ಚಂದನವನಕ್ಕೆ ಹೊಸ ಕಲಾವಿದರ ಆಗಮನವಾಗುತ್ತಿದೆ. ಈ ಸಾಲಿಗೆ ಹೊಸ ಮುಖ ಕಿಜರ್ ನಾಯಕನಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ನಿರ್ದೇಶಕ ಶ್ರೀನಿವಾಸ ಜಯರಾಮ್ ಆಕ್ಷನ್ ಕಟ್ ಹೇಳುತ್ತಿದ್ದು ನಿರ್ಮಾಪಕ ಮೊಹಮ್ಮದ್ ಅತೀಕ್ ಬಂಡವಾಳ ಹೂಡಿದ್ದಾರೆ.ಸಹ ನಿರ್ಮಾಪಕರಾದ ಮಧುಸೂದನ ಡಿಟಿ ಮತ್ತು ಟಿ ಕೃಷ್ಣಪ್ಪ ಕೈ ಜೋಡಿಸಿದ್ದಾರೆ
ಮುಹೂರ್ತದ ನಂತರ ಚಿತ್ರತಂಡ ಮಾತಿಗೆ ಕುಳಿತುಕೊಂಡರು ಈ ವೇಳೆ ಮಾತನಾಡಿದ ನಿರ್ದೆಶಕ ಶ್ರೀನಿವಾಸ ಜಯರಾಮ್ ಕ್ರೈಮ್ ಥ್ರಿಲ್ಲರ್ ಸಿನಿಮಾ, ವಿಶೇಷವಾಗಿ ಮಾಡಬೇಕು ಎನ್ನುವ ಉದ್ದೇಶದಿಂದ ಸಿನಿಮಾ ಕೈಗೆತ್ತಿಕೊಳ್ಳಲಾಗಿದೆ. ಚಿತ್ರಕಥೆಯನ್ನು 6 ವರ್ಷನ್ ನಲ್ಲಿ ಮಾಡಲಾಗಿದೆ. ಉತ್ತಮ ತಂತ್ರಜ್ಞರು ಇದ್ದಾರೆ. ಚಿತ್ರೀಕರಣ ಆರಂಭಿಸಲಾಗಿದ್ದು 44 ದಿನ ಮಾಡುವ ಉದ್ದೇಶಹೊಂದಿದೆ ಎಂದರು
ಬೆಂಗಳೂರು ಸುತ್ತಮುತ್ತ ಎರಡು ಹಂತಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಕ್ರೈಮ್ ಥ್ರಿಲ್ಲರ್ ಸಿನಿಮಾ ಆಗಿರುವುದರಿಂದ ಜನರಿಗೆ ಇಷ್ಟವಾಗಲಿದೆ ಎಂದು ಹೇಳಿದ್ದಾರೆ
ನಾಯಕ ಕಿಜರ್ ಮಾತನಾಡಿ ಗೆಲ್ಲಬೇಕು ಎನ್ನುವ ಉದ್ದೇಶ ಅದಕ್ಕಾಗಿ ಚಿತ್ರ ಮಾಡುತ್ತಿದ್ದೇನೆ ಎಂದರು
ನಾಯಕಿ ರೂಪಗೌಡ ಐದನೇ ಸಿನಿಮಾ, ಕಥೆ ಇಷ್ಟವಾಯಿತು. ತಿರುವು ಮೇಲೆ ಮೇಲೆ ತಿರುವು ಇದೆ. ತಂಡ ಚೆನ್ನಾಗಿದೆ ಬೆಂಬಲವಿರಲಿ ಎಂದರು
ಸಹ ನಿರ್ಮಾಪಕರಾದ ಮಧುಸೂದನ್ ಡಿಟಿ ಮತ್ತು
ಟಿ ಕೃಷ್ಣಪ್ಪ ಮಾತನಾಡಿ ಸರ್ಕಾರಿ ನ್ಯಾಯಬೆಲೆ ಅಂಗಡಿ ಚಿತ್ರದ ನಂತರ ಎರಡನೇ ಚಿತ್ರ. ಕಥೆ ಕೇಳಿಲ್ಲ ಉತ್ತಮ ಚಿತ್ರವಾಗುವ ವಿಶ್ವಾಸವಿದೆ ಎಂದು ಹೇಳಿದರು.
ಕಾಮಿಡಿ ಕಿಲಾಡಿ ಸಂತೂ ಮಾತನಾಡಿ ಸಿನಿಮಾ ಮಾಡಿ ಕೆಲವು ಬಿಡುಗಡೆ ಆಗಿಲ್ಲ ಸುಮ್ಮನೆ ನಟಿಸಿ ವ್ಯರ್ಥ ಪ್ರಯತ್ನ ಮಾಡುವುದು ಬೇಡ, ಹೀಗಾಗಿ ಒಳ್ಳೆಯ ಪ್ರಯತ್ನ ,ಒಳ್ಳೆಯ ಕಥೆ ಇರುವ ಕಥೆ ಮಾತ್ರ ಒಪ್ಪಿಕೊಳ್ಳುತ್ತೇನೆ ಎಂದು
ಕಲಾವಿದರಾದ ಸಿದ್ದೇಶ್,ಸೂರಜ್ ಮತ್ತಿತರರು ಚಿತ್ರದ ಪಾತ್ರದ ಬಗ್ಗೆ ಮಾಹಿತಿ ಹಂಚಿಜೊಂಡರು ಕಾಕ್ರೋಚ್ ಸುಧಿ ಸೇರಿದಂತೆ ಮತ್ತಿತರಿದ್ದಾರೆ.