತೆ ಹಲವರು ಚಿತ್ರದಲ್ಲಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ
ಮಹೇಶ್ ಲಿಮಯೆ, ಪಂಕಜ್ ಕುಮಾರ್, ಎ.ಆರ್ ರೆಹಮಾನ್ ಮತ್ತು ಹನ್ಸ್ ಜಿಮ್ಮರ್ ಸಂಗೀತ, ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.